Sunday, November 21, 2010

ಕಳೆದ ಭಾನುವಾರ ನಾವು ತಿಪಟೂರಿನ ಅರಳಗುಪ್ಪೆ ನರಸಿಂಹಸ್ವಾಮಿ  ದೇವಾಲಯಕ್ಕೆ  ಭೇಟಿ ನೀಡಿದ್ದೆವು. ಬೆಂಗಳೂರಿನಿಂದ ರೈಲಿನಲ್ಲಿ ಹೊರಟರೆ ಇದು ಬಾಣಸಂದ್ರ ಆದ ಮೇಲೆ ಸಿಗುತ್ತದೆ. ಸಣ್ಣ ಊರಾಗಿರುವದರಿಂದ  ಇಲ್ಲಿ ರೈಲು ಸ್ವಲ್ಪ ಹೊತ್ತು ಮಾತ್ರ ನಿಲ್ಲುತ್ತದೆ. ಇಲ್ಲಿ  ಹೊಯ್ಸಳ ಕಾಲದ ನರಸಿಂಹ ದೇವಾಲಯವಿದೆ.  ನರಸಿಂಹಸ್ವಾಮಿಯ ದೇವಾಲಯಕ್ಕೆ ಹೊಂದಿಕೊಂಡಂತೆ ಅಲ್ಲಿ ಚೆನ್ನಕೇಶವ ದೇವಾಲಯವು ಇದೆ. ಅದರ ಕೆಲವು ಚಿತ್ರಗಳು ಮತ್ತು ಅದರ  ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ.
ಇಲ್ಲಿ ಇರುವ ನರಸಿಂಹ ದೇವರು ಉಗ್ರ ನರಸಿಂಹ, ಮೂರ್ತಿ ಚಿಕ್ಕದಾಗಿಯೂ ಮತ್ತು ಸುಂದರವಾಗಿಯೂ ಇದೆ. ದೇವಸ್ತಾನವು ಸಂಪೂರ್ಣ ಕಲ್ಲಿನಿಂದ ಕತ್ತಲಾಗಿರುವುದರಿಂದ ಒಳಗೆ ತಂಪಾಗಿಯು ಇದೆ. 

