ಸಂಕ್ರಮಣದ ಹಬ್ಬ ಆಗಿ ಮಾತಾಡುತ್ತ ಕುಳಿತ್ತಿದ್ದೆವು. ಇನ್ನು ಒಂದು ದಿನ ರಜೆ ಬಾಕಿ ಇದ್ದರಿಂದ ಎಲ್ಲಿಗಾದರೂ ಹೋಗಬೇಕು ಎಂದು ಯೋಚಿಸಿ ,ವರದಹಳ್ಳಿ , ವರದಾಮೂಲ, ಇಕ್ಕೇರಿಗೆ ಹೋಗಬಹುದೆಂದು ತೀರ್ಮಾನಿಸಿದೆವು. ಪ್ರವಾಸವು ಚೆನ್ನಾಗಿತ್ತು. ಅದರ ಸ್ವಲ್ಪ ವಿವರಣೆ ನಿಮ್ಮ ಮುಂದೆ.
ಈ ಮೇಲೆ ಹೇಳಿದ ಸ್ಥಳಗಳು ಶಿವಮೊಗ್ಗದ ಸಾಗರ ಊರಿನ ಅಕ್ಕ ಪಕ್ಕದಲ್ಲಿದೆ. ಸಾಗರ ಇವುಗಳಿಗೆಲ್ಲ ಮುಖ್ಯ ಪ್ರದೇಶ.
 |
ಶ್ರೀಧರ ಆಶ್ರಮದ ದಾರಿ |
ವರದಹಳ್ಳಿ: ಇದು ಸಾಗರದಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀಧರ ಸ್ವಾಮಿಜಿಗಳ ಆಶ್ರಮವಿದೆ. ಶ್ರೀಧರ ಸ್ವಾಮಿಗಳು ಲೋಕಕಲ್ಯಾಣಕ್ಕಾಗಿ ತಪಸ್ಸು, ಸೇವೆಗಳನ್ನೂ ಮಾಡಿ ಜೀವಂತ ಸಮಾಧಿ ಆದ ಸ್ಥಳ ಇದು . ಆಶ್ರಮವು ಸುಂದರವಾಗಿಯೂ ಮತ್ತು ವಿಶಾಲವಾಗಿಯು ಇದೆ. ಆಶ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ, ಭಕ್ತಾದಿಗಳಿಗೆ ಊಟದ ವ್ಯವಸ್ತೆ, ಗೋಪಾಲನೆ ಮುಂತಾದ ಕೆಲಸಗಳು ನಡೆಯುತ್ತವೆ. ಅಷ್ಟೇ ಅಲ್ಲದೆ ಇಲ್ಲಿ ಇರುವ ಶ್ರೀಧರ ತೀರ್ಥವೂ ಔಷಧೀಯ ಗುಣವನ್ನು ಹೊಂದಿದ್ದು ಹಲವು ತರಹದ ಚರ್ಮದ ಕಾಯಿಲೆಗಳು, ಉಳುಕುಗಳು ಮುಂತಾದುವುಗಳನ್ನು ಗುಣಪಡಿಸುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಲು ಜನರು ದೂರದ ಪ್ರದೇಶಗಳಿಂದ ಬರುತ್ತಾರೆ. ಈ ನೀರು ಕಾಡುಗಳಿಂದ ಹರಿದುಬರುವುದರಿಂದ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಆಶ್ರಮವು ವಿಸ್ಥಾರವಾಗಿದ್ದು, ಪ್ರಶಾಂತವಾಗಿದೆ. ಹಲವು ತರಹದ ಮರಗಳನ್ನು ಒಳಗೊಂಡಿರುವುದರಿಂದ ವಾತಾವರಣವು ತಂಪಾಗಿದೆ. ಆಶ್ರಮದ ಒಳಗೆ ಎರಡು ಮೂರು ಅಂಗಡಿಗಳು ಇದ್ದು ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೆ ಶ್ರೀಧರ ತೀರ್ಥದ ನೀರು ತುಂಬಿಸಿಕೊಳ್ಳಲು ಪ್ಲಾಸ್ಟಿಕ್ ಡಬ್ಬಗಳು ಸಿಗುತ್ತವೆ. ಸಾಗರದಿಂದ ಇಲ್ಲಿಗೆ ಬರಲು ಬಸ್ಸುಗಳು ಇದೆ. ಬಸ್ಸುಗಳು ಸಿಗದೇ ಇದ್ದರೆ 70 ರಿಂದ 80 ರುಪಾಯಿಗೆ ಆಟೋಗಳು ಸಿಗುತ್ತವೆ. ಬೆಟ್ಟದ ಮೇಲೆ ಶ್ರೀಧರ ಸ್ವಾಮಿಗಳ ಜೀವಂತ ಸಮಾಧಿ ಇದೆ. ಬೆಟ್ಟದ ಮೇಲೆ ಮುಂದುವರಿದರೆ ಒಂದು ಸ್ತೂಪವು ಸಿಗುತ್ತದೆ. "ಅಮೃತಘಳಿಗೆ" ಚಿತ್ರದ ಚಿತ್ರೀಕರಣವು ಇಲ್ಲಿ ಆಗಿತ್ತು.
