ಹೊಸ ವರ್ಷದ ಶುಭಾಶಯಗಳು
Thursday, December 30, 2010
Tuesday, December 28, 2010
ಕನ್ನಡವೆ ಸತ್ಯ ಅಶ್ವಥ್ ನಿತ್ಯ
ಕರ್ನಾಟಕದ ಗಾನ ಗಾರುಡಿಗ ಸಿ.ಅಶ್ವಥ್ ಅವರು ದಿವಂಗತರಾಗಿ ಒಂದು ವರ್ಷ ಸಂದಿದೆ. ಇದರ ಸ್ಮರಣಾರ್ಥವಾಗಿ ಕನ್ನಡ ಸಂಸ್ಕೃತಿ ಇಲಾಖೆ "ಕನ್ನಡವೆ ಸತ್ಯ ಅಶ್ವಥ್ ನಿತ್ಯ" ಎಂಬ ಕಾರ್ಯಕ್ರಮವನ್ನು ಇಂದು , ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಹಲವು ಸಾಹಿತ್ಯಾಸಕರು, ಗಾಯಕರು, ನೃತ್ಯಪಟುಗಳು ಭಾಗವಹಿಸುತ್ತಿದ್ದಾರೆ .
ಅಷ್ಟೇ ಅಲ್ಲದೆ ಹೊರದೇಶದ ಕನ್ನಡಿಗರು ಸಹ ಬರುತ್ತಿದ್ದರೆ. ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸಿ .ಅಶ್ವಥ್ರವರ ಶಿಷ್ಯರಾದ ಕಿಕ್ಕೇರಿ ಕೃಷ್ಣಮೂರ್ತಿ ಅವರು ವಹಿಸಿಕೊಂಡಿದ್ದಾರೆ. ಸಿ .ಅಶ್ವಥ್ ರವರು ಹಾಡಿರು ಹಾಡುಗಳನ್ನು ಇಲ್ಲಿ ಹಾಡುವುವರಿದ್ದಾರೆ. ಸಾಯಂಕಾಲ 5 :30 ಇಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ.ಈ ಕಾರ್ಯಕ್ರಮವನ್ನು ಆಯೋಜಿಸಲು ಒಂದು ವರ್ಷದಿಂದ ಸತತವಾಗಿ ಕೆಲಸದಲ್ಲಿ ನಿರತರಾಗಿದ್ದಾರೆ.
ನೆನ್ನೆ ಊರಿನಿಂದ ಬರುವಾಗ ಶಿವಮೊಗ್ಗದ ತಂಡದವರು ನಮ್ಮ ಜೊತೆ ಸಹ ಪ್ರಯಾಣ ಮಾಡುತ್ತಿದ್ದರು. ಹಾಡನ್ನು ಅಭ್ಯಯಿಸಲು ಯಾವ ಜಾಗವಾದರೇನು ಎಂದು ರೈಲಿನಲ್ಲೇ ಅವರೇ ಸಂಗೀತ ಕಚೇರಿ ಶುರುವಾಗಿತ್ತು. ಸುಗಮ ಸಂಗೀತದ ಹಾಡುಗಳು ನಿಜವಾಗಲು ಸುಗುಮವಾಗಿದ್ದವು. ಶಿವಮೊಗ್ಗದಿಂದ 100 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುತ್ತಿದ್ದಾರೆ ಮತ್ತು ಅವರ ತಂಡದ ಹೆಸರು "ಪ್ರತಿಭಾ ರಂಗ".
ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನನಗೆ ದೊರಕಿದ ಮಾಹಿತಿ ಮೇರೆಗೆ ಪ್ರವೇಶವು ಉಚಿತವಾಗಿದೆ.
ನಾಗವಲ್ಲಿ
ಚಿತ್ರ : ಅಂತರ್ಜಾಲದಿಂದ |
ಇವತ್ತು ಮಧ್ಯಾನ ಆಫೀಸಿಗೆ ಊರಿಂದ ಡೈರೆಕ್ಟಾಗಿ ಹೋದೆ. ಸ್ವಲ್ಪ ಹೊತ್ತಿನಲ್ಲಿ ನಮ್ಮ ವೆಬ್ ದಿಸೈಜ್ಞೆರ್ ಅಜಯ್ ಬಂದ. ಬಂದವನೇ ಉಭಯ ಕುಶಲೋಪರಿ ಕೇಳಿ ತಾನು ಆಫೀಸಿನಲ್ಲಿ ನಾಗವಲ್ಲಿಯನ್ನು ನೋಡಿದೆ ಎಂದು ಹೇಳಿದ. ನಾನು ಒಂದು ಸಲ ಆಶ್ಚರ್ಯಪಟ್ಟು "ಏನಯ್ಯ ಸಾಫ್ಟ್ ವೇರ್ ಆಫೀಸಿನಲ್ಲಿ ನಾಗವಲ್ಲಿ ಎಲ್ಲಿಂದ ಬರಬೇಕಯ್ಯ " ಎಂದು ಕೇಳಿದೆ.
