Monday, June 27, 2011

Firefox, Google Chrome

ಒಂದೊಂದು ದಿನ ಕಳೆದಂತೆಯು ತಂತ್ರಜ್ಞಾನದ ಪ್ರಪಂಚದಲ್ಲಿ ಹೊಸ ಹೊಸ ಬೆಳವಣಿಗೆಗಳು ಬರುತ್ತಾ ಇವೆ. ಈ ಬೆಳವಣಿಗೆಗೆ  ಗಣಕ  ತಂತ್ರಾಂಶದ ಪ್ರಪಂಚವು ಹೊರತಾಗಿಲ್ಲ.  ಆಪರೇಟಿಂಗ್  ಸಿಸ್ಟಮ್ , ಬ್ರೌಸರ್ಸ್ ಹೀಗೆ ಎಲ್ಲದರಲ್ಲೂ ಒಂದೊಂದು ಹೊಸ ಹೊಸ ವಿಷಯಗಳನ್ನು ಸೇರಿ ನವೀಕರನಗೊಂದು ಕಂಪ್ಯೂಟರ್ ಬಳಕೆದಾರನ ಮುಂದೆ ಬರುತ್ತಾ ಇದೆ. ಇದರ ಉಪಯೋಗವೆನೆಂದರೆ  ಬಳಕೆದಾರ ತ್ವರಿತವಾಗಿ ಮತ್ತು ಸುಲಲಿತವಾಗಿ ತನ್ನ ಕೆಲಸಗಳನ್ನು  ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ತನ್ನ ಮಾಹಿತಿಯನ್ನು ಭದ್ರತೆ ಇಂದ ಕಾಪಾಡಲು ಸಾಧ್ಯವಾಗಿದೆ. 

ಎಲ್ಲರಿಗು ತಿಳಿದಂತೆ ಗೂಗಲ್ ನ ಜಿ-ಮೇಲ್ ಒಂದು ಅತ್ಯಂತ ಸುಲಲಿತವಾಗಿ ಉಪಯೋಗಿಸುವಂತಹ ಒಂದು ಮೈಲಿಂಗ್ ಸಿಸ್ಟಮ್. ಸ್ವಲ್ಪ ಗಣಕ ಯಂತ್ರದ ಬಗ್ಗೆ ತಿಳುವಳಿಕೆ ಇರುವ ಬಳಕೆದಾರ ಅತ್ಯಂತ ಸುಲಲಿವಾಗಿ ಇದನ್ನು ಉಪಯೋಗಿಸಬಹುದಾಗಿದೆ.  ದಿನವು ಒಂದೊಂದು ಹೊಸ ಹೊಸ ಪ್ರಯೋಗಗಳನ್ನು ಮಾಡುವ ಗೂಗಲ್ ಮಾಹಿತಿ ಭದ್ರತೆಯ ಬಗ್ಗೆಯು ಕೂಡ ತುಂಬಾ ಜಾಕರೂಕತೆಯನ್ನು ವಹಿಸಿದೆ. ಇದರ ಫಲವಾಗಿ ಜಿ-ಮೇಲ್ ಬಳಕೆದಾರನಿಗೆ ಪಾಸ್ವರ್ಡ್ ಕಳೆದು ಹೋದ ಸಂದರ್ಭದಲ್ಲಿ   ಸೆಕ್ಯೂರಿಟಿ ಪ್ರಶ್ನೆಯನ್ನು ಕೇಳುವ ಜೊತೆಗೆ ಬಳಕೆದಾರನ ಮೊಬೈಲ್ ನಂಬರ್  ಮತ್ತು ಬೇರೆಯ ಇ-ಮೇಲ್ ವಿಳಾಸವನ್ನು ತೆಗೆದುಕೊಂಡು , ತನ್ನ ಜಿ-ಮೇಲ್  ಪಾಸ್ವರ್ಡ್ ಬದಲಿಸುವಾಗ ಮೊದಲೆಯೇ ಕೊಟ್ಟಿರುವ  ಮೊಬೈಲ್ ನಂಬರ್ ಅನ್ನು ಸಂಪರ್ಕಿಸುವ ವ್ಯವಸ್ತೆಯನ್ನು  ಮಾಡಿದೆ.  
Mozilla firefox

