Tuesday, December 28, 2010

ನಾಗವಲ್ಲಿ

ಚಿತ್ರ : ಅಂತರ್ಜಾಲದಿಂದ
 ಇವತ್ತು ಮಧ್ಯಾನ ಆಫೀಸಿಗೆ ಊರಿಂದ ಡೈರೆಕ್ಟಾಗಿ  ಹೋದೆ. ಸ್ವಲ್ಪ ಹೊತ್ತಿನಲ್ಲಿ ನಮ್ಮ ವೆಬ್ ದಿಸೈಜ್ಞೆರ್ ಅಜಯ್ ಬಂದ. ಬಂದವನೇ ಉಭಯ ಕುಶಲೋಪರಿ ಕೇಳಿ ತಾನು ಆಫೀಸಿನಲ್ಲಿ ನಾಗವಲ್ಲಿಯನ್ನು ನೋಡಿದೆ ಎಂದು ಹೇಳಿದ. ನಾನು ಒಂದು ಸಲ ಆಶ್ಚರ್ಯಪಟ್ಟು "ಏನಯ್ಯ ಸಾಫ್ಟ್ ವೇರ್  ಆಫೀಸಿನಲ್ಲಿ ನಾಗವಲ್ಲಿ ಎಲ್ಲಿಂದ ಬರಬೇಕಯ್ಯ " ಎಂದು ಕೇಳಿದೆ. 

ಅದಕ್ಕೆ ಅವನು " ಇಲ್ಲ ನಿಜವಾಗಲು ನೋಡಿದೆ, ಆ ಕಣ್ಣುಗಳನ್ನು ನೋಡಲು ನಿಜವಾಗಲು ಭಯಾನಕವಾಗಿದೆ, ಹೆದರಿಕೆ ಆಗುತ್ತದೆ" ಅಂದ.  
 "ನೆನ್ನೆ ನಾಗವಲ್ಲಿ ಫಿಲಂ ನೋಡಿದೆ, ರಾತ್ರಿಯೆಲ್ಲ  ಆ ಕಣ್ಣುಗಳು ಕನಸಿನಲ್ಲಿ ಬರ್ತಾ ಇದ್ದವು, ಇವತ್ತು ಆಫೀಸಿಗೆ ಬಂದರೆ ಆ  ಹುಡುಗಿಯ ಕಣ್ಣು ಅದೇ ಥರ ಭಯಾನಕ ವಾಗಿದೆ. ಬೇಕಾದರೆ ನೀನೆ ನೋಡು" ಎಂದು ಮತ್ತೆ ಹೇಳಿದ.

 ಆಯ್ತಪ್ಪ ಯಾರು ಅದು , ತೋರಿಸು ಎಂದು ಕೇಳಿದೆ.   ಅದಕ್ಕೆ ಮಾರ್ಕೆಟಿಂಗ್ ಟೀಂ ಅಲ್ಲಿ ಇರುವ ಒಂದು ಹುಡುಗಿಯೇ ನಾಗವಲ್ಲಿ ಎಂದು ಹೇಳಿದ.  ಸ್ವಲ್ಪ ಹೊತ್ತಿನ ನಂತರ ಮಾರ್ಕೆಟಿಂಗ್ ಹೆಡ್ ಆದ ಸುಮಿತ್ರ ಅವರನ್ನು ಕರೆದು "ಏನ್ ರೀ ನಿಮ್ಮ ಜೂನಿಯರ್ ಸೇಮ್ ನಾಗವಲ್ಲಿ ಥರ ಇದ್ದಾರೆ " ಎಂದು ಬಿಟ್ಟ. ಅವರು ಹೋಗಿ ಆ ಹುಡುಗಿ ಹತ್ತಿರ ನೀನು ನಾಗವಲ್ಲಿ ಅಂತೆ ಎಂದು ಹೇಳಿಬಿಟ್ಟರು.

"ಆ ನಾನು ನಾಗವಲ್ಲಿ ನಾ ? ಯಾರು ಹೇಳಿದ್ದು ಆ ಥರ? ಎಷ್ಟು ಧೈರ್ಯ? ", ಎಂದು ಗಲಾಟೆ ಮಾಡಿಕೊಂಡು ಅಜಯ್ ಹುಡುಕಿಕೊಂಡು ಬಂದಳು. 
ನಾನು " ಅಜಯ್ ಈಗ ನಿನ್ನ ನಾಗವಲ್ಲಿ ಬರ್ತಾ ಇದೆ, ಹುಷಾರಾಗಿ ಬಚ್ಹಾವಾಗಣ್ಣ" ಎಂದೇ.ಏನು ಮಾಡಲು ಹೊಳೆಯದೆ ಅಜಯ್ ಹೆಡ್ಫೋನ್ ಗಳನ್ನೂ ಕಿವಿಯಲ್ಲಿ ಹಾಕಿಕೊಂಡು ಕಂಪ್ಯೂಟರ್ ಮುಂದೆ ಕೂತುಬಿಟ್ಟ.

ಆ ಹುಡುಗಿ ಬಂದು " ಅಜಯ್ , ಎಷ್ಟು ಧೈರ್ಯ ನನಗೆ ನಾಗವಲ್ಲಿ ಅಂತ ಕರೆಯೋಕೆ? ಈಗ ಕರೆಯಿರೀ  ನೋಡೋಣ , ಕಿವಿಯಲ್ಲಿ ಹೆಡ್ಫೋನ್ ಗಳನ್ನೂ ಹಾಕಿಕೊಂಡು ಕೂತಿದ್ದಿರಲ್ಲ? ಇನ್ನೊಂದ್ಸಲ  ಕರೆದರೆ  ಸರಿ ಇರಲ್ಲ. ನಾನು ಯಾವಾಗ ನಿಮಗೆ ನಾಗವಲ್ಲಿ ಥರ ಕಂಡೆ? " ಎಂದು ಕೇಳಿದರು.

ಅಜಯ್ "ಆ ಏನು ಹೇಳಿದೆಯೋ ಕೇಳಿಸಲಿಲ್ಲ, ಹಾಡನ್ನು ಕೇಳ್ತಾ ಇದ್ದೀನಿ " ಅಂದ.ಅವನ ಗ್ರಹಚಾರಕ್ಕೆ ಹೆಡ್ಫೋನ್ ಹಾಕಿಕೊಂಡಿದ್ದ ಹೊರತು ಯಾವ ಹಾಡನ್ನು ಪ್ಲೇ ಮಾಡುತ್ತಾ ಇರಲಿಲ್ಲ. ಇದನ್ನು ಗಮನಿಸಿ ಆ ಹುಡುಗಿಯ ಸಿಟ್ಟು ಇನ್ನು ಜಾಸ್ತಿ ಆಯಿತು. ಕೊನೆಗೆ ಅದರಿಂದ ಬಚಾವಾಗುವ ಹೊತ್ತಿಗೆ ನಿಜವಾಗಲು ನಾಗವಲ್ಲಿ ನೋಡಿದವನ ಥರ ಬಿಳಿಚುಕೊಂಡು ಹೋಗಿದ್ದ.

1 comment:

  1. ನಾಗವಲ್ಲಿಯ ತಮಾಷೆಯ ಕತೆ ನಿಜಕ್ಕೂ ಚೆನ್ನಾಗಿದೆ. ಓದಿ ನಗು ಬಂತು.

    ReplyDelete