ಅದಕ್ಕೆ ಅವನು " ಇಲ್ಲ ನಿಜವಾಗಲು ನೋಡಿದೆ, ಆ ಕಣ್ಣುಗಳನ್ನು ನೋಡಲು ನಿಜವಾಗಲು ಭಯಾನಕವಾಗಿದೆ, ಹೆದರಿಕೆ ಆಗುತ್ತದೆ" ಅಂದ.
"ನೆನ್ನೆ ನಾಗವಲ್ಲಿ ಫಿಲಂ ನೋಡಿದೆ, ರಾತ್ರಿಯೆಲ್ಲ ಆ ಕಣ್ಣುಗಳು ಕನಸಿನಲ್ಲಿ ಬರ್ತಾ ಇದ್ದವು, ಇವತ್ತು ಆಫೀಸಿಗೆ ಬಂದರೆ ಆ ಹುಡುಗಿಯ ಕಣ್ಣು ಅದೇ ಥರ ಭಯಾನಕ ವಾಗಿದೆ. ಬೇಕಾದರೆ ನೀನೆ ನೋಡು" ಎಂದು ಮತ್ತೆ ಹೇಳಿದ.
ಆಯ್ತಪ್ಪ ಯಾರು ಅದು , ತೋರಿಸು ಎಂದು ಕೇಳಿದೆ. ಅದಕ್ಕೆ ಮಾರ್ಕೆಟಿಂಗ್ ಟೀಂ ಅಲ್ಲಿ ಇರುವ ಒಂದು ಹುಡುಗಿಯೇ ನಾಗವಲ್ಲಿ ಎಂದು ಹೇಳಿದ. ಸ್ವಲ್ಪ ಹೊತ್ತಿನ ನಂತರ ಮಾರ್ಕೆಟಿಂಗ್ ಹೆಡ್ ಆದ ಸುಮಿತ್ರ ಅವರನ್ನು ಕರೆದು "ಏನ್ ರೀ ನಿಮ್ಮ ಜೂನಿಯರ್ ಸೇಮ್ ನಾಗವಲ್ಲಿ ಥರ ಇದ್ದಾರೆ " ಎಂದು ಬಿಟ್ಟ. ಅವರು ಹೋಗಿ ಆ ಹುಡುಗಿ ಹತ್ತಿರ ನೀನು ನಾಗವಲ್ಲಿ ಅಂತೆ ಎಂದು ಹೇಳಿಬಿಟ್ಟರು.
"ಆ ನಾನು ನಾಗವಲ್ಲಿ ನಾ ? ಯಾರು ಹೇಳಿದ್ದು ಆ ಥರ? ಎಷ್ಟು ಧೈರ್ಯ? ", ಎಂದು ಗಲಾಟೆ ಮಾಡಿಕೊಂಡು ಅಜಯ್ ಹುಡುಕಿಕೊಂಡು ಬಂದಳು.
ನಾನು " ಅಜಯ್ ಈಗ ನಿನ್ನ ನಾಗವಲ್ಲಿ ಬರ್ತಾ ಇದೆ, ಹುಷಾರಾಗಿ ಬಚ್ಹಾವಾಗಣ್ಣ" ಎಂದೇ.ಏನು ಮಾಡಲು ಹೊಳೆಯದೆ ಅಜಯ್ ಹೆಡ್ಫೋನ್ ಗಳನ್ನೂ ಕಿವಿಯಲ್ಲಿ ಹಾಕಿಕೊಂಡು ಕಂಪ್ಯೂಟರ್ ಮುಂದೆ ಕೂತುಬಿಟ್ಟ.
ಆ ಹುಡುಗಿ ಬಂದು " ಅಜಯ್ , ಎಷ್ಟು ಧೈರ್ಯ ನನಗೆ ನಾಗವಲ್ಲಿ ಅಂತ ಕರೆಯೋಕೆ? ಈಗ ಕರೆಯಿರೀ ನೋಡೋಣ , ಕಿವಿಯಲ್ಲಿ ಹೆಡ್ಫೋನ್ ಗಳನ್ನೂ ಹಾಕಿಕೊಂಡು ಕೂತಿದ್ದಿರಲ್ಲ? ಇನ್ನೊಂದ್ಸಲ ಕರೆದರೆ ಸರಿ ಇರಲ್ಲ. ನಾನು ಯಾವಾಗ ನಿಮಗೆ ನಾಗವಲ್ಲಿ ಥರ ಕಂಡೆ? " ಎಂದು ಕೇಳಿದರು.
ಅಜಯ್ "ಆ ಏನು ಹೇಳಿದೆಯೋ ಕೇಳಿಸಲಿಲ್ಲ, ಹಾಡನ್ನು ಕೇಳ್ತಾ ಇದ್ದೀನಿ " ಅಂದ.ಅವನ ಗ್ರಹಚಾರಕ್ಕೆ ಹೆಡ್ಫೋನ್ ಹಾಕಿಕೊಂಡಿದ್ದ ಹೊರತು ಯಾವ ಹಾಡನ್ನು ಪ್ಲೇ ಮಾಡುತ್ತಾ ಇರಲಿಲ್ಲ. ಇದನ್ನು ಗಮನಿಸಿ ಆ ಹುಡುಗಿಯ ಸಿಟ್ಟು ಇನ್ನು ಜಾಸ್ತಿ ಆಯಿತು. ಕೊನೆಗೆ ಅದರಿಂದ ಬಚಾವಾಗುವ ಹೊತ್ತಿಗೆ ನಿಜವಾಗಲು ನಾಗವಲ್ಲಿ ನೋಡಿದವನ ಥರ ಬಿಳಿಚುಕೊಂಡು ಹೋಗಿದ್ದ.