ಚೆನ್ನಕೇಶವ ದೇವಾಲಯ


 ಕೇಶವ ದೇವಾಲಯ: ಕೇಶವ ದೇವಾಲಯವು  ಏಕಕೂಟವಾಗಿದ್ದು ಕ್ರಿಶಕ, 13 ನೆ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾಯಿತು . ದೇವಾಲಯವು ನಾಲ್ಕಡಿ ಎತ್ತರದ ನಕ್ಷತ್ರಕ್ಕಾರದ  ಜಗಲಿಯ ಮೇಲೆ ನಿರ್ಮಾಣಗೊಂಡಿದ್ದು ತಳವಿನ್ಯಾಸದಲ್ಲಿ  ಗರ್ಭಗೃಹ,ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಜಗಲಿಯ ಪೂರ್ವದಿಂದ ªÉÄnÖ®ÄUÀ°zÀÄÝ ದೇವಾಲಯದ ದ್ವಾರವಿದೆ. ದಕ್ಷಿಣದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತೆ ನರಸಿಂಹ ದೇವಾಲಯವಿದೆ. ದೇವಾಲಯದ ಗೋಡೆಯ ಕೆಳಭಾಗವು ಆರು ಚಿತ್ರಪಟಗಳಿಂದ ಅಲಂಕ್ರುತಗೊಂಡಿದೆ. ಆನೆ, ಕುದುರೆ, ಲತಾಸಾಲುಗಳ ಮೇಲೆ ಪೌರಾಣಿಕ ಕಥೆಗಳ ಚಿತ್ರಗಳಿವೆ. ಪೂರ್ವದ ಗೋಡೆಯ ಮೇಲೆ ರಾಮಾಯಣ ಕಥೆ ಆರಂಭವಾಗಿ ಅನಂತರ ಭಾಗವತ  ಕಥೆ, ಕೃಷ್ಣನ ಬಾಲಲೀಲೆಯವರೆಗೂ ಕಂಡುಬರುತ್ತದೆ. ಗೋಡೆಯ ಮಧ್ಯಭಾಗವು ಲತಾತೊರಣಗಳ ಕೆಳಗೆ ಅನೇಕ ವೈಷ್ಣವ ಶಿಲ್ಪಗಳಿಂದ ಅಲಂಕ್ರುತಗೊಂಡಿದೆ . ಇವುಗಳಲ್ಲಿ  ಶ್ರೀದೇವಿ ಮತ್ತು ಭೂದೇವಿಗಳಿಂದ ಕೂಡಿದ ವಿಷ್ಣುವಿನ ೨೪ ರೂಪಗಳು, ನಾರಾಯಣ,ಯಕ್ಷ, ಯಕ್ಷಿ,ಲಕ್ಷ್ಮಿ, £ÀÈvÀåUÀuÉñÀ ,ಮೋಹಿನಿ, ಶದ್ಭುಜ   , ಸರಸ್ವತಿ ,ವೇಣುಗೋಪಾಲ,ಕೃಷ್ಣ,ಲಕ್ಷ್ಮೀನರಸಿಂಹ, ಉಗ್ರನರಸಿಂಹ ಇತ್ಯಾದಿ ನೋಡಲು  ಸುಂದರವಾಗಿದೆ.  ಶಿಲ್ಪಗಳ ¦ÃoÀ¨sÁUÀzÀ°è  ಶಿಲ್ಪಿ ಹೊನ್ನೋಜನ  ನಾಮಾಂಕಿತವಿದೆ. ಗರ್ಭಗುಡಿಯ ಮೇಲೆ ನಾಲ್ಕಂತಸ್ತಿನ ವೇಸರ  ಶಿಲ್ಪಿಯ ಶಿಖರವಿದ್ದು ಅಲಂಕ್ರುತಗೊಂಡಿದೆ. ದೇವಾಲಯದ ಒಳಭಾಗದಲ್ಲಿ ಅವರಂಗದ ಕಂಭಗಳು ಹೊಯ್ಸಳ ವಾಸ್ತುರೀತಿಯಲ್ಲಿದ್ದು ಶಿಲ್ಪಗಳಿಂದ ಅಲಂಕ್ರುತಗೊಂಡಿದೆ. ಮಧ್ಯದಲ್ಲಿ ವಿತಾನವು(ಭುವನೆಶ್ವರಿ  ) ಯಕ್ಷರ ಸಾಲಿನಿಂದ ಕೂಡಿದ್ದು  ಜೋಲಾಡುವ ಹೂವಿನ ಮೊಗ್ಗು ಇದೆ. ಗೋಡೆಯ ಗೂಡಲ್ಲಿ ಗಣೇಶ ಮತ್ತು ಮಹಿಶಮರ್ದಿನಿಯ ವಿಗ್ರಹಗಳಿವೆ. ಆರು ಅಡಿ ಎತ್ತರದ ಕೇಶವ ವಿಗ್ರಹವನ್ನು ಇಲ್ಲಿ ಕಾಣಬಹುದು, ಸುಕನಾಸಿ ದ್ವಾರದಲ್ಲಿ ಜಾಲಂದ್ರ, ದ್ವಾರಪಾಲಕರು, ನಾರಾಯಣ ಶಿಲ್ಪಗಳನ್ನು ಕಾಣಬಹುದು. ಗರ್ಭಗೃಹ ಪೀಠದ  ಮೇಲೆ ಹೊಯ್ಸಳ ಕಾಲದ ಕೇಶವ ವಿಗ್ರಹವಿದೆ. ಇದರ ತೋರಣದಲ್ಲಿ ವಿಷ್ಣುವಿನ ದಶಾವತಾರಗಳನ್ನು ಬಿಡಿಸಲಾಗಿದೆ.

ಸ್ವಲ್ಪ ದೂರದಲ್ಲಿಯೆ ಒಂದು ಹಳೆಯ ಶಿವನ ದೇವಾಲಯವು ಕೂಡ ಇದೆ. ನೋಡಲು ಸುಂದರವಾಗಿಯೂ ಮತ್ತು ದೇವಸ್ತಾನದ ಸುತ್ತಲು ಹಲವಾರು ಶಿವಲಿಂಗಗಳನ್ನು ಪ್ರತಿಷ್ಟ್ಹಾಪಿಸಲಾಗಿದೆ. 

ಮುಂಭಾಗದಿಂದ ಶಿವನ ದೇವಾಲಯ 

ದೇವಸ್ತಾನದ ಸುತ್ತಲು ಇರುವ ಶಿವಲಿಂಗಗಳು  
ಮುಖ್ಯ ಶಿವನ ದೇವಸ್ತಾನದಎದುರುಇರುವ ನಂದಿ 
ದೇವಸ್ತಾನದ ಪಕ್ಕದಲ್ಲಿಯೇ ಒಂದು ಕೆರೆ ಕೂಡ ಇದೆ. ಕೆರೆಯ ಹೂಳು ತೆಗೆದ ಮೇಲೆ ಅದರ ನೀರಿನ ಸಂಗ್ರಹಣ ಸಾಮರ್ಥ್ಯವು ಜಾಸ್ತಿಯಾಗಿದೆ ಮತ್ತು ನೋಡಲು ಚೊಕ್ಕವಾಗಿಯು ಇದೆ. 