 |
ಶ್ರೀಧರ ಸ್ವಾಮಿಗಳ ಪ್ರತಿಮೆ |
 |
ಇಲ್ಲಿ ಇರುವ ಹಸುಗಳೆಲ್ಲ ಲಲ್ಲಿಗುಳಿಗಳು |
 |
ಲಲ್ಲಿಗುಲ್ಲಿ ಗೂಳಿ |
 |
ಕಲ್ಯಾಣಿ |
 |
ಶ್ರೀಧರ ತೀರ್ಥ |
 |
ಬೆಟ್ಟದ ಮೇಲಿನಿಂದ .... |
 |
ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ದಾರಿ |
 |
ದೇವಸ್ಥಾನ |
 |
ಬೆಟ್ಟದ ಮೇಲಿನಿಂದ ....... |
|
|
ಇಕ್ಕೇರಿ : ಇಕ್ಕೆರಿಯು ಶತಕಗಳಿಂದ ಇತಿಹಾಸ ಪ್ರಸಿದ್ದ ದೇವಸ್ತಾನವಾಗಿದ್ದು ಸಾಗರದಿಂದ 15 -16 ಕೀ.ಮೀ ದೂರವಿದೆ. ಇಲ್ಲಿ ಅಘೋರೇಶ್ವರ ದೇವಸ್ಥಾನವಿದೆ. ತುಂಬಾ ಹಳೆಯ ದೇವಸ್ತಾನವಾದರು ಸುಂದರವಾಗಿಯೂ ಮತ್ತು ವಿಶಾಲವಾಗಿದೆ. ದೇವಸ್ಥಾನವು ಸುಂದರವಾದ ಕೆತ್ತನೆಗಳನ್ನು ಒಳಗೊಂಡಿದೆ. ದೇವಸ್ಥಾನವು ಪೀಠದ ಮೇಲೆ ಇದ್ದು ಮೂರು ಕಡೆಗಳಲ್ಲೂ ದ್ವಾರಗಳನ್ನು ಹೊಂದಿದೆ. ಇಷ್ಟು ಕಾಲವಾದರು ದೇವಸ್ತಾನವು ಹೆಚ್ಚು ಹಾಳಾಗದೆ ಇರುವುದು ವಿಶೇಷ, ಇಲ್ಲಿ ಇರುವ ಅಘೋರೇಶ್ವರ ದೇವಸ್ಥಾನವು ವಿಶೇಷವಾಗಿದೆ. ಬೇರೆ ದೇವಸ್ಥಾನಗಳಲ್ಲಿ ಶಿವ ಲಿಂಗವು ಬಲಕ್ಕೆ ಇದ್ದರೆ ಇಲ್ಲಿ ಅದು ಎಡ ಭಾಗಕ್ಕೆ ತಿರುಗಿದೆ. ಅಷ್ಟೇ ಅಲ್ಲದೆ ಶಿವಲಿಂಗದ ಮುಂದುಗಡೆ ಒಂದು ಅಮೃತಶಿಲೆಯ ನಂದಿಯು ಕೂಡ ಇದ್ದು , ಇದರ ಒಂದು ಕಡೆ ಬೆಳಕನ್ನು ಬಿಟ್ಟರೆ ಇನ್ನೊಂದು ಕಡೆ ಇಂದ ಹಾದು ಬರುತ್ತದೆ. ದೇವಸ್ತಾನದ ಮುಂದುಗಡೆ ಒಂದು ದೊಡ್ಡ ಮತ್ತು ಸುಂದರವಾದ ನಂದಿಯ ಪ್ರತಿಮೆ ಇದೆ. ಅಘೋರೇಶ್ವರ ದೇವಸ್ಥಾನದ ಒಳಗಡೆ ಗಣಪತಿ, ಷಣ್ಮುಖ ಮುಂತಾದ ದೇವರುಗಳು ಇವೆ. ದೇವಸ್ಥಾನದ ಹೊರಗೆ ಇರುವ ಸುಂದರ ಕೆತ್ತನೆಗಳು ದೇವಸ್ಥಾನದ ಒಳಭಾಗದಲ್ಲೂ ಇದೆ. ಶಿವದ ಲಿಂಗದ ಮುಂದೆ ನಿಂತು ಚಾವಣಿಯನ್ನು ನೋಡಿದರೆ ಸುಂದರವಾದ ನಾಗರ ಶಿಲ್ಪಗಳು ಕಾಣುತ್ತವೆ. ದೇವಸ್ಥಾನದ ಒಳಗೆ ವಾತಾವರಣವು ತುಂಬಾ ತಂಪಾಗಿದೆ. ಹೊರಗಡೆ ಬಿಸಿಲಿನಿಂದ ಬಂದು ಇಲ್ಲಿ ಕೂತರೆ ಹೊರ ಹೋಗಲು ಮನಸೇ ಆಗುವುದಿಲ್ಲ.
 |
ಅಘೋರೇಶ್ವರ |
ಅಘೋರೇಶ್ವರನಿಗೆ ಎಡಕ್ಕೆ ಬಲಕ್ಕೆ ಇರುವ ಕಾವಲು |
|
|
|
|
|
|
|
|
|
|
|
ದೇವಸ್ಥಾನದ ಒಳಗಡೆ ಇರು ಇತರ ದೇವರುಗಳು
 |
ಷಣ್ಮುಖ |
 |
ಕಾಳಿ |
 |
ಗಣಪತಿ |
|
|
|
|
|
|
ದೇವರಿಗೆ ಅಭಿಷೇಕ ಮಾಡಿದಾಗ ನೀರು ಹೊರಗೆ ಹೋಗಲು ತೀರ್ಥದ ತರಹ ದಾರಿ ಮಾಡಿರುತ್ತಾರೆ, ನಾನು ಎಲ್ಲ ದೇವಸ್ಥಾನದಲ್ಲೂ ನೋಡಿದ್ದೇನೆ. ಆದರೆ ಇಲ್ಲಿ ಮಾತ್ರ ನಾನು ಇಷ್ಟು ದೊಡ್ಡದಾದ ತೀರ್ಥವನ್ನು ನೋಡಿದ್ದು.
ದೇವಸ್ಥಾನವು ಎತ್ತರವಾಗಿದ್ದು, ಹಿಂಭಾಗದಿಂದ ಈ ರೀತಿ ಕಾಣುತ್ತದೆ.
ಅಘೋರೇಶ್ವರ ದೇವಸ್ಥಾನದ ಸುತ್ತಲು ಇರುವ ಕುಸುರಿ ಕೆತ್ತನೆಗಳು
ಅಘೋರೇಶ್ವರ ದೇವಸ್ಥಾನದ ಬಲಭಾಗದಲ್ಲಿ ಅಕ್ಹಿಲಾನ್ಧೆಶ್ವರಿ ದೇವಸ್ತಾನವು ಇದೆ. ಅಕ್ಹಿಲಾನ್ದೆಶ್ವರಿಯ ಮೂರ್ತಿಯು ಸುಂದರವಾಗಿದ್ದು , ಪ್ರಾಂಗಣದಲ್ಲಿ ಕಲ್ಲಿನ ಸೋಪಾನ ಕಟ್ಟೆಯನ್ನು ಹೊಂದಿದೆ.