Sunday, December 12, 2010
ಚೀನಾದ ತೂಗು ದೇವಸ್ತಾನ
ಚೀನಾವು ತನ್ನದೇ ಆದ ಪರಂಪರೆ ಮತ್ತ್ತು ಸಂಸ್ಕೃತಿಯನ್ನು ಹೊಂದಿದೆ. ನೋಡಲು ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅದರಲ್ಲಿ ಹೆಂಗ್ಶಾನ್ ಪರ್ವತದಲ್ಲಿರುವ ತೂಗುವ ಮಂದಿರುವು ಒಂದು. ದೂರದಿಂದ ನೋಡಲು ತೂಗುವಂತೆ ಕಂಡರೂ ವಾಸ್ತವದಲ್ಲಿ ಇದು ಮರದ ದಿಮ್ಮಿಗಳ ಮೇಲೆ ನಿಂತಿದೆ. ಇದು ಹೆಂಗ್ಶಾನ್ ಪರ್ವತದ ಬುಡದಲ್ಲಿದೆ. ಇದನ್ನು ಉತ್ತರ ವೇಯ್ ರಾಜವಂಶದವರು (386 -534 A .D ) ಕಟ್ಟಿದರು. 1900 ರಲ್ಲಿ ಇದ್ದರ ಜೀರ್ಣೋದ್ದಾರ ಮಾಡಲಾಯಿತು. ಹೆಂಗ್ಶಾನ್ ಪರ್ವತವು ಧಾರ್ಮಿಕ ಮತ್ತು ಪವಿತ್ರ ಪರ್ವತವಾಗಿದ್ದು 2020 ಮಿ. ಉದ್ದವಿದೆ. ದಾಟೊಂಗ್ ಎಂಬ ಊರಿನ ದಕ್ಷಿಣಕ್ಕೆ ಈ ಪರ್ವತವಿದೆ. ಇಲ್ಲಿ ಕಾಂಫುಸಯಾನಿಸ್ಮ್ , ತಾವೊಇಸಂ , ಬುದ್ದಿಸಮ್ ಜಾತಿಯ ಪೂಜೆ ಮತ್ತು ವಿಧಿ ವಿಧಾನಗಳನ್ನು ಕಾಣಬಹುದಾಗಿದೆ. ಇದು ನೆಲ ಮಟ್ಟದಿಂದ 75 ಮಿ. ಎತ್ತರವಿದೆ. ಇದರ ಕಟ್ಟಡ ವಿನ್ಯಾಸವು ಸೋಜಿಗವೆನಿಸುತ್ತದೆ. ಈ ಪರ್ವತದಲ್ಲಿರುವ ಒಂದೊಂದು ಗುಹೆಗಳನ್ನು ಸೇತುವೆ ಮತ್ತು ಕಾಲುದಾರಿಗಳಿಂದ ಸಂಪರ್ಕಿಸಲಾಗಿದೆ.
ಈ ದೇವಸ್ತಾನದ ನಿರ್ಮಾಣ ಶೈಲಿಯನ್ನು ಅಧ್ಯಯನ ಮಾಡಲು ಜರ್ಮನಿ, ಇಟಲಿ , ಬ್ರಿಟೈನ್ ಹೀಗೆ ಮುಂತಾದ ದೇಶಗಳಿಂದ ಬರುತ್ತಾರೆ. ಅವರ ಪ್ರಕಾರ ಇದು ಚೀನಿಯರ ಸಂಸೃತಿ ಮತ್ತು ಕುಶಲತೆಯನ್ನು ತೋರಿಸುತ್ತದೆ. ಇನ್ನು ಈ ದೇವಸ್ತಾನವನ್ನು ಹೀಗೆ ಯಾಕೆ ಕಟ್ಟಿದರು ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರ ಈ ರೀತಿ ಇದೆ: ಇದು ಪರ್ವತದ ಮೇಲೆ ಇರುವುದರಿಂದ ಪ್ರವಾಹಗಳಿಂದ ರಕ್ಷಿಸುತ್ತದೆ, ಪರ್ವತದ ತುದಿಯು ಚಾವಣಿಯಂತೆ ಮಂಜು ಮತ್ತು ಮಳೆಯಿಂದ ರಕ್ಷಿಸುತ್ತದೆ. ಸುತ್ತಲು ಇರುವ ಪರ್ವತವು ದೇವಸ್ತಾನವನ್ನು ಸೂರ್ಯನ ಹೊಡೆತದಿಂದ ರಕ್ಷಿಸುತ್ತದೆ. ಎರಡನೆಯ ಕಾರಣವೆಂದರೆ ಇದು ತಾವೊಇಸಂ ಶೈಲಿಯನ್ನು ಅನುಕರಿಸುತ್ತದೆ ಮತ್ತು ಕೋಳಿಗಳ ಕೂಗು ಮತ್ತು ನಾಯಿಗಳ ಕೂಗಾಟದ ಶಬ್ದವನ್ನು ಕಡಿಮೆ ಮಾಡುತ್ತದೆ. ಇಲ್ಲ್ಲಿ ಅಡ್ಡಹೆಟ್ಟಿಗೆಗಳನ್ನೂ ಪರ್ವತದ ಒಳಗೆ ತೂರಿಸಿ ತಳದ ಬುನಾದಿಯನ್ನಾಗಿ ಮಾಡಿ ಬಂಡೆಗಳನ್ನು ಗೋಡೆಗಳನ್ನಾಗಿ ಉಪಯೋಗಿಸಲಾಗಿದೆ.
