ಚೀನಾವು ತನ್ನದೇ ಆದ ಪರಂಪರೆ ಮತ್ತ್ತು ಸಂಸ್ಕೃತಿಯನ್ನು ಹೊಂದಿದೆ. ನೋಡಲು ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅದರಲ್ಲಿ ಹೆಂಗ್ಶಾನ್ ಪರ್ವತದಲ್ಲಿರುವ ತೂಗುವ ಮಂದಿರುವು ಒಂದು. ದೂರದಿಂದ ನೋಡಲು ತೂಗುವಂತೆ ಕಂಡರೂ ವಾಸ್ತವದಲ್ಲಿ ಇದು ಮರದ ದಿಮ್ಮಿಗಳ ಮೇಲೆ ನಿಂತಿದೆ. ಇದು ಹೆಂಗ್ಶಾನ್ ಪರ್ವತದ ಬುಡದಲ್ಲಿದೆ. ಇದನ್ನು ಉತ್ತರ ವೇಯ್ ರಾಜವಂಶದವರು (386 -534 A .D ) ಕಟ್ಟಿದರು. 1900 ರಲ್ಲಿ ಇದ್ದರ ಜೀರ್ಣೋದ್ದಾರ ಮಾಡಲಾಯಿತು. ಹೆಂಗ್ಶಾನ್ ಪರ್ವತವು ಧಾರ್ಮಿಕ ಮತ್ತು ಪವಿತ್ರ ಪರ್ವತವಾಗಿದ್ದು 2020 ಮಿ. ಉದ್ದವಿದೆ. ದಾಟೊಂಗ್ ಎಂಬ ಊರಿನ ದಕ್ಷಿಣಕ್ಕೆ ಈ ಪರ್ವತವಿದೆ. ಇಲ್ಲಿ ಕಾಂಫುಸಯಾನಿಸ್ಮ್ , ತಾವೊಇಸಂ , ಬುದ್ದಿಸಮ್ ಜಾತಿಯ ಪೂಜೆ ಮತ್ತು ವಿಧಿ ವಿಧಾನಗಳನ್ನು ಕಾಣಬಹುದಾಗಿದೆ. ಇದು ನೆಲ ಮಟ್ಟದಿಂದ 75 ಮಿ. ಎತ್ತರವಿದೆ. ಇದರ ಕಟ್ಟಡ ವಿನ್ಯಾಸವು ಸೋಜಿಗವೆನಿಸುತ್ತದೆ. ಈ ಪರ್ವತದಲ್ಲಿರುವ ಒಂದೊಂದು ಗುಹೆಗಳನ್ನು ಸೇತುವೆ ಮತ್ತು ಕಾಲುದಾರಿಗಳಿಂದ ಸಂಪರ್ಕಿಸಲಾಗಿದೆ.
ಈ ದೇವಸ್ತಾನದ ನಿರ್ಮಾಣ ಶೈಲಿಯನ್ನು ಅಧ್ಯಯನ ಮಾಡಲು ಜರ್ಮನಿ, ಇಟಲಿ , ಬ್ರಿಟೈನ್ ಹೀಗೆ ಮುಂತಾದ ದೇಶಗಳಿಂದ ಬರುತ್ತಾರೆ. ಅವರ ಪ್ರಕಾರ ಇದು ಚೀನಿಯರ ಸಂಸೃತಿ ಮತ್ತು ಕುಶಲತೆಯನ್ನು ತೋರಿಸುತ್ತದೆ. ಇನ್ನು ಈ ದೇವಸ್ತಾನವನ್ನು ಹೀಗೆ ಯಾಕೆ ಕಟ್ಟಿದರು ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರ ಈ ರೀತಿ ಇದೆ: ಇದು ಪರ್ವತದ ಮೇಲೆ ಇರುವುದರಿಂದ ಪ್ರವಾಹಗಳಿಂದ ರಕ್ಷಿಸುತ್ತದೆ, ಪರ್ವತದ ತುದಿಯು ಚಾವಣಿಯಂತೆ ಮಂಜು ಮತ್ತು ಮಳೆಯಿಂದ ರಕ್ಷಿಸುತ್ತದೆ. ಸುತ್ತಲು ಇರುವ ಪರ್ವತವು ದೇವಸ್ತಾನವನ್ನು ಸೂರ್ಯನ ಹೊಡೆತದಿಂದ ರಕ್ಷಿಸುತ್ತದೆ. ಎರಡನೆಯ ಕಾರಣವೆಂದರೆ ಇದು ತಾವೊಇಸಂ ಶೈಲಿಯನ್ನು ಅನುಕರಿಸುತ್ತದೆ ಮತ್ತು ಕೋಳಿಗಳ ಕೂಗು ಮತ್ತು ನಾಯಿಗಳ ಕೂಗಾಟದ ಶಬ್ದವನ್ನು ಕಡಿಮೆ ಮಾಡುತ್ತದೆ. ಇಲ್ಲ್ಲಿ ಅಡ್ಡಹೆಟ್ಟಿಗೆಗಳನ್ನೂ ಪರ್ವತದ ಒಳಗೆ ತೂರಿಸಿ ತಳದ ಬುನಾದಿಯನ್ನಾಗಿ ಮಾಡಿ ಬಂಡೆಗಳನ್ನು ಗೋಡೆಗಳನ್ನಾಗಿ ಉಪಯೋಗಿಸಲಾಗಿದೆ.
:ಚಿತ್ರಗಳು ಅಂತರ್ಜಾಲದಿಂದ
ಸು೦ದರ ಪ್ರದೇಶವೊ೦ದನ್ನು ಪರಿಚಯಿಸಿದ್ದೀರಿ.
ReplyDeleteಕೆಲವು ಫೋಟೋಗಳನ್ನು ನೋಡಿ ಎಚ್ಚ್ರ ತಪ್ಪುವ೦ತಾದರೂ ಸುಧಾರಿಸಿಕೊ೦ಡು ಪೂರಾ ನೋಡಿ ಸ೦ತೋಶಿಸಿದ್ದೇನೆ.
ಧನ್ಯವಾದಗಳು.
ವಾಹ್ ಸೂಪರ್..ಅವುಗಳನ್ನು ಕಟ್ಟಿದ ತಾಂತ್ರಿಕತೆ ಮೆಚ್ಚತಕ್ಕದ್ದು. ಉತ್ತಮ ವಿಚಾರವನ್ನು ಚಿತ್ರಸಹಿತ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್
ReplyDeleteಚಿನ್ಮಯ..
ReplyDeleteಅದ್ಭುತ ತಾಣವೊಂದರ ಪರಿಚಯ. !!
ಆ ರಸ್ತೆಗಳು..
ಕಣಿವೆಗಳು.. ಮೈನವಿರೇಳುವಂತಿದೆ.. !!
ಹೆದರಿಕೆಯಾದರೂ.. ಒಮ್ಮೆ ನೋಡಿ ಬರಬೇಕು ಅಂತ ಅನ್ನಿಸುತ್ತಿದೆ..