 |
ಅಕ್ಹಿಲಾಂದೆಶ್ವರಿ ದೇವಸ್ಥಾನ |
 |
ಕಲ್ಲಿನ ಸೋಪಾನ ಕಟ್ಟೆ |
 |
ನಂದಿಯ ದೇವಸ್ಥಾನ |
ದೇವಸ್ಥಾನದ ಮುಂದೆ ಇರುವ ನಂದಿ
 |
ನಂದಿ |
ಬರುವ ಪ್ರವಾಸರಿಗೆ ಇಲ್ಲಿ ಸಿಹಿ ನೀರಿನ ಕುಡಿಯುವ ವ್ಯವಸ್ತೆಯು ಇದೆ. ಆಹಾರವನ್ನು ಕೊಳ್ಳಲು ಇಲ್ಲಿ ಯಾವ ಅಂಗಡಿಯು ಸಿಗುವುದಿಲ್ಲ. ಹಾಗಾಗಿ ಮೊದಲೇ ತೆಗೆದುಕೊಂಡು ಹೋದರೆ ಸೂಕ್ತ.
ವರದಾಮೂಲ: ಇದು ವರದಾ ನದಿಯು ಹುಟ್ಟುವ ಸ್ಥಳ. ಸಾಗರದಿಂದ ಬಂದರೆ ಎರಡು ರಸ್ತೆಗಳು ಹೋಗುತ್ತದೆ. ಒಂದು ಇಕ್ಕೆರಿಯ ಕಡೆಗೆ ಇನ್ನೊಂದು ವರದಾಮೂಲಕ್ಕೆ. ಇಕ್ಕೇರಿ ಇಂದ ಇದು 5 ಕಿ.ಮೀ ದೂರವಿದೆ. ಸಣ್ಣ ಕಲ್ಯಾಣಿಯಲ್ಲಿ ಹುಟ್ಟುವ ವರದಾ ನದಿಯು ಅದರ ಬಲಭಾಗಕ್ಕೆ ಇರುವ ದೊಡ್ಡ ಕಲ್ಯಾಣಿಗೆ ಹರಿದು ಅಲ್ಲಿಂದ ಅದು ವರದಾ ನದಿಯಾಗಿ ಹರಿಯುತ್ತದೆ.ಒಂದು ಕಾಲದಲ್ಲಿ ವೈಭವದಿಂದ ಕೂಡಿದ ಇದು ಈಗ ಅಲಕ್ಷ್ಯಕ್ಕೆ ಗುರಿಯಾಗಿದೆ. ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ಮಾತ್ರ ಪೂಜೆ ನಡೆಯುತ್ತದೆ.
 |
ವರದಾ ನದಿಯು ಹುಟ್ಟುವ ಸ್ಥಳ, ಬಲಭಾಗದಿಂದ ನೀರು ಹೊರಹೋಗುತ್ತದೆ |
|
 |
ನೀರು ಸೇರುವ ದೊಡ್ಡ ಕಲ್ಯಾಣಿ | | |
ಜೋಗ: ನಮ್ಮ ಪ್ರವಾಸ ಕೊನೆಗೊಂಡಿದ್ದು ಜೋಗದಲ್ಲಿ. ಇದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ, ಎಲ್ಲರಿಗೂ ಚಿರ ಪರಿಚಿತವಾಗಿರುವ ಸ್ಥಳ ಇದು. ಹೊರದೇಶದ ಯಾತ್ರಿಕನೊಬ್ಬ ಸುಶ್ರಾವ್ಯವಾಗಿ ಕೊಳಲ್ಲನ್ನು ನುಡಿಸುತ್ತ ನಿಂತಿದ್ದು ನನಗೆ ತುಂಬಾ ಇಷ್ಟವಾಯಿತು.
ಈ ಎಲ್ಲ ಸ್ಥಳಗಳು ನೋಡಲು ಸುಂದರವಾಗಿಯೂ ಮತ್ತು ಒಂದಕ್ಕೊಂದು ಹತ್ತಿರವಾಗಿಯು ಇದೆ. ಆಟೋದ ದರಗಳು ಯದ್ವಾ ತದ್ವಾ ಹೇಳುವುದರಿಂದ ಖಾಸಗಿ ವಾಹನವನ್ನು ಮಾಡಿಕೊಂಡು ಹೋಗುವುದು ಒಳ್ಳೆಯದು ಮತ್ತು ನಿಮ್ಮ ಸಮಯವೂ ಕೂಡ ಉಳಿಯುತ್ತದೆ.