:ಚಿತ್ರಗಳು ಅಂತರ್ಜಾಲದಿಂದ
Saturday, December 11, 2010
ಗಯಾನಾದ ಪ್ರಾಣಿ ಪಕ್ಷಿಗಳು
ಈಗ ವಿವರಿಸಲು ಹೊರಟಿರುವ ಪ್ರಾಣಿ ಪಕ್ಷಿಗಳು, ಗೆರಾಲ್ಡ್ ಡುರೆಲ್ ಅವರು ತಮ್ಮ " ತ್ರೀ ಟಿಕೆಟ್ಸ್ ಟು ಅಡ್ವೆಂಚರ್" ಪುಸ್ತಕದಲ್ಲಿ ಹೇಳಿರುವ ಪ್ರಾಣಿಗಳು. ಈ ಪುಸ್ತಕವನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಲ್ಲೇನಿಯಂ-16 ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಒಳ್ಳೆಯ ವಿಷಯಗಳನ್ನು ಮತ್ತು ನಾವು ಕಾಣದೆ ಕೇಳದೆ ಇರುವ ಪ್ರಾಣಿ-ಪಕ್ಷಿಗಳ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ಗಯಾನಾದ ನಿಸರ್ಗ ಸಂಪನ್ಮೂಲಗಳ ಬಗ್ಗೆಯೂ ವಿವರಿಸಲಾಗಿದೆ. ಅದರಲ್ಲಿ ಬರುವ ಪ್ರಾಣಿಗಳ ಬಗ್ಗೆ ಒಂದು ಸಣ್ಣ ಇಣುಕು ನೋಟ.
ಪಿರಾನ್ಹ ಮೀನು: ಈ ಮೀನುಗಳು ಗಯಾನಾದ ನೀರುಗಳಲ್ಲಿ ಕಾಣಸಿಗುತ್ತವೆ. ಇವುಗಳು ತುಂಬಾ ಚೂಪಾದ ಮತ್ತು ಬಲವಾದ ಹಲ್ಲುಗಳನ್ನು ಪಡೆದಿದ್ದು ಮನುಷ್ಯನನ್ನು ಮೂಳೆಗಳ ತನಕ ತಿನ್ನುವ ಶಕ್ತಿಯನ್ನು ಪಡೆದಿವೆ. ಕೆಲವು ಉದಾಹರಣೆಗಳ ಪ್ರಕಾರ ಇಡೀ ಮನುಷ್ಯನನ್ನು 55 ಸೆಕೆಂಡಿನಲ್ಲಿ ಸಂಪೂರ್ಣವಾಗಿ ತಿನ್ನಬಲ್ಲವು.
ಸ್ಕಿಮ್ಮರ್: ಈ ಪಕ್ಷಿಗಳು ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಕಾಣಸಿಗುತ್ತವೆ. ಇವುಗಳ ಮೇಲನೆಯ ಕೊಕ್ಕು ಸಣ್ಣದಿದ್ದು, ಕೆಳಗಡೆಯ ಕೊಕ್ಕು ಉದ್ದವಿದೆ. ಹಾರಾಟದ ಸಮಯದಲ್ಲಿ ಮೀನುಗಳನ್ನೂ ಹಿಡಿಯಲು ತಮ್ಮ ಕೆಳಗಡೆಯ ಕೊಕ್ಕನ್ನು ಉಪಯೋಗಿಸುತ್ತವೆ ಮಾತು ಆಹಾರವನ್ನು ನುಂಗಲು ಸಣ್ಣ ಕೊಕ್ಕನ್ನು ಉಪಯೋಗಿಸುತ್ತವೆ.
ಹೌಲರ್ ಮಂಗಗಳು: ಹೌಲರ್ಗಳು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಕೂಗುವ ಧ್ವನಿಗಳಿಂದ ಇವುಗಳಿಗೆ ಹೌಲರ್ ಎಂಬ ಹೆಸರು ಬಂದಿದೆ. ಸಾಮಾನ್ಯವಾಗಿ ಸಾಯಂಕಾಲದ ಸಮಯದಲ್ಲಿ ಇವುಗಳು ಜೋರಾಗಿ ಕೂಗಲು ಶುರು ಮಾಡಿದರೆ ಇವುಗಳ ಧ್ವನಿಯನ್ನು 5 ಮೈಲಿಗಳ ತನಕ ಕೇಳಬಹುದು.
