Sunday, August 30, 2015

Fruit Bat (ಹಣ್ಣುಗಳನ್ನು ತಿಂದು ಬದುಕುವ ಬಾವಲಿ )

ನಮಗೆ ಗೊತ್ತಿರುವ ಹಾಗೆ ಪ್ರಾಣಿ, ಪಕ್ಷಿಗಳು ,ಕೀಟಗಳು ಇತರ ಜೀವಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ತುಂಬಾ ಅವಲಂಬಿತವಾಗಿರುತ್ತದೆ. ಇದರಲ್ಲಿ ಏನೇ ಸಣ್ಣ ಪುಟ್ಟ ವ್ಯತ್ಯಾಸವಾದರೂ ಅವುಗಳ ಜೀವನ ಕ್ರಮದಲ್ಲೂ ತುಂಬಾ ವ್ಯತ್ಯಾಸವುಂಟಾಗುತ್ತದೆ.
ಈಚೆಗೆ ಹಣ್ಣುಗಳನ್ನು ತಿಂದು ಬದುಕುವ ಬಾವಲಿಗಳ ಬಗ್ಗೆ ಸ್ವಲ್ಪ ತಿಳಿಯುವ ಅವಕಾಶ ಸಿಕ್ಕಿತು. ಇವುಗಳು ಬಾವಲಿಗಳ ಜಾತಿಗೆ ಸೇರಿದರು ಇವುಗಳಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಸಣ್ಣ ಕಿವಿಗಳು, ಪುಟ್ಟ ದೇಹ ,ದೊಡ್ಡ ಕಣ್ಣುಗಳು ಇವುಗಳಿಗೆ ಇವೆ. ಇದು ಕಣ್ಣುಗಳನ್ನು ಕೂಡ ಉಪಯೋಗಿಸುವುದು ವೈಶಿಷ್ಟ್ಯ . ಇವುಗಳು ಪ್ರಧಾನ ಆಹಾರ ಹಣ್ಣುಗಳು ಆಗಿರುವುದರಿಂದ ಇವುಗಳಿಗೆ "ಫ್ರೂಟ್ ಬ್ಯಾಟ್" ಎಂಬ ಹೆಸರಿದೆ.
ನಮ್ಮನೆಯ ಪಕ್ಕದಲ್ಲಿದ ಎರಡು ಹಳೆ ತೆಂಗಿನ ಮರಗಳನ್ನು ಕಡಿದರು. ಅದರಲ್ಲಿ ವಾಸಿಸುತ್ತಿದ ಬಾವಲಿಗಳು ಪಕ್ಕದಲಿದ್ದ ಬೇರೆ ಮರಗಳು , ಖಾಲಿ ಮನೆಗಳ ಸೂರಿನಲ್ಲಿ ಸೇರಿಕೊಂಡವು. ಹೀಗೆ ಒಂದು ಸಣ್ಣ ಬಾವಲಿ ನಮ್ಮ ಮನೆಯಲ್ಲೂ ಬಂದು ಸೇರಿಕೊಂಡಿದೆ. ದಿನ ಸಾಯಂಕಾಲ ಆದರೆ ಒಂದು ನಿರ್ದಿಷ್ಟ ಸಮಯದಲ್ಲಿ ಬಂದು ಮನೆಯ ಒಳಗೆ ಒಂದು ಸುತ್ತು ಹಾಕಿ ಹೊರಟು ಹೋಗುತ್ತದೆ . ಆಮೇಲೆ ಒಂದಷ್ಟು ಹಣ್ಣುಗಳನ್ನು ತಂದುನಮ್ಮ ಪೊರ್ಟಿಕೊ ಅಲ್ಲಿ ನೇತುಹಾಕಿಕೊಂಡು ಅವುಗಳನ್ನು ತಿನ್ನುತ್ತದೆ. ಖಾಲಿ ಆದಮೇಲೆ ಮತ್ತೆ ಪುನಾರಾವರ್ತನೆ. ಮೊದಲು ಬರೀ ಹಣ್ಣುಗಳನ್ನು ತಿಂದು ಹೋಗುತ್ತಿದ್ದ ಅದು ನೆನ್ನೆ ಇಂದ ಅದೇ  ಜಾಗದಲ್ಲಿ ನಿದ್ದೆ ಮಾಡಲು ಶುರು ಮಾಡಿದೆ . ನಮ್ಮ ಇರುವು ಅದಕ್ಕೆ ಏನೂ ವ್ಯತ್ಯಾಸಮಾಡಿರುವ ಹಾಗೆ ಕಾಣುತ್ತಿಲ್ಲ .
ಇಲ್ಲಿಯ ತನಕ ಯಾವುದೇ ನಿಶಾಚರಿ ಪ್ರಾಣಿಯ ಪಕ್ಷಿಯ ಬಗ್ಗೆ ನನಗೆ ಯಾವುದೇ ತರಹ ಚಿತ್ರಗಳು ತೆಗೆಯಲು ಇಲ್ಲ ಅಭ್ಯಾಸ ಮಾಡಲು ಸಿಕ್ಕಿರಲಿಲ್ಲ. ಹಾಗಾಗಿ ಇದು ನನಗೆ ಒಂದು ಥರಃ ಸಂತೋಷವಾಯಿತು , ಈ ಸಣ್ಣ ಪ್ರಾಣಿಯ ಬಗ್ಗೆ ತಿಳಿದುಕೊಳ್ಳಲು .

