Tuesday, September 21, 2010

 September 18, 2010               ನೆನ್ನೆ ರಾತ್ರಿ ಎಂದಿನಂತೆ ಆಫೀಸಿನಿಂದ 45G ಬಸ್ ಹಿಡಿದು ಮನೆಗೆ ಹೊರಟೆ, ಸಮಯ 9:45PM ಆಗಿತ್ತು. ಕತ್ರಿಗುಪ್ಪೆ ಸ್ಟಾಪ್ ಬರುವುದರಲಿತ್ತು. ಅದರ ಹಿಂದಿನ ಸ್ಟಾಪ್ ಹತ್ತಿರ ರಾಜಸ್ಥಾನ ಮೂಲದ ತಾಯಿ ಮತ್ತು ಮಗಳು ಕೋರಮಂಗಲದ ಬಸ್ಸಿಗಾಗಿ ಕಾಯುತ್ತಿದ್ದರು. ಈ ಬಸ್ಸು ನಿಂತ ಕೂಡಲೆ ಅವರು ಇದು ಕೋರಮಂಗಲ ಹೋಗುತ್ತಾ ಅಂತ ಕೇಳಿದರು. ಬಸ್ಸ್ ಡ್ರೈವರ್ ಹೌದು ಎಂದು ಅವರನ್ನು ಹತ್ತಿಸಿಕೊಂಡರು. ಆದರೆ ಅದರ ಕೊನೆ ಸ್ಟಾಪ್ ಕಾಮಕ್ಯ ಆಗಿತ್ತು. ನಾವು ಡ್ರೈವರ್ ಗೆ ಇದು ಕೋರಮಂಗಲ ಹೋಗುವುದಿಲ್ಲವಲ್ಲ ಎಂದು ಕೇಳಿದೆವು.
           ಈ ಮಾತಿಗೆ ಆತನು ಕೊಟ್ಟ ಉತ್ತರ ನಿಜವಾಗಲು ಅರ್ಥಪೂರ್ಣವಾಗಿತ್ತು. " ಇವರು ಬೇರೆ ಕಡೆಯವರು, ಈಗಾಗಲೆ ಸಮಯ ಬಹಳ ಆಗಿದೆ, ಇವರಿಗೆ ಕೋರಮಂಗಲದ ದಾರಿ ಮತ್ತು ಬಸ್ಸು ಗೊತ್ತಿಲ್ಲ. ಹೀಗೆ ನಿಂತಿದ್ದರೆ ಇಲ್ಲೆ ಉಳಿದುಬಿಡುತ್ತಾರೆ, ಅದರ ಬದಲು ಕಾಮಕ್ಯ ಬಸ್ಸ ಡಿಪೋ ಹತ್ತಿರ ಬಿಟ್ಟರೆ ಹೇಗೋ ಹೋಗುತ್ತಾರೆ, ಟಿಕೆಟ್ಟು ಏನು ಬೇಡ " ಎಂದನು. ಡ್ರೈವರ್ ನ ಈ ಮಾತಿಗೆ ಅವನ ಹತ್ತಿರ ಇದ್ದ ಜನ ಅವನಿಗೆ ವಂದಿಸಿ ಹೊರಟರು. ಈ ಕಾಲದಲ್ಲು ಅದು ಬೆಂಗಳೂರಲ್ಲಿ ಅಪರೂಪಕ್ಕೆ ಇಂಥ ಜನ ಕಾಣಸಿಗುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡು ನನ್ನ ಸ್ಟಾಪ್ ಇಳಿದುಕೊಂಡೆ.

6 comments:

  1. ಚಿನ್ಮಯ ನಿಮ್ಮ ಬ್ಲಾಗ್ ಪ್ರಪಂಚದ ಮೊದಲ ಹೆಜ್ಜೆಗೆ ಸ್ವಾಗತ...ನಾವೆಲ್ಲ ನಿಮ್ಮ ಹಿಂದೆ ಇದ್ದೇವೆ..ನಿಮ್ಮ ಮನದ ವಿಚಾರಗಳ ಮಂಥನಕ್ಕೆ ಉತ್ತಮ ವೇದಿಕೆಯಿದು...
    ಒಳ್ಲೆಯ ಪ್ರಾರಂಭ...ನಕಾರಗಳ ಮಧ್ಯೆ ಸಕಾರದ ಒಂದು ವ್ಯಕ್ತಿತ್ವದ ಪರಿಚಯ ಮಾಡುವ ಮೂಲಕ ನಿಮ್ಮ ಚೊಚ್ಚಲ ಪೋಸ್ಟ್ ಗೆ ಶುಭವಾಗಲಿ...

    ReplyDelete
  2. ಚಿನ್ಮಯ್,
    ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಒಳ್ಳೆಯ ವಿಚಾರದಿಂದ ಮೊದಲ ಪೋಸ್ಟ್ ಹಾಕಿದ್ದೀರಾ, ನಿಮ್ಮ ಬ್ಲಾಗ್ ಪ್ರಯಾಣ ಹೀಗೆ ಮುಂದುವರೆಯಲಿ.

    ReplyDelete
  3. ಚಿನ್ಮಯ್ ;ಬ್ಲಾಗ್ ಲೋಕಕ್ಕೆ ಸ್ವಾಗತ.ಬರಹ ಚೆನ್ನಾಗಿದೆ.ಇನ್ನೂ ಹೆಚ್ಚು ಬರಹಗಳು ಬರಲಿ.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.ನಮಸ್ಕಾರ.

    ReplyDelete
  4. ಚಿನ್ಮಯ್ ಸರ್,

    ಬ್ಲಾಗ್ ಲೋಕಕ್ಕೆ ಸ್ವಾಗತ. ಮೊದಲ ಬರಹದಲ್ಲೇ ಅಪ್ತತೆ ಫೀಲ್ ಆಗುವಂತೆ ಬರೆದಿದ್ದೀರಿ. ಮತ್ತೆ ಯಾವುದೇ ಗಿಮಿಕ್ ಮತ್ತು ಮಸಾಲೆಗಳಿಲ್ಲದ ಇಂಥ ನೇರ ಸಹಜ ಬರಹಗಳು ತುಂಬಾ ಚೆನ್ನಾಗಿರುತ್ತವೆ. ಮತ್ತೆ ಹೀಗೆ ಚಿಕ್ಕದಾಗಿದ್ದರಂತೂ ಸೂಪರ್...
    ಮುಂದುವರಿಯಿರಿ...all the best!

    ReplyDelete
  5. ಬ್ಲಾಗ್ ಲೋಕಕ್ಕೆ ಸ್ವಾಗತ..
    ಶುಭವಾಗಲಿ....

    ReplyDelete
  6. ನಿಮ್ಮ ಬ್ಲಾಗ್ ಹೆಸರು ತುಂಬಾ ಇಷ್ಟ ಆಯ್ತು ಹಾಗೆ ನಿಮ್ಮ ಮೊದಲ ಬರಹವು ಸಹ ಚನ್ನಾಗಿದೆ ಶುಭವಾಗಲಿ ಮುಂದುವರೆಸಿ

    ReplyDelete