Saturday, February 26, 2011

ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಕನ್ನಡ ಸಾಹಿತ್ಯ ಕಂಡ ಅಪರೂಪದ ಮತ್ತು ವಿಶಿಷ್ಟತೆಯಿಂದ ಕೂಡಿದ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು. ಅವರ ಕೃತಿಗಳು, ವಿವರಿಸುವ ರೀತಿ ಎಲ್ಲ ವಿಶಿಷ್ಟ . ಸರಳ ಭಾಷೆಯಲ್ಲಿ ಎಲ್ಲರಿಗೂ ತಿಳಿಸುವಂತಹ ಚಾಕ್ಯಚಕ್ಯತೆ ಅವರಲಿತ್ತು. ಅದಕ್ಕೆ ಸಾಕ್ಷಿ ಅವರು ಬರೆದ ಕೃತಿಗಳು ಇನ್ನು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದು . ಈ ಸಾರಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಯಾರ ಪುಸ್ತಕಗಳು ಮಾರಾಟವಾಗದಿದ್ದರು ಇವರ ಕೃತಿಗಳು ಮಾತ್ರ ಹೆಚ್ಚು ಮಾರಾಟವಾಗುತ್ತಿದ್ದವು. ನಾನು ನನ್ನ ಸ್ವಂತ ಜೀವನದಲ್ಲೂ ಇದನ್ನು ಕಂಡಿದ್ದೇನೆ. ಒಮ್ಮೆ ರೈಲಿನಿನಲ್ಲಿ ಊರಿಗೆ ಹೋಗಬೇಕಾದರೆ ಒಬ್ಬರು ಹಿರಿಯ ಗಣಕ ತಂತ್ರಜ್ಞ ತೇಜಸ್ವಿಯವರ ಪುಸ್ತಕದ ದೆಸೆಯಿಂದಲೇ ಪರಿಚಯವಾಗಿ ಹತ್ತಿರವಾದರು. ಇವತ್ತು ಕೂಡ ಹೀಗೆ ಆಯಿತು. ತೇಜಸ್ವಿಯವರ "ಜೀವನ ಸಂಗ್ರಾಮ- ಮಿಲೀನಿಯಂ -೨" ಪುಸ್ತಕವನ್ನು ಬಸ್ಸಿನಲ್ಲಿ ಓದಿಕೊಂಡು ಬರುತ್ತಾ ಇದ್ದೆ. ಆಗ ಒಂದು ಹುಡುಗಿ "ಇದು ತೇಜಸ್ವಿಯವರ ಪುಸ್ತಕ ಅಲ್ವ?" ಎಂದು ಕೇಳಿ ಅದರ ಬಗ್ಗೆ ಮಾಹಿತಿ ಕೇಳಿದರು. ಅವರ ಹಿಂದಿನಿಂದ ಬಂದ ಅವರ ತಂದೆಯು ಪುಸ್ತಕದ ವಿವರಣೆಗಳನ್ನು ಕೇಳಿ , ಸ್ವಲ್ಪ ಸಮಯ ಓದಿ ಕೊಡುವುದಾಗಿ ಕೇಳಿದರು. ಓದುವ ಮಧ್ಯದಲ್ಲಿ ತಮ್ಮ ಮಾತ್ರುಭಾಷೆ ಆದ ತೆಲುಗಿನಲ್ಲಿ ಮಾತನಾಡುತ್ತ ತೇಜಸ್ವಿಯವರ ಬಗ್ಗೆ ಮತ್ತು ಪುಸ್ತಕದ ಬಗ್ಗೆ ಮಾತನಾಡುತ್ತಿದ್ದರು. ಕೊನೆಯಲ್ಲಿ ಇಳಿಯುವಾಗ ತಮ್ಮ ಪರಿಚಯ ಮಾಡಿಕೊಂಡು ತಾವು s .b .i ಅಲ್ಲಿ ಮ್ಯಾನೇಜರ್ ಎಂದು ಯಾವಾಗ ಬೇಕಾದರೂ ಏನಾದರು ಸಹಾಯ ಬೇಕಾದರೆ ಬರಬಹುದು ಎಂದರು. ಮುಂದೆ ಸ್ವಲ್ಪ ಹೊತ್ತಿನಲ್ಲಿ ಅವರು ಕೆಲಸ ಮಾಡುತ್ತಿರುವುದು ನಮ್ಮ ಆಫೀಸಿನ ಪಕ್ಕದಲ್ಲಿ ಎಂದು ಗೊತ್ತಾಯಿತು. 

ನಮ್ಮ ವಿಚಾರ ಏನೇ ಆದರು ಇಲ್ಲಿ ಮುಖ್ಯ ವಿಚಾರವೆಂದರೆ ತೇಜಸ್ವಿಯವರು ಛಾಪು ಮೂಡಿಸಿರುವ ರೀತಿ ಮತ್ತು ಅವರ ಬರವಣಿಗೆಯಲ್ಲಿ ಇರುವ ಸಮ್ಮೋಹನ ಶಕ್ತಿ. ಬರಿ ಕನ್ನಡ ಓದುವುರಲ್ಲದೆ ಬೇರೆಯವರನ್ನು ಸೆಳೆದಿರುವುದು ವಿಶೇಷ. ಇಂತಹ ಸಾಹಿತಿ ನಮ್ಮ ಮಧ್ಯ ಇಲ್ಲ ಅನ್ನುವುದೇ ಒಂದು ವಿಷಾದದ ವಿಚಾರ. ಅವರ ಪುಸ್ತಕದ ದೆಸಿಯಿಂದಲೇ ಅಪರಿಚತರು ನಮಗೆ ಪರಿಚಯವಾಗಿಬಿಡುತ್ತಾರೆ, ಅಂತಹದರಲ್ಲಿ ಆ ಮಹಾನ್ ಸಾಹಿತಿಗೆ ಎಷ್ಟು ಜನ ಪರಿಚಯವಿದ್ದರೋ!!. ಇಂಥಹ ಲೇಖಕರು ಇನ್ನು ಹೆಚ್ಚು ಕನ್ನಡ ಸಾಹಿತ್ಯದಲ್ಲಿ ಬರಬೇಕು.

3 comments:

  1. ಸರ್,
    ತೇಜಸ್ವಿಯವರು ಬದುಕಿನ ರೀತಿಗೆ ಮತ್ತು ಬರಹಕ್ಕೆ ಆ ಶಕ್ತಿಯಿದೆ. ನಾನು ಇವತ್ತಿಗೂ ಬೇಸರವಾದರೆ ಅವರ ಅಲೆಮಾರಿ ಅಂಡಮಾನ್ ಓದುತ್ತೇನೆ...

    ReplyDelete
  2. ನಿಮ್ಮ ಮಾತು ನಿಜ ಶಿವೂ ಸರ್

    ReplyDelete
  3. Poornachandra Tejaswi is the only writer who should be awarded Jnaanapeeta Award immediately because, he would not have accepted the award when he was alive.

    ReplyDelete