ಆದರು ಒಂದು ಸಣ್ಣ ಭಯ ಮೊದಲು ಇತ್ತು  ಎಲ್ಲಿ ನಾನು ಚಿತ್ರ ತೆಗೆಯಬೇಕಾದರೆ ಕ್ಯಾಮೆರಾ ಶಬ್ದದಿಂದ ಇಲ್ಲ ನಮ್ಮ ಇರುವಿನಿಂದ ಅದು ಹಾರಿ ಹೋಗಬಹುದೆಂದು. ಅದಕ್ಕೆ ಅದು ತಿನ್ನಲು ಶುರು ಮಾಡಿದ ಮೇಲೆ ಚಿತ್ರ ತೆಗೆಯಲು ಹೊಗುತ್ತಿದೆ. ಆಗ ಅದು ಹಾರಿ ಹೋಗದೆ ಪೂರ್ತಿ ತಿಂದಾದ ಮೇಲೆ ಹೊಗುತಿತ್ತು. ಅದು ಮಲಗಿದಾಗೆ ಥೇಟ್ ಮುದುರಿದ ಎಲೆ ತರಹ ಕಾಣುತ್ತಿತ್ತು .
ಬಾವಲಿಗುಳು ಕೂಡ ಒಂದು ಸುಂದರ ಪ್ರಾಣಿ . ನಾಲಗೆ ರಾತ್ರಿಯಲ್ಲೂ ಕೂಡ ತುಂಬಾ ಕೆಂಪಾಗಿ ಕಾಣುತ್ತದೆ ಹಾಗು ಉದ್ದ ವಾಗಿರುತ್ತದೆ. ಅವುಗಳ ಕಾಲಿನಲ್ಲಿರುವ ಕೊಕ್ಕೆ ಅಂತ ವಸ್ತುವಿನಿಂದ ಅದು ಸಣ್ಣ ಬಿರುಕಿನಲ್ಲು ಆರಾಮವಾಗಿ ಜೋತು ಬೀಳುತ್ತವೆ. ಆಮೇಲೆ ಅದೇ ಕೊಕ್ಕೆ ವಸ್ತುವಿನಿಂದ ತಿನ್ನಲು ಉಪಯೋಗಿಸುವುತ್ತದೆ. ಆದರೆ ಆಶ್ಚರ್ಯ ಎಂದರೆ ಮೂರು ನಾಲ್ಕು 
ಹಣ್ಣುಗಳನ್ನು ಹೇಗೆ ಹೊತ್ತು ತರುತ್ತಿತು ಎನ್ನುವುದೇ ಆಶ್ಚರ್ಯ . ನನಗದು ಇಲ್ಲಿಯ ತನಕ ತಿಳಿದಿಲ್ಲ. ಅದನ್ನು ತಿಳಿಯುವುದು ಬಾಕಿ ಇದೆ. ಯಾರಿಗಾದರು ಹೆಚ್ಚಿಗೆ ಮಾಹಿತಿ ಇದ್ದರೆ ತಿಳಿಸಬಹುದು











No comments:

Post a Comment