Monday, February 28, 2011

ಹಸಿವು

ಇದು ನಡೆದ್ದದ್ದು ನಾನು ಹಿಂದಿನ ಕೆಲಸದಲ್ಲಿದಾಗ.  ನಾನು ಆಗ ಪರ್ಸನಲ್ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಿದ್ದೆ. ಎಲೆಕ್ಷನ್ ಬೇರೆ ಹತ್ತಿರದಲ್ಲಿತ್ತು, ಕೆಲಸವೂ ಹೆಚ್ಚು. ಹೀಗಾಗಿ ನನ್ನ ಬಾಸ್ ನನಗೆ ಒಬ್ಬ ಹುಡುಗನನ್ನು ಸಹಾಯಕನನ್ನಾಗಿ ನೇಮಿಸಿದ್ದರು. ಹೆಸರು ರಂಜಿತ್ ಅಂತ. ಮಂಡ್ಯ ಕಡೆಯ ಹುಡುಗ, ಮನೆಯಲ್ಲಿ ತುಂಬಾ ಕಷ್ಟ, ಬೆಳೆಗ್ಗೆ ಹೊತ್ತು ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುತ್ತಿದ್ದ. ಬಿ.ಕಾಂ ಓದುತ್ತಿದ್ದ . ಇಲ್ಲಿಗೆ ಸೇರುವ ಮುನ್ನ ಮೆಡಿಕಲ್  ಸ್ಟೋರ್ ಅಲ್ಲಿ  ಕೆಲಸ ಮಾಡುತ್ತಿದ್ದ. ಅವನ ವಯಸ್ಸಿಗೆ ತಕ್ಕಂತೆ ಅವನ ದೇಹವಿರಲಿಲ್ಲ, ಸರಿಯಾದ ಊಟ ಮತ್ತು ನಿದ್ರೆಗಳಿಲ್ಲದೇ ಸೊರಗಿ ಹೋಗಿದ್ದ. ಅವನ್ನನ್ನು ನನಗೆ ನೇಮಿಸಿದಾಗ ನನಗೆ ತುಂಬಾ ಕಸಿವಿಸಿಯಾಗಿತ್ತು. ದೈಹಿಕವಾಗಿ ದುರ್ಬಲವಾಗಿದ್ದರಿಂದ ಬರಿ ಲೆಕ್ಕ ಜಮ ಮಾಡುವ ಮತ್ತು ಸಣ್ಣ ಕೆಲಸಗಳನ್ನು ಮಾತ್ರ ಹೇಳುತ್ತಿದ್ದೆ. ವಿರಾಮದ ವೇಳೆಯಲ್ಲಿ ತನ್ನ ಓದಿನ ಬಗ್ಗೆ ಹೇಳುತ್ತಿದ್ದ. ಅವನ ಹತ್ತಿರ ಓಡಾಡಲು ಯಾವ ಗಾಡಿಯು ಇರಲಿಲ್ಲ  ಮತ್ತು ಅವನ ಮನೆ ನನ್ನ ಮನೆಗೆ ಹತ್ತಿರವಾಗಿತ್ತು,  ಹೀಗಾಗಿ ಅವನು ಯಾವಾಗಲು ನನ್ನ ಜೊತೆಗೆ ಇರುತ್ತಿದ್ದ. ಎಷ್ಟೇ ಕಷ್ಟವಿದ್ದರು ಕದಿಯುವ ಇಲ್ಲ ಸುಳ್ಳು ಹೇಳುವ ಬುದ್ದಿಯಿರಲಿಲ್ಲ. ಹೀಗಾಗಿ ಸ್ವಲ್ಪ ದಿನಗಳಲ್ಲೇ ಹತ್ತಿರವಾಗಿದ್ದ.

ಒಮ್ಮೆ ನಮ್ಮ ಬಾಸ್ ಒಂದು ದೊಡ್ಡ ಪಾರ್ಟಿಯನ್ನು ಏರ್ಪಡಿಸ್ಸಿದ್ದರು. ಸಂಜೆ ಪಾರ್ಟಿ ಶುರುವಾಗಿತ್ತು., ತುಂಬಾ ಜನ ಮತ್ತು ವಿವಿಧ ಬಗೆಯ ಊಟ, ನಾನ್ ವೆಜ್ ಸಹ ಇತ್ತು . ಇನ್ನು ಸಣ್ಣ ಹುಡುಗ ಊಟಗಳನ್ನು ನೋಡಿ  ಆಸೆ ಆಗಿದ್ದು ಅವನ ಮುಖದಲ್ಲಿ ಕಾಣುತಿತ್ತು. ಹೀಗಾಗಿ ನಾನು ಅವನಿಗೆ ಏನು ಬೇಕೋ ಅದನ್ನು ಹಾಕಿಕೊಂಡು ಹೋಗಿ ನೀನು ಊಟ ಮಾಡು ಎಂದೆ. ಅವನು ಸರಿಯಾಗಿ  ಊಟ ಮಾಡಿ ಎಷ್ಟು ದಿನಗಳಾಗಿದ್ದವೋ ಗೊತ್ತಿಲ್ಲ, ಸ್ವಲ್ಪ ಹೊತ್ತಾದ ಮೇಲೆ ಊಟವನ್ನು ಮುಗಿಸಿ ಬಂದ ಅವನ್ನು ಮನೆಗೆ ಕಳಿಸಿದೆ. 