ಅರಪೈಮ ಮೀನು: ಇವುಗಳು ಸಿಹಿ ನೀರಿನಲ್ಲಿ ಜೀವಿಸುವ ದೊಡ್ಡ ಮೀನುಗಳು.ಇವುಗಳು 11 ರಿಂದ 12 ಅಡಿ ಉದ್ದವಿದ್ದು 300 ಕೆ.ಜಿ.ತನಕ ತೂಗುತ್ತವೆ. ಇವುಗಳು ಸಣ್ಣ ಮೀನು ಮತ್ತು ಇತರ ಪ್ರಾಣಿಗಳನ್ನು ಭಕ್ಷಿಸುತ್ತವೆ. ಅಮಜೊನ್ ನದಿಗಳಲ್ಲಿ ಇವುಗಳು ಕಾಣಸಿಗುತ್ತವೆ.
ಕಪಿಬಾರ: ಇವುಗಳು ಇಲಿಗಳ ಜಾತಿಗೆ ಸೇರಿದ ಪ್ರಾಣಿ. ಇವುಗಳು ದೊಡ್ಡ ಗಾತ್ರದ ಇಲಿಗಳಾಗಿ ಕಾಣಸಿಗುತ್ತವೆ. ಇವುಗಳ ಹಿಂದಿನ ಕಾಲುಗಳು ಮುಂದಿನ ಕಾಲುಗಳಿಗಿಂತ ಚಿಕ್ಕದಾಗಿದ್ದು ನಿಂತಾಗಲು ಕೂಡ ಕೂತಂತೆ ಕಾಣುತ್ತವೆ.
ಆರ್ಮಡಿಲ್ಲೋ: ಸ್ಪಾನಿಶ್ ಭಾಷೆಯಲ್ಲಿ ಆರ್ಮಡಿಲ್ಲೋ ಎಂದರೆ "ಕವಚವಿರುವ ಸಣ್ಣ ಜೀವಿ" ಎಂದು ಅರ್ಥ. ಇವುಗಳ ತಲೆ, ಕಾಲುಗಳು ಮತ್ತು ಬಾಲಕ್ಕೆ ಮೂಳೆಯ ಕವಚವಿದ್ದು ನೋಡಲು ಸುಂದರವಾಗಿರುವುದಿಲ್ಲ. ಕವಚವಿರುವ ಏಕೈಕ ಸಸ್ತನಿ ಪ್ರಾಣಿ ಇದು. ಇರುವೆಭಕ್ಷಕ ಜಾತಿಗೆ ಹೋಲುವ ಇವುಗಳು ಚೂಪನೆಯ ಮೂತಿ ಮಾತ್ತು ಸಣ್ಣ ಗಾತ್ರದ ಕಣ್ಣುಗಳನ್ನು ಪಡೆದಿವೆ. ಇವುಗಳ ಹಲವು ಬಣ್ಣ, ಗಾತ್ರದಲ್ಲಿ ಕಾಣಸಿಗುತ್ತವೆ. 6 ಇಂಚಿನಿಂದ 5 ಅಡಿ ಉದ್ದವಿರುತ್ತವೆ. ಕಪ್ಪು, ಕೆಂಪು, ಕಂದು ಬಣ್ಣಗಳಲ್ಲಿ ಕಾಣಸಿಗುತ್ತವೆ.
ಅಗೌಟಿ: ಇವುಗಳು ಬಾಲವಿಲ್ಲದ ಸಣ್ಣ ಪ್ರಾಣಿಗಳು. ಇವುಗಳ ಮುಖ್ಯ ಆಹಾರ ಹಣ್ಣುಗಳು ಮತ್ತು ಬೀಜಗಳು. ಆಹಾರವು ಜಾಸ್ತಿ ದೊರಕಿದಾಗ ಅವುಗಳನ್ನು ತಮ್ಮ ವಾಸಿಸುವ ಸುತ್ತಳತೆಯಲ್ಲಿ ಬಚ್ಚಿ ಇಡುತ್ತವೆ. ಆಹಾರಕ್ಕೆ ಕೊರತೆ ಬಂದಾಗ , ಈ ರೀತಿ ಮುಚ್ಚಿದ ಆಹಾರವನ್ನು ಉಪಯೋಗಿಸುತ್ತವೆ. ಆದರೆ ಸಾಮಾನ್ಯವಾಗಿ ಇವುಗಳು ತಾವು ಬಚ್ಚಿಟ್ಟಿದ್ದ ಸ್ಥಳಗಳನ್ನು ಮರೆತು ಬಿಡುತ್ತವೆ.