ಇಷ್ಟೇ ಅಲ್ಲದೆ ನಾವು ಅಂತರ್ಜಾಲವನ್ನು ಜಾಲಾಡಲು ಉಪಯೋಗಿಸುವ  ಬ್ರೌಸರ್ಸ್ ಕ್ಷೇತ್ರದಲ್ಲೂ ಹೊಸ ಹೊಸ ಮಾರ್ಪಾಡುಗಳು ಆಗುತ್ತಿವೆ. firefox  ಮತ್ತು google chrome   ನ ಮಧ್ಯೆ ಸ್ಪರ್ಧೆ ಉಂಟಾದಂತೆ ಆಗಿದೆ. ಸ್ವಲ್ಪ ದಿನಗಳ ಹಿಂದೆ firefox open source ಆಗಿ ಗ್ರಾಹಕನ ಮುಂದೆ ಬಂದಿದೆ. ಹಾಗೆ google chrome ತನ್ನ ಬ್ರೌಸರ್  ಅಲ್ಲಿ ಹೊಸ ಹೊಸ ಸವಲತ್ತುಗಳನ್ನೂ ತಂದಿದೆ . 

ಗೂಗಲ್ ನ ವೆಬ್ ಸ್ಟೋರ್ ಗೆ ಹೋದರೆ ನಿಮ್ಮ ಬ್ರೌಸರ್  ಅನ್ನು ನಿಮಗೆ ಬೇಕಾದ ತರಹ ಮಾರ್ಪಡಿಸಬಹುದಾಗಿದೆ. ಆನ್ಲೈನ್ ಆಟಗಳನ್ನು, ನ್ಯೂಸ್, ಎಡಿಟರ್ ಗಳು  , ಶಾಪಿಂಗ್ ಹೀಗೆ ಬೇಕಾದ ತರಹ ಪ್ಲಗಿನ್ ಗಳನ್ನೂ ತುಂಬಾ ಸುಲಭವಾಗಿ ನಿಮ್ಮ ಬ್ರೌಸರ್ ಅಲ್ಲಿ ಇನ್ಸ್ಟಾಲ್ ಮಾಡಿ ಉಪಯೋಗಿಸಬಹುದಾಗಿದೆ . ಮುಕ್ಕಾಲು ಪಾಲು ಪ್ಲಗಿನ್ ಗಳು ಉಚಿತವಾಗಿದ್ದು ಕೆಲವುಗಳಿಗೆ ದುಡ್ಡನ್ನು ಸಂದಾಯಿಸಬೇಕಾಗುತ್ತದೆ. https://chrome.google.com/webstore

ಈ ಲಿಂಕಿಗೆ ಹೋದರೆ ಸಾಕು ನಮಗೆ google  chrome ಅನ್ನು ಮಾರ್ಪಡಿಸಿಕೊಳ್ಳಲು ಬೇಕಾದ ಎಲ್ಲ ತಂತ್ರಾಂಶಗಳು ಸಿಗುತ್ತವೆ. ಅದೂ ಇಲ್ಲದಿದ್ದರೆ ನಿಮ್ಮ chrome ಬ್ರೌಸರ್ ನ ಹೊಸ ಟ್ಯಾಬ್ ಅನ್ನು ಒತ್ತಿ ಅಲ್ಲಿ "ವೆಬ್ ಸ್ಟೋರ್" ಅನ್ನು ಕ್ಲಿಕ್ಕ್ಕಿಸಿದರು ಅದು  ಮೇಲಿನ ಕೊಂಡಿಗೆ ಕರೆದೊಯ್ಯುತ್ತದೆ.  
Firebug