ಮಾರನೆಯ ದಿನ ನನಗೆ ತುಂಬಾ ಕೆಲಸವಿದ್ದರಿಂದ ಅವನನ್ನು ಆಫೀಸಿನಲ್ಲಿ ಭೇಟಿಯಾಗದೆ ಮಧ್ಯದಲ್ಲಿ ಕೆಲಸವಿರುವ ಜಾಗದಲ್ಲಿ ಭೇಟಿ ಮಾಡಿದೆ.  ನೆನ್ನೆಯದನ್ನೇ   ನೆನಪಿಸಿಕೊಂಡು ರಾತ್ರಿ ಊಟ ಮಾಡಿದ್ದಕ್ಕೆ ಬೆಳೆಗ್ಗೆ ತಿಂಡಿಯೇ ಸೇರಿಲ್ಲ ಎಂದು ಹೇಳುತ್ತಿದ್ದ. ಹಠತ್ತಾಗಿ  ಒಮ್ಮೆಲೇ ಕುಸಿದು ಬಿದ್ದುಬಿಟ್ಟ, ಅಷ್ಟೇ ಅಲ್ಲದೆ ವಾಂತಿ ಮತ್ತು ತೀವ್ರವಾದ ತಲೆಸುತ್ತುಗಳು ಬಂದವು. ಅವನ್ನನ್ನು ಸರಿಯಾಗಿ ಪ್ರಜ್ಞೆಗೆ ತರಲೂ ಅರ್ಧಗಂಟೆ ಬೇಕಾಯಿತು, ಕೊನೆಗೆ ಅವನ ಮನೆಗೆ ಆಟೋ ಮಾಡಿ ಸ್ವಲ್ಪ ದುಡ್ಡು ಕೊಟ್ಟು ಕಳಿಸಿದ್ದಾಯಿತು. ಯಾಕೆ ಅವನಿಗೆ ಹೀಗೆ ಆಯಿತು ಅಂತ ಸ್ವಲ್ಪ ಸಮಯ ಆದ ಮೇಲೆ ತಿಳಿಯಿತು.  ಬೆಂಗಳೂರಿಗೆ  ಬಂದು ಸರಿಯಾದ ಊಟವಿಲ್ಲದೆ ಅವನ ಕರುಳು ಮತ್ತು ಹೊಟ್ಟೆ ಬತ್ತಿಹೊದಂತೆ ಆಗಿತ್ತು. ಹುಡುಗ ಊಟದ ಆಸೆಯಿಂದ  ಪಾಪ ರುಚಿಯಾಗಿರುವುದನೆಲ್ಲ ತಿಂದಿದ್ದ. ಆದರೆ ಆವನ ಹೊಟ್ಟೆ ಮತ್ತು   ಕರುಳಿಗೆ ಅದನ್ನ ಜೀರ್ಣ ಮಾಡುವ ಶಕ್ತಿ ತುಂಬಾ ಕಡಿಮೆ ಆಗಿ ಹೋಗಿತ್ತು.  ಊಟ ಮಾಡಿರದಿದ್ದರೆ ಆರಾಮವಾಗಿ ಇರುತ್ತಿದ್ದನೋ ಗೊತ್ತಿಲ್ಲ ಆದರೆ ಊಟ  ಮಾಡಿದ  ಪರಿಣಾಮ ಜಾಸ್ತಿ ಇತು. ಸ್ವಲ್ಪ ದಿನಗಳಾದ ಮೇಲೆ ತನಗೆ ಓಡಾಟದಿಂದ ತುಂಬ ಸುಸ್ತಾಗುತ್ತದೆ ಎಂದು ಕೆಲಸವನ್ನು ಬಿಟ್ಟ. ಸ್ವಲ್ಪ ದಿನಗಳು ಅವನ ಜೊತೆ ಸಂಪರ್ಕ ಇತ್ತು. ಆಮೇಲೆ ನಾನು ನನ್ನ ಕೆಲಸವನ್ನು ಬದಲಾಯಿಸಿದ ಮೇಲೆ ಸಂಪರ್ಕ ಹೊರಟು ಹೋಯಿತು. ಅವನ ಮನೆ ಇಲ್ಲೇ ಹನುಮಂತ ನಗರದಲ್ಲಿ ಎಲ್ಲೋ ಬರುತ್ತದೆ. ಒಮ್ಮೆ ಮಾತ್ರ ಅವನ ಮನೆ ನೋಡಿದ್ದೆ. ಈಗಲೂ ಎಲ್ಲಾದರೂ ಸಿಗುತ್ತಾನೇನೋ  ಎಂಬ ಆಶಯದಿಂದ ಅವನನ್ನು ಹುಡುಕುತ್ತಿದ್ದೇನೆ. ದೇವರ ದಯೆ ಅವನ ಮೇಲೆ ಇದ್ದು ಈ ಹೊತ್ತಿಗೆ ಅವನ ಓದು ಮುಗಿದು ಒಳ್ಳೆಯ ಕೆಲಸದಲ್ಲಿ  ಇರಬಹುದು ಎಂಬ ಆಶಯ ಒಂದೇ ಈಗ ಉಳಿದಿರುವುದು.

2 comments:

  1. odi feel aytu chinmaya.. :(

    i wish him all the best in life...

    ReplyDelete
  2. ಇದೆ ರೀತಿ ಎಷ್ಟೋ ಜನ ನಮ್ಮ ದೇಶದಲ್ಲಿ ಈ ಥರ ಕಷ್ಟ ಪಡುತ್ತಿದ್ದಾರೆ ಅಲ್ಲವೇ?

    ReplyDelete