ದೇವಾಲಯಗಳ ದರ್ಶನವಾದ ಮೇಲೆ ನಾನು ಮತ್ತು ನನ್ನ ಮಾವ ಹೊರಡಲು ಸಿದ್ದರಾದೆವು. ಅಷ್ಟರಲ್ಲಿಯೇ ಒಬ್ಬ ಮುದುಕರು ತನ್ನ ಕುರಿಯ ಮಂದೆಯ ಸಮೇತ ಅದೇ ದಾರಿಯಲ್ಲಿ ಬಂದರು . ತುಂಬಾ ದೂರದಿಂದ ಬಂದದಕ್ಕು ಮತ್ತು ಬಿಸಿಲು ಕೂಡ ಇದ್ದಿದ್ದರಿಂದ ಕುರಿಗಳು ನೆರಳಿನಲ್ಲಿ ಬಂದು ನಿಂತವು. ಸ್ವಲ್ಪ ಹೊತ್ತಾದ ಮೇಲೆ ಒಂದು ಕುರಿಯ ಹಿಂಡು ಮುಂದುವರಿಯಿತು. ಆದರೆ ಇನ್ನೊಂದು ಹಿಂಡಿನಲ್ಲಿ ಓಂದು ಕುರಿ ತಲೆ ಬಾಗಿ ನಿಂತತಕ್ಷಣ ಎಲ್ಲ ಕುರಿಗಳು ಹಾಗೆ ನಿಂತವು, ಅದಕ್ಕೆ ನಮ್ಮ ಮಾವ "ನೋಡು ಅದಕ್ಕೆ ಹೇಳೋದು ಒಂದು ಕುರಿ ತಲೆ ಬಗ್ಗಿಸಿದಿರೆ ಎಲ್ಲ ಕುರಿಗಳು ತಲೆಬಗ್ಗಿಸುತ್ತವೆ" ಎಂದು ತಮಾಷೆ ಮಾಡಿದರು. ಆ ಕ್ಷಣವನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲ್ಲಿಲ್ಲ, ಆ ಸಮಯದಲ್ಲಿ ತೆಗೆದ ಚಿತ್ರವಿದು.

ಈ ಜಾಗವು ನೋಡಲು ಸುಂದರವಾಗಿಯೂ ಮತ್ತು ಪ್ರಶಾಂತವಾಗಿದೆ. ಬೆಳೆಗ್ಗೆ ಹೊರಟು ಸಾಯಂಕಾಲಕ್ಕೆ ವಾಪಸ್ಸು ಬಂದು ಬಿಡಬಹುದು. ಸಣ್ಣ ಊರಾಗಿರುವುದರಿಂದ ಊಟ ಮತ್ತು ತಿಂಡಿಗೆ ಸ್ವಲ್ಪ ತಯಾರಿ ಮಾಡಿಕೊಂಡು ಹೋದರೆ ಒಳ್ಳೆಯದು. ದೇವಸ್ತಾನದ ಅರ್ಚಕರ ಮನೆ ಕೂಡ ಪಕ್ಕದಲ್ಲಿಯೇ ಇರುವುದರಿಂದ ಪೂಜೆ ಮಾಡಿಸಲು ಏನು ತೊಂದರೆ ಆಗದು.

5 comments:

 1. ಅರಳುಗುಪ್ಪೆ ದೇವಸ್ಥಾನ ಮತ್ತು ಶಿಲ್ಪದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಚಿತ್ರಸಹಿತ ನೀಡಿದ್ದೀರಿ. ನನಗೂ ಅದನ್ನು ನೋಡುವ ಆಸೆಯಾಗಿದೆ. ಅದಕ್ಕಾಗಿ ಧನ್ಯವಾದಗಳು.

  ReplyDelete
 2. thank you sir, ondu sala bheti kodi, nodabahudada sthala

  ReplyDelete
 3. ಮಾಹಿತಿ, ಚಿತ್ರಗಳು ಚೆನ್ನಾಗಿವೆ. ಇಂಥ ಅನೇಕ ದೇವಾಲಯಗಳು ನಮ್ಮ ಅನೇಕ ಹಳ್ಳಿ ಪಟ್ಟಣಗಳಲ್ಲಿ ಅಡಗಿವೆ, ಅವನ್ನು ಪ್ರಚಾರಪಡಿಸಬೇಕು. ಈ ವಿಚಾರದ ಬಗ್ಗೆ ನನ್ನ ಬಳಿ ಒಂದು ಯೋಜನೆ ಇದೆ, ಅದನ್ನು ಹೇಗೆ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ

  ReplyDelete
 4. ತುಂಬಾ ಖುಷಿಯಾಯ್ತು ಅರಳುಗುಪ್ಪೆ ದೇವಾಲಯದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಾ ನಾನು ಒಮ್ಮೆ ಹೋಗಿ ನೋದಬೇಕೆನ್ನಿಸಿದೆ.ನಿಮಗೆ ಧನ್ಯವಾದಗಳು.

  --
  ಪ್ರೀತಿಯಿಂದ ನಿಮ್ಮವ ಬಾಲು.

  ReplyDelete
 5. ನಿಮ್ಮ ಹತ್ತಿರ ಯೋಚನೆ, ಯೋಜನೆಗಳು ಇದ್ದರೆ ಹೇಳಿ, ನಾನು ಅದರಲ್ಲಿ ಭಾಗವಹಿಸಿ, ನನ್ನ ಕೈಲಾದ ಕೆಲಸವನ್ನು ಮಾಡುತ್ತೇನೆ.

  ReplyDelete