Friday, October 15, 2010

Sweet story


Today total office was filled with festival mood. As instructed yesterday to come early as to make decorations and other things, due to traffic jam i reached office late. That time pooja was going on.
On completing the pooja theertha, prasada was given to all. Afterwards sweets were distributed to all including our boss Pramod. 
 Finally all the festival mood was gone and every one started to work normally. That time Pramod came and asked Ajay "where is that thing which i handed over to you?". Suddenly all of us started to look upon Pramod as what he is telling. Ajay was showing in sign that he is not having anything. Pramod told " I gave you to keep it with you , but  you  have eaten that also?". 
Afterwards when pramod went we asked Ajay what has happened. The story was this, Pramod was going to have his sweet, but as to do namaskara he has handed over that sweet to our Ajay to keep it and has told that he will collect afterwards. Ajay has kept that sweet till sometime, afterwards he cant withstand not to eat and finally it was successfully swallowed.
After hearing this, our programmer's room was filled with heavy laugh.


ಸ್ವೀಟಿನ ಕಥೆ

ಇವತ್ತು ಆಫೀಸಿನಲ್ಲಿ ಹಬ್ಬದ ವಾತಾವರಣ. ಬೇಗನೆ ಬರಬೇಕೆಂದರು ಟ್ರಾಫಿಕ್ ಜಾಮ್ ಇಂದ ಲೇಟ್ ಆಯ್ತು. ಸರಿ ಪೂಜೆ, ಪ್ರಸಾದ, ತೀರ್ಥ ಎಲ್ಲ ಆಯಿತು. ತಿಂಡಿ ಆದ ಮೇಲೆ ಎಲ್ಲರಿಗು ಸ್ವೀಟ್ ಹಂಚಲಾಯಿತು. ನಮ್ಮ ಬಾಸ್ ಆದ ಪ್ರಮೋದ್ ರವರಿಗೂ ಸ್ವೀಟ್ ಕೊಡಲಾಯಿತು. ತಿಂಡಿಯೂ ಆಯಿತು.  ಸರಿ ಹಬ್ಬದ ಗಲಾಟೆ ಮುಗಿದು ಪುನಃ ಆಫೀಸ್ ಮೂಡಿಗೆ ಬಂದು ಕೆಲಸ ಮಾಡುತ್ತಿದ್ದೆವು.


ಆಗ ಪ್ರಮೋದ್ ಬಂದು ಅಜಯ್ ಗೆ " ಅಜಯ್ ನಾನು ಕೊಟ್ಟದ್ದು  ಎಲ್ಲಿ?" ಎಂದು ಕೇಳಿದರು. ನಾವು ಇವರು ಏನೋ ಮಾತನಾಡುತ್ತಿದ್ದರಲ್ಲ ಎಂದು ನೋಡಲು ಶುರುಮಾಡಿದೆವು.  ಅಷ್ಟರಲ್ಲಿ ಅಜಯ್  ತನ್ನ ಹತ್ತಿರ ಇಲ್ಲ ಎಂದು ಸನ್ನೆ ಮಾಡಿ ತೋರಿಸಿದ. ಅದಕ್ಕೆ ಪ್ರಮೋದ್ " ಒಹ್, ನಾನು ಬಂದು ತಿಂತೀನಿ ಅಂತ ಹೇಳಿದ್ದೀನಿ , ಅಷ್ಟರಲ್ಲಿ ನೀನು ಅದನ್ನ ಮುಗುಸಿಬಿಟ್ಟೆಯ?" ಎಂದು ಹೇಳಿ ನಗುತ್ತ ಹೊರಟುಹೋದರು.

ನಮಗೆ ಇವರ ಸಂಭಾಷಣೆ ಏನು ಅಂತ ಅರ್ಥ ಆಗಲೇ ಇಲ್ಲ. ಆಮೇಲೆ ಅಜಯ್ ಗೆ ಕೇಳಿದ ಮೇಲೆ ಗೊತ್ತಾದದ್ದು  ಇಷ್ಟು .
ದೇವರಿಗೆ ನಮಸ್ಕಾರ ಮಾಡುವಾಗ ಪ್ರಮೋದ್ ಅವರು ತಮ್ಮ ಕೈಯಲ್ಲಿದ್ದ ಸ್ವೀಟ್ ಅನ್ನು ನಮ್ಮ ದಿಸೈಜ್ಞೆರ್ ಅಜಯ್ ಗೆ ಹಿಡಿದಿಕೋ ಅಂತ ಕೊಟ್ಟಿದ್ದಾರೆ , ಅವನು ಸ್ವಲ್ಪ ಹೊತ್ತು ಹಿಡಿದುಕೊಂಡು ಆಮೇಲೆ ಅದನ್ನ ಸ್ವಾಹ ಮಾಡಿದ್ದಾನೆ .
ಅಷ್ಟರವರೆಗೂ ಸೀರಿಯಸ್ ಆಗಿ ಕೆಲಸ ಮಾಡುತ್ತಿದ್ದ ನಾವು ಅಜಯ್ ಹೇಳಿದ ಮಾತನ್ನು ಕೇಳಿ  ಬಿದ್ದು ಬಿದ್ದು ನಗಲು ಶುರು ಮಾಡಿದೆವು.