ಕಪುಚಿನ್ ಮಂಗಗಳು: ಇವುಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದ ಕಾದ್ಗಳಲ್ಲಿ ಕಾಣಸಿಗುತ್ತವೆ. ಮಂಗಗಳಲ್ಲಿಯೇ ಬುದ್ದಿವಂತ ಮಂಗಗಳು ಎಂದು ಹೆಸರು ಪಡೆದಿವೆ. ತಲೆಯ ಮೇಲೆ ಟೋಪಿಯ ತರಹ ಕೂದಲಿದ್ದು, ದುಂಡನೆಯ ಮುಖವಿರುತ್ತವೆ. ಇವುಗಳ ದೇಹ 30 ರಿಂದ 55 ಸೆ.ಮಿ.ಉದ್ದವಿದ್ದು, ಬಾಲವು ದೇಹದಷ್ಟೇ ಉದ್ದವಿರುತ್ತವೆ. ತೆಳು ಕಂದು ಬಣ್ಣದಿಂದ ಕಪ್ಪು ಬಣ್ಣವಿರುತ್ತವೆ.
ಗೋಲಿಯತ್ ಕಪ್ಪೆ: ಕಪ್ಪೆಗಳಲ್ಲಿ ಇವುಗಳು ದೊಡ್ಡ ಗಾತ್ರವಿದು , ಹೆಗ್ಗಣಗಳನ್ನು ಕೂಡ ಸಲೀಸಾಗಿ ನುಂಗಬಲ್ಲವು.
ಪಿಗ್ಮಿ ಕಪ್ಪೆ: ಕಪ್ಪೆಯ ಜಾತಿಯಲ್ಲಿಯೇ ಇವುಗಳು ತುಂಬಾ ಚಿಕ್ಕ ಗಾತ್ರದ ಕಪ್ಪೆಗಳು. ಏನೂ ತೊಂದರೆ ಇಲ್ಲದೆ ಇವುಗಳು ನಿಮ್ಮ ಬೆರಳಿನ ತುದಿಯಲ್ಲಿ ಕೂರಬಲ್ಲವು. ಗಂಡುಗಳು 1 ಸೆ.ಮಿ ಉದ್ದವಿದ್ದು ಹೆಣ್ಣುಗಳು ಅರ್ಧ ಸೆ.ಮಿಗಿಂತ ಕಡಿಮೆ ಇರುತ್ತವೆ.
ಪೀಪಾ ಕಪ್ಪೆ: ಇವುಗಳು ಚಪ್ಪಟೆ ದೇಹವನ್ನು ಹೊಂದಿದ್ದು ಹೆಣ್ಣು ಕಪ್ಪೆಗಳು ಮೊಟ್ಟೆಗಳನ್ನು ತನ್ನ ಬೆನ್ನಿನ ಮೇಲೆ ಹೊತ್ತು ತಿರುಗತ್ತವೆ. ಮೊಟ್ಟೆ ಇದುವ ಸಮಯದಲ್ಲಿ ಇವುಗಳ ಚರ್ಮವು ಮೆತ್ತುಗಾಗಿ ಮೊಟ್ಟೆ ಇಡಲು ಸಹಾಯಕವಾಗುತ್ತವೆ.
ಸ್ಕ್ವಿರೆಲ್ ಮಂಗ: ಇವುಗಳು ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ಮಾತು ಅಮೆಜೊನ್ ಕಾಡುಗಳಲ್ಲಿ ಕಾಣಸಿಗುತ್ತವೆ. ಇವುಗಳು ಚಿಕ್ಕ ಗಾತ್ರದಲಿದ್ದು ಹಳದಿ, ಕೇಸರಿ ಬಣ್ಣದ ತುಪ್ಪಳವನ್ನು ಹೊಂದಿವೆ. ಕತ್ತು ಮತ್ತು ಕಿವಿಗಳು ಬೆಳ್ಳಗಿದ್ದು ಮೂತಿಯು ಕಪ್ಪು ಬಣ್ಣವಿರುತ್ತದೆ. ಇವುಗಳು ಸಂಘ ಜೀವಿಗಳಾಗಿದ್ದು ಒಂದೊಂದು ಗುಂಪಿನಲ್ಲಿ 500 ಸಂಖ್ಯೆಯಲ್ಲಿರುತ್ತವೆ. ಕೆಲವು ಸಮಯದಲ್ಲಿ ಸಣ್ಣ ಸಣ್ಣ ಗುಂಪಾಗಿಯು ಇರುತ್ತವೆ. ವಿವಿದ ಸ್ವರಗಳನ್ನು ಹೊರಡಿಸುವ ಇವು ಬೇರೆ ಪ್ರಾಣಿಗಳಿಂದ ರಕ್ಷಿಸಲು, ಅಪಾಯವನ್ನು ಸೂಚಿಸಲು ಬಳಸುತ್ತವೆ. ತಮ್ಮ ಸಣ್ಣ ಗಾತ್ರದಿಂದ ಮಾಂಸಹಾರಿ ಪ್ರಾಣಿಗಳಿಗೆ ಮತ್ತು ಕೆಲವು ಹಾವಿಗಳಿಗೆ ಬಲಿಯಾಗುತ್ತವೆ. ತಮ್ಮ ಎಲ್ಲೆಯನ್ನು ಗುರುತಿಸಲು ಇವುಗಳು ತಮ್ಮ ಬಾಲವನ್ನು ಉಜ್ಜಿ ಮೂತ್ರವನ್ನು ಮಾಡುತ್ತವೆ.
