ಈಗ ವಿವರಿಸಲು ಹೊರಟಿರುವ ಪ್ರಾಣಿ ಪಕ್ಷಿಗಳು, ಗೆರಾಲ್ಡ್ ಡುರೆಲ್ ಅವರು ತಮ್ಮ " ತ್ರೀ ಟಿಕೆಟ್ಸ್ ಟು ಅಡ್ವೆಂಚರ್" ಪುಸ್ತಕದಲ್ಲಿ ಹೇಳಿರುವ ಪ್ರಾಣಿಗಳು. ಈ ಪುಸ್ತಕವನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಲ್ಲೇನಿಯಂ-16 ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಒಳ್ಳೆಯ ವಿಷಯಗಳನ್ನು ಮತ್ತು ನಾವು ಕಾಣದೆ ಕೇಳದೆ ಇರುವ ಪ್ರಾಣಿ-ಪಕ್ಷಿಗಳ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ಗಯಾನಾದ ನಿಸರ್ಗ ಸಂಪನ್ಮೂಲಗಳ ಬಗ್ಗೆಯೂ ವಿವರಿಸಲಾಗಿದೆ. ಅದರಲ್ಲಿ ಬರುವ ಪ್ರಾಣಿಗಳ ಬಗ್ಗೆ ಒಂದು ಸಣ್ಣ ಇಣುಕು ನೋಟ.
ಪಿರಾನ್ಹ ಮೀನು: ಈ ಮೀನುಗಳು ಗಯಾನಾದ ನೀರುಗಳಲ್ಲಿ ಕಾಣಸಿಗುತ್ತವೆ. ಇವುಗಳು ತುಂಬಾ ಚೂಪಾದ ಮತ್ತು ಬಲವಾದ ಹಲ್ಲುಗಳನ್ನು ಪಡೆದಿದ್ದು ಮನುಷ್ಯನನ್ನು ಮೂಳೆಗಳ ತನಕ ತಿನ್ನುವ ಶಕ್ತಿಯನ್ನು ಪಡೆದಿವೆ. ಕೆಲವು ಉದಾಹರಣೆಗಳ ಪ್ರಕಾರ ಇಡೀ ಮನುಷ್ಯನನ್ನು 55 ಸೆಕೆಂಡಿನಲ್ಲಿ ಸಂಪೂರ್ಣವಾಗಿ ತಿನ್ನಬಲ್ಲವು.
ಸ್ಕಿಮ್ಮರ್: ಈ ಪಕ್ಷಿಗಳು ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಕಾಣಸಿಗುತ್ತವೆ. ಇವುಗಳ ಮೇಲನೆಯ ಕೊಕ್ಕು ಸಣ್ಣದಿದ್ದು, ಕೆಳಗಡೆಯ ಕೊಕ್ಕು ಉದ್ದವಿದೆ. ಹಾರಾಟದ ಸಮಯದಲ್ಲಿ ಮೀನುಗಳನ್ನೂ ಹಿಡಿಯಲು ತಮ್ಮ ಕೆಳಗಡೆಯ ಕೊಕ್ಕನ್ನು ಉಪಯೋಗಿಸುತ್ತವೆ ಮಾತು ಆಹಾರವನ್ನು ನುಂಗಲು ಸಣ್ಣ ಕೊಕ್ಕನ್ನು ಉಪಯೋಗಿಸುತ್ತವೆ.
ಹೌಲರ್ ಮಂಗಗಳು: ಹೌಲರ್ಗಳು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಕೂಗುವ ಧ್ವನಿಗಳಿಂದ ಇವುಗಳಿಗೆ ಹೌಲರ್ ಎಂಬ ಹೆಸರು ಬಂದಿದೆ. ಸಾಮಾನ್ಯವಾಗಿ ಸಾಯಂಕಾಲದ ಸಮಯದಲ್ಲಿ ಇವುಗಳು ಜೋರಾಗಿ ಕೂಗಲು ಶುರು ಮಾಡಿದರೆ ಇವುಗಳ ಧ್ವನಿಯನ್ನು 5 ಮೈಲಿಗಳ ತನಕ ಕೇಳಬಹುದು.
ಅರಪೈಮ ಮೀನು: ಇವುಗಳು ಸಿಹಿ ನೀರಿನಲ್ಲಿ ಜೀವಿಸುವ ದೊಡ್ಡ ಮೀನುಗಳು.ಇವುಗಳು 11 ರಿಂದ 12 ಅಡಿ ಉದ್ದವಿದ್ದು 300 ಕೆ.ಜಿ.ತನಕ ತೂಗುತ್ತವೆ. ಇವುಗಳು ಸಣ್ಣ ಮೀನು ಮತ್ತು ಇತರ ಪ್ರಾಣಿಗಳನ್ನು ಭಕ್ಷಿಸುತ್ತವೆ. ಅಮಜೊನ್ ನದಿಗಳಲ್ಲಿ ಇವುಗಳು ಕಾಣಸಿಗುತ್ತವೆ.