ಇನ್ನು mozilla firefox ಗೆ ಬಂದರೆ ಅದು ತನ್ನ ಗ್ರಾಹಕನಿಗೆ ಹೊಸ ಸವಲತ್ತುಗಳನ್ನು ಕೊಡುವಲ್ಲಿ ಮುಂಚೂಣಿಯಲ್ಲಿದೆ. firefox ನ  ಆಡ್-ಇನ್ಸ್  ಮತ್ತು   ಪ್ಲಗಿನ್ ಗಳು ಎಲ್ಲರಿಗು ಚಿರಪರಿಚಿತವಾಗಿರುವ ಸಂಗತಿ. ಇದು ನಮ್ಮ ಹಲವಾರು ಕಾರ್ಯಗಳನ್ನು  ಸುಲಲಿತವಾಗಿ ಮಾಡಲು ಸಹಾಯಕವಾಗಿದೆ. ಉದಾಹರಣೆಗೆ firebug ಎಲ್ಲರಿಗು ಚಿರಪರಿಚಿತವಾಗಿರುವ ಮತ್ತು ಬಹು ಉಪಯೋಗಿಯ ಒಂದು  ಪ್ಲಗಿನ್.. ಈಗ mozilla firefox ಗ್ರಾಹನಿಗೆ ತನ್ನ ಸ್ವಂತ ಆಡ್-ಆನ್ ಗಳನ್ನೂ ಸೃಜಿಸಿ ಉಪಯೋಗಿಸುವ ನಿಟ್ಟಿನಲ್ಲಿ ಒಂದು ವ್ಯವಸ್ತೆಯನ್ನು ಕಲ್ಪಿಸಿದೆ. 


  https://addons.mozilla.org/en-US/developers/tools/builder ಈ ಮೇಲಿನ ಕೊಂಡಿಯು firefox developer hub ಗೆ ಕರೆದೊಯ್ಯುತ್ತ್ತದೆ . ಇಲ್ಲಿ ಬಳಕೆದಾರ ತನಗೆ ಬೇಕಾಗಿರುವಂತಹ ಆಡ್-ಆನ್ ಗಳನ್ನೂ ಸೃಜಿಸಿ ಉಪಯೋಗಿಸಬಹುದು , ಆದರೆ ಇದನ್ನು ಸೃಜಿಸುವ ಮುನ್ನ ಬಳಕೆದಾರನಿಗೆ ಸಾಫ್ಟ್ವೇರ್ ಪ್ರೊಗ್ರಾಮ್ ಬರಿಯುವ ನಿಟ್ಟಿನಲ್ಲಿ ಮಾಹಿತಿ ಇರುವುದು  ಅವಶ್ಯಕವಾಗಿದೆ. ಆಡ್-ಆನ್ ಅನ್ನು ಸೃಜಿಸಿಯಾದ ತಕ್ಷಣ ನಿಮಗೆ ಅದು .zip ಅಲ್ಲಿ ದೊರೆಯುತ್ತದೆ . ಅದನ್ನ .zip ಬದಲಾಗಿ .xpi ಅಂತ ಹೆಸರನ್ನು ಮಾರ್ಪಡಿಸಿ ನಿಮ್ಮ mozilla ಬ್ರೋವರ್ ಗೆ  ಎಳೆದು ಹಾಕಿದರೆ ಸಾಕು ನಿಮ್ಮ ಸ್ವಂತ ಆಡ್-ಆನ್ ಕಾರ್ಯ ನಿರ್ವಹಿಸಲು ಆರಂಭವಾಗುತ್ತದೆ. ಅದರ ಪ್ರೊಗ್ರಾಮ್ ಅಲ್ಲಿ ನೀವು ನಿಮಗೆ ಬೇಕಾದಂತೆ ಮಾರ್ಪಡಿಸಿದರೆ ಸಾಕು ನಿಮಗೆ ಬೇಕಾದ ಕೆಲಸಗಳನ್ನು  ಅದರಿಂದ ಮಾಡಿಸಬಹುದಾಗಿದೆ. ಇನ್ನು ಮುಂದಿನ ದಿನಗಳಲ್ಲಿ  ಸಾಫ್ಟ್ವೇರ್ ಪ್ರೊಗ್ರಾಮ್ ನ ತಿಳುವಳಕೆ ಇಲ್ಲದಿದ್ದರೂ ಆಡ್-ಆನ್ ಗಳನ್ನೂ ಮತ್ತು ಪ್ಲಗ್ ಇನ್ ಗಳನ್ನೂ ಸೃಜಿಸಿ ಉಪಯೋಗಿಸುವ ಸವಲತ್ತುಗಳನ್ನು ಮೊಜಿಲ್ಲ ಫೈರ್ಫಾಕ್ಸ್ ತರಲಿ ಎಂದು ಆಶಿಸೋಣ.

ಚಿತ್ರ ಕೃಪೆ: ಅಂತರ್ಜಾಲದಿಂದ