:ಚಿತ್ರಗಳು ಅಂತರ್ಜಾಲದಿಂದ
:ಚಿತ್ರಗಳು ಅಂತರ್ಜಾಲದಿಂದ
ಗೆರಾಲ್ಡ್ ಡುರೆಲ್
ದಟ್ಟ ಅರಣ್ಯಗಳಲ್ಲಿ ಚಾರಣ ಮಾಡುವುದೆಂದರೆ ಏಲ್ಲರಿಗೂ ರೋಮಾಂಚನದ ವಿಷಯ. ಅದರಲ್ಲೂ ಅರಣ್ಯಗಳಲ್ಲಿ ಹೋಗಿ ಪ್ರಾಣಿ-ಪಕ್ಷಿಗಳ ವಿಷಯಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು ಇನ್ನು ರೋಮಾಂಚನದ ವಿಷಯ. ತೇಜಸ್ವಿ, ಜಿಮ್ ಕಾರ್ಬೆಟ್ , ಕೆನೆತ್ ಅನ್ದೆರ್ಸನ್ ಹೀಗೆ ಮುಂತಾದವರು ಈ ರೀತಿ ಅಧ್ಯಯನ ಹಾಗು ತಮ್ಮ ಅನುಭವಗಳನ್ನು ತಮ್ಮ ಪುಸ್ತಕಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಸೇರುವ ಮತ್ತು ತೇಜಸ್ವಿಯವರು ಅನುವಾದ ಮಾಡಿರುವ ಮತ್ತೊಬ್ಬ ಲೇಖಕ, ಚಾರಣಿಗ ಮತ್ತು ಪ್ರಕೃತಿ ಶಾಸ್ತ್ರಜ್ಞ ಗೆರಾಲ್ಡ್ ಡುರೆಲ್.
ಗೆರಾಲ್ಡ್ ಡುರೆಲ್ |
ಗೆರಾಲ್ಡ್ ಡುರೆಲ್ ಅವರು ಜನವರಿ 7 , 1925 ರಲ್ಲಿ ಜಮ್ಶೆಡ್ಪುರದಲ್ಲಿ ಹುಟ್ಟಿದರು. ಇವರ ತಂದೆ ಒಬ್ಬ ಬ್ರಿಟಿಶ್ ಇಂಜಿನಿಯರ್. ಗೆರಾಲ್ಡ್ ರವರ ವೃತ್ತಿ ಜೀವನ ಶುರುವಾಗಿದ್ದು 1947 ರಲ್ಲಿ ,ಆಗ ಅವರು ವಯಸ್ಸು 21 . ಅವರ ಮೊದಲನೆಯ ಪ್ರವಾಸ ಬ್ರಿಟಿಶ್ ಕ್ಯಾಮೆರೂನಿಗೆ. ಅಲ್ಲಿಂದ ತಂದ ಪ್ರಾಣಿಗಳನ್ನು ವಿವಿಧ ಪ್ರಾಣಿ ಸಂಗ್ರಹಾಲಯಕ್ಕೆ ಮಾರಲಾಯಿತು. ಹೀಗೆ ದಶಕಗಳು ಕಳೆದು ಅವರು ತಮ್ಮ ಕಾಡು ಪ್ರಾಣಿಗಳ ಸಂರಕ್ಷಣೆಯ ಕೆಲಸಗಳಿಂದ ಪ್ರಸಿದ್ದರಾದರು. ಗೆರಾಲ್ಡ್ ರವರ ಮನೆಯು ಯಾವಾಗಲು ಅಳಿವಿನ ಅಂಚಿನಲ್ಲಿರುವು ಪ್ರಾಣಿಗಳಿಂದ, ಹಿಡಿಯಲಾಗದಂತಹ ಪ್ರಾಣಿಗಳಿಂದ, ಮುದ್ದು ಕಾಡು ಪ್ರಾಣಿಗಳಿಂದ ತುಂಬಿ ತುಳುಕುತ್ತಿತ್ತು. ಅವರದು ಪ್ರಾಣಿಗಳನ್ನು ಹಿಡಿಯುವುದರಲ್ಲಿ ಹೇಗೆ ನಿಪುಣತೆ ಇತ್ತೋ ಅದೇ ರೀತಿ ಅವುಗಳನ್ನು ಒಂದು ಕಡೆ ಇಂದ ಮತ್ತೊಂದು ಕಡೆ ಸಾಗಾಣಿಕೆ ಮಾಡುವುದರಲ್ಲಿ ಮತ್ತು ಅವಗಳಿಗೆ ಆಯಾಸ, ನೋವು ಆಗದಂತೆ ನೋಡಿಕೊಳ್ಳುತ್ತಿದ್ದರಿಂದ ಇವರು ಹಿಡಿದ ಪ್ರಾಣಿಗಳು ಸಲೀಸಾಗಿ ಖಾಲಿ ಆಗುತ್ತಿದ್ದ್ದವು.
ಪ್ರಾಣಿ ಸಂಗ್ರಹಣೆಗಳು ಜಾಸ್ತಿ ಆಗಿದರಿಂದ 1958 ರಲ್ಲಿ ಇವರು ಜೆರ್ಸಿ ಪ್ರಾಣಿ ಸಂಗ್ರಹನಾಲಯವನ್ನು ಸ್ತಾಪಿಸಿದರು. ಪ್ರಾಣಿ ಸಂಗ್ರಹಣೆ ಮತ್ತು ಚಾರಣಗಳನ್ನು ಮುಂದುವರೆಸಲು ಹಣದ ಅಭಾವ ಬಂದಾಗ ಇವರ ತಮ್ಮನ ಸಲೆಹೆಯ ಮೇರೆಗೆ ಪುಸ್ತಕಗಳನ್ನು ಬರೆಯಲು ಶುರುಮಾಡಿದರು. ಹಿಂದೆ ಯಾವಾಗಲು ಬರವಣಿಗೆ ಮತ್ತು ಸಂಬಂದಿಸಿದ ಕೆಲಸ ಮಾಡಿಲ್ಲವೆಂದರು ತಮ್ಮದೇ ಆದ ಕಥೆ ಹೇಳುವ ಶೈಲಿಯಿಂದ ಇವರ ಪುಸ್ತಕಗಳು ಜನಪ್ರಿಯವಾದವು.
ಪ್ರಾಣಿ ಸಂಗ್ರಹಣೆಗಳು ಜಾಸ್ತಿ ಆಗಿದರಿಂದ 1958 ರಲ್ಲಿ ಇವರು ಜೆರ್ಸಿ ಪ್ರಾಣಿ ಸಂಗ್ರಹನಾಲಯವನ್ನು ಸ್ತಾಪಿಸಿದರು. ಪ್ರಾಣಿ ಸಂಗ್ರಹಣೆ ಮತ್ತು ಚಾರಣಗಳನ್ನು ಮುಂದುವರೆಸಲು ಹಣದ ಅಭಾವ ಬಂದಾಗ ಇವರ ತಮ್ಮನ ಸಲೆಹೆಯ ಮೇರೆಗೆ ಪುಸ್ತಕಗಳನ್ನು ಬರೆಯಲು ಶುರುಮಾಡಿದರು. ಹಿಂದೆ ಯಾವಾಗಲು ಬರವಣಿಗೆ ಮತ್ತು ಸಂಬಂದಿಸಿದ ಕೆಲಸ ಮಾಡಿಲ್ಲವೆಂದರು ತಮ್ಮದೇ ಆದ ಕಥೆ ಹೇಳುವ ಶೈಲಿಯಿಂದ ಇವರ ಪುಸ್ತಕಗಳು ಜನಪ್ರಿಯವಾದವು.
ದಿ ಓವರ್ಲೋದೆದ್ ಆರ್ಕ್ |
ದಿ ಬಫುಟ್ ಬೀಗಲ್ಸ್ |
ಅವರ ಮೊದಲನೆಯ ಕ್ಯಾಮೆರೂನ್ ಪ್ರವಾಸದ ಅನುಭವಗಳನ್ನು " ದಿ ಓವರ್ಲೋದೆದ್ ಆರ್ಕ್" ಎಂಬ ಪುಸ್ತಕವನ್ನಾಗಿಸಿದರು.ಈ ಪುಸ್ತಕವು ಸಾಕಷ್ಟು ಜನಪ್ರಿಯವಾಯಿತು. ಎರಡನೆಯ ಪ್ರಯತ್ನವಾಗಿ " ದಿ ಬಫುಟ್ ಬೀಗಲ್ಸ್" ಮತ್ತು ಮೂರನೆಯ ಪುಸ್ತಕವಾಗಿ ಅವರ ದಕ್ಷಿಣ ಅಮೆರಿಕದ ಪ್ರವಾಸ ಕಥನವನ್ನು " ತ್ರೀ ಟಿಕೆಟ್ಸ್ ಟು ಅಡ್ವೆಂಚರ್" ಬರೆದರೂ. ಇವು ಸಾಕಷ್ಟು ಜನಪ್ರಿಯವಾಗಿದಲ್ಲದೆ, ಹೆಸರು ಮತ್ತು ದುಡ್ಡನ್ನು ತಂದು ಕೊಟ್ಟಿತು. ಅಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಪ್ರಕಟವಾಯಿತು.
ತ್ರೀ ಟಿಕೆಟ್ಸ್ ಟು ಅಡ್ವೆಂಚರ್ |
ಗೆರಾಲ್ಡ್ ರವರ ಜೀವನವು ಹಲವು ಎಡರು ತೊಡರುಗಳಿಂದ, ಅನಾರೋಗ್ಯದ ಸಮಸ್ಯೆಗಳಿಂದ ಕೂಡಿತ್ತು. ಗೆರಾಲ್ಡ್ ರವರು ಜನವರಿ 1995 ಇಸವಿಯಲ್ಲಿ ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಮೃತರಾದರು.
ಲೆಮುರ್ ಜೊತೆ ಗೆರಾಲ್ಡ್ ಡುರೆಲ್ |
ಗೆರಾಲ್ಡ್ ರವರು ಬರೆದ ಪುಸ್ತಕಗಳು:
- The Overloaded Ark
- The Bafut Beagles
- Encounters with Animals