Thursday, October 14, 2010

What a reply !!!

For tomorrow's festival and pooja , in our office cleaning was going on. One of  my colleague was upgrading his system hardwares( extending his ram memory) and also was talking continuously.

That time another colleague by seeing dust and spider's inside his system
 said " BOSS OF FISH MARKET".

Then suddenly reply bounced back to him,
"YES, I AM THE BOSS AND YOU ARE THE EMPLOYEE OF FISH MARKET"

ಪ್ರತ್ಯುತ್ತರ

ನಾಳೆ ಹಬ್ಬ ಇರುವುದರಿಂದ ಆಫೀಸಿನಲ್ಲಿ ಕಸ ತೆಗೆದು ಶುಚಿ ಮಾಡುವುದು ಸಾಗಿತ್ತು. ನನ್ನ ಸಹೋದ್ಯೋಗಿ ತನ್ನ ಕಂಪ್ಯೂಟರ್ ರಾಮ್ ನ ಹೆಚ್ಹು ಮಾಡುವದರಲ್ಲಿ ತೊಡಗಿದ್ದ ಜೊತೆಗೆ ಜೋರಾಗಿ ಮಾತನಾಡುತಿದ್ದ. 
ಆಗ ನನ್ನ ಇನ್ನೊಬ್ಬ ಸಹೋದ್ಯೋಗಿ ಇವನ ಗಲಾಟೆ ಮತ್ತು ಕಂಪ್ಯೂಟರ್ ಒಳಗಿದ್ದ ಜೇಡರ ಬಲೆ ಮತ್ತು ಧೂಳು ನೋಡಿ  "ನೀನು ಮೀನು ಮಾರುಕಟ್ಟೆಯ ಯಜಮಾನ" ಎಂದ.
ಹೀಗೆ ಹೇಳಿದ ಮರುಕ್ಷಣವೇ ಅವನಿಗೆ ಪ್ರತ್ಯುತ್ತರ ಹೀಗೆ ಬಂತು "ಆಯಿತು ನಾನು ಯಜಮಾನ , ನೀನು ನನ್ನ ಕೆಲಸಗಾರ !!!!!".

Monday, October 4, 2010

ಕೆಲವು ಸಾಲುಗಳು :
ಹೊಸಕೆರೆಹಳ್ಳಿ ರಸ್ತೆಯ ಹತ್ತಿರ ತೆಗೆದ ಸೂರ್ಯಾಸ್ತದ ಚಿತ್ರ

  1. ಕಾರಿನಲ್ಲಿ ಹೋಗುತ್ತಿರುವ ಕನಸಿನಿಂದ ನನ್ನನ್ನು ಬಡಿದೆಬ್ಬಿಸಿದ್ದು ಬಸ್ ನಿರ್ವಾಹಕನ ಟಿಕೆಟ್ಟಿನ ಕೂಗು.
  2. ಹೆಬ್ಬಂಡೆ, ಪ್ರಪಾತಗಳಿಂದ ಕೂಡಿದ ಗಿರಿಪಂಕ್ತಿಗಳ ಸಾಲಿನ ಚಿತ್ರ ತೆಗೆಯಲು ಹೋದ ಛಾಯಚಿತ್ರಗಾರ  ಕೊನೆಯಾದದ್ದು ನೀರ ಮೌನದಲ್ಲಿ .  
  3. ಗೆಳತಿ, ಸುಂದರವಾದ ಕವಿತೆಯನ್ನು ಹೇಳಿದ ಮೇಲು ಯಾಕೆ ಬೇಸರ?   ಸುಂದರವಾದ ಕವಿತೆಯನ್ನು ವಕ್ರವಾಗಿ ಹೇಳಿದೆಯಲ್ಲ ಅದಕ್ಕೋಸ್ಕರ.

ಕ್ರಿಯೇಟಿವಿಟಿ ? :)

ಅಮೂಲ್ಯ 
ನೆನ್ನೆ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಮಧ್ಯಾನದ ಸಮಯ, ಮಳೆ ಬರಲು ಶುರುವಾಯಿತು, ಹಾಗೆಯೇ ನನ್ನ ತಂಗಿ ಅಮೂಲ್ಯ ಹೊರಗೆ ಹೋಗಿ ಆಡಲು ಹಠಮಾಡಿದಳು. ಕೊನೆಗೆ ಬೇಡ ಇಲ್ಲೇ ಕೂತಿಕೊಂಡು ಚಿತ್ರ ಬರಿ ಎಂದೆವು. ಚಿತ್ರವೇನೋ ಬರೆದಳು, ಆದರೆ ಕೊನೆಗೆ ಅದನ್ನು ಏನು ಮಾಡಬೇಕೆಂದು ತಿಳಿಯದೆ ಅವಳು ಮಾಡಿದ್ದು ಹೀಗೆ......