ಕಪಿಬಾರ: ಇವುಗಳು ಇಲಿಗಳ ಜಾತಿಗೆ ಸೇರಿದ ಪ್ರಾಣಿ. ಇವುಗಳು ದೊಡ್ಡ ಗಾತ್ರದ ಇಲಿಗಳಾಗಿ ಕಾಣಸಿಗುತ್ತವೆ. ಇವುಗಳ ಹಿಂದಿನ ಕಾಲುಗಳು ಮುಂದಿನ ಕಾಲುಗಳಿಗಿಂತ ಚಿಕ್ಕದಾಗಿದ್ದು ನಿಂತಾಗಲು ಕೂಡ ಕೂತಂತೆ ಕಾಣುತ್ತವೆ.
ಆರ್ಮಡಿಲ್ಲೋ: ಸ್ಪಾನಿಶ್ ಭಾಷೆಯಲ್ಲಿ ಆರ್ಮಡಿಲ್ಲೋ ಎಂದರೆ "ಕವಚವಿರುವ ಸಣ್ಣ ಜೀವಿ" ಎಂದು ಅರ್ಥ. ಇವುಗಳ ತಲೆ, ಕಾಲುಗಳು ಮತ್ತು ಬಾಲಕ್ಕೆ ಮೂಳೆಯ ಕವಚವಿದ್ದು ನೋಡಲು ಸುಂದರವಾಗಿರುವುದಿಲ್ಲ. ಕವಚವಿರುವ ಏಕೈಕ ಸಸ್ತನಿ ಪ್ರಾಣಿ ಇದು. ಇರುವೆಭಕ್ಷಕ ಜಾತಿಗೆ ಹೋಲುವ ಇವುಗಳು ಚೂಪನೆಯ ಮೂತಿ ಮಾತ್ತು ಸಣ್ಣ ಗಾತ್ರದ ಕಣ್ಣುಗಳನ್ನು ಪಡೆದಿವೆ. ಇವುಗಳ ಹಲವು ಬಣ್ಣ, ಗಾತ್ರದಲ್ಲಿ ಕಾಣಸಿಗುತ್ತವೆ. 6 ಇಂಚಿನಿಂದ 5 ಅಡಿ ಉದ್ದವಿರುತ್ತವೆ. ಕಪ್ಪು, ಕೆಂಪು, ಕಂದು ಬಣ್ಣಗಳಲ್ಲಿ ಕಾಣಸಿಗುತ್ತವೆ.
ಅಗೌಟಿ: ಇವುಗಳು ಬಾಲವಿಲ್ಲದ ಸಣ್ಣ ಪ್ರಾಣಿಗಳು. ಇವುಗಳ ಮುಖ್ಯ ಆಹಾರ ಹಣ್ಣುಗಳು ಮತ್ತು ಬೀಜಗಳು. ಆಹಾರವು ಜಾಸ್ತಿ ದೊರಕಿದಾಗ ಅವುಗಳನ್ನು ತಮ್ಮ ವಾಸಿಸುವ ಸುತ್ತಳತೆಯಲ್ಲಿ ಬಚ್ಚಿ ಇಡುತ್ತವೆ. ಆಹಾರಕ್ಕೆ ಕೊರತೆ ಬಂದಾಗ , ಈ ರೀತಿ ಮುಚ್ಚಿದ ಆಹಾರವನ್ನು ಉಪಯೋಗಿಸುತ್ತವೆ. ಆದರೆ ಸಾಮಾನ್ಯವಾಗಿ ಇವುಗಳು ತಾವು ಬಚ್ಚಿಟ್ಟಿದ್ದ ಸ್ಥಳಗಳನ್ನು ಮರೆತು ಬಿಡುತ್ತವೆ.
ಕಪುಚಿನ್ ಮಂಗಗಳು: ಇವುಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದ ಕಾದ್ಗಳಲ್ಲಿ ಕಾಣಸಿಗುತ್ತವೆ. ಮಂಗಗಳಲ್ಲಿಯೇ ಬುದ್ದಿವಂತ ಮಂಗಗಳು ಎಂದು ಹೆಸರು ಪಡೆದಿವೆ. ತಲೆಯ ಮೇಲೆ ಟೋಪಿಯ ತರಹ ಕೂದಲಿದ್ದು, ದುಂಡನೆಯ ಮುಖವಿರುತ್ತವೆ. ಇವುಗಳ ದೇಹ 30 ರಿಂದ 55 ಸೆ.ಮಿ.ಉದ್ದವಿದ್ದು, ಬಾಲವು ದೇಹದಷ್ಟೇ ಉದ್ದವಿರುತ್ತವೆ. ತೆಳು ಕಂದು ಬಣ್ಣದಿಂದ ಕಪ್ಪು ಬಣ್ಣವಿರುತ್ತವೆ.
ಗೋಲಿಯತ್ ಕಪ್ಪೆ: ಕಪ್ಪೆಗಳಲ್ಲಿ ಇವುಗಳು ದೊಡ್ಡ ಗಾತ್ರವಿದು , ಹೆಗ್ಗಣಗಳನ್ನು ಕೂಡ ಸಲೀಸಾಗಿ ನುಂಗಬಲ್ಲವು.
ಪಿಗ್ಮಿ ಕಪ್ಪೆ: ಕಪ್ಪೆಯ ಜಾತಿಯಲ್ಲಿಯೇ ಇವುಗಳು ತುಂಬಾ ಚಿಕ್ಕ ಗಾತ್ರದ ಕಪ್ಪೆಗಳು. ಏನೂ ತೊಂದರೆ ಇಲ್ಲದೆ ಇವುಗಳು ನಿಮ್ಮ ಬೆರಳಿನ ತುದಿಯಲ್ಲಿ ಕೂರಬಲ್ಲವು. ಗಂಡುಗಳು 1 ಸೆ.ಮಿ ಉದ್ದವಿದ್ದು ಹೆಣ್ಣುಗಳು ಅರ್ಧ ಸೆ.ಮಿಗಿಂತ ಕಡಿಮೆ ಇರುತ್ತವೆ.
ಪೀಪಾ ಕಪ್ಪೆ: ಇವುಗಳು ಚಪ್ಪಟೆ ದೇಹವನ್ನು ಹೊಂದಿದ್ದು ಹೆಣ್ಣು ಕಪ್ಪೆಗಳು ಮೊಟ್ಟೆಗಳನ್ನು ತನ್ನ ಬೆನ್ನಿನ ಮೇಲೆ ಹೊತ್ತು ತಿರುಗತ್ತವೆ. ಮೊಟ್ಟೆ ಇದುವ ಸಮಯದಲ್ಲಿ ಇವುಗಳ ಚರ್ಮವು ಮೆತ್ತುಗಾಗಿ ಮೊಟ್ಟೆ ಇಡಲು ಸಹಾಯಕವಾಗುತ್ತವೆ.
ಸ್ಕ್ವಿರೆಲ್ ಮಂಗ: ಇವುಗಳು ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ಮಾತು ಅಮೆಜೊನ್ ಕಾಡುಗಳಲ್ಲಿ ಕಾಣಸಿಗುತ್ತವೆ. ಇವುಗಳು ಚಿಕ್ಕ ಗಾತ್ರದಲಿದ್ದು ಹಳದಿ, ಕೇಸರಿ ಬಣ್ಣದ ತುಪ್ಪಳವನ್ನು ಹೊಂದಿವೆ. ಕತ್ತು ಮತ್ತು ಕಿವಿಗಳು ಬೆಳ್ಳಗಿದ್ದು ಮೂತಿಯು ಕಪ್ಪು ಬಣ್ಣವಿರುತ್ತದೆ. ಇವುಗಳು ಸಂಘ ಜೀವಿಗಳಾಗಿದ್ದು ಒಂದೊಂದು ಗುಂಪಿನಲ್ಲಿ 500 ಸಂಖ್ಯೆಯಲ್ಲಿರುತ್ತವೆ. ಕೆಲವು ಸಮಯದಲ್ಲಿ ಸಣ್ಣ ಸಣ್ಣ ಗುಂಪಾಗಿಯು ಇರುತ್ತವೆ. ವಿವಿದ ಸ್ವರಗಳನ್ನು ಹೊರಡಿಸುವ ಇವು ಬೇರೆ ಪ್ರಾಣಿಗಳಿಂದ ರಕ್ಷಿಸಲು, ಅಪಾಯವನ್ನು ಸೂಚಿಸಲು ಬಳಸುತ್ತವೆ. ತಮ್ಮ ಸಣ್ಣ ಗಾತ್ರದಿಂದ ಮಾಂಸಹಾರಿ ಪ್ರಾಣಿಗಳಿಗೆ ಮತ್ತು ಕೆಲವು ಹಾವಿಗಳಿಗೆ ಬಲಿಯಾಗುತ್ತವೆ. ತಮ್ಮ ಎಲ್ಲೆಯನ್ನು ಗುರುತಿಸಲು ಇವುಗಳು ತಮ್ಮ ಬಾಲವನ್ನು ಉಜ್ಜಿ ಮೂತ್ರವನ್ನು ಮಾಡುತ್ತವೆ.
:ಚಿತ್ರಗಳು ಅಂತರ್ಜಾಲದಿಂದ
:ಚಿತ್ರಗಳು ಅಂತರ್ಜಾಲದಿಂದ
No comments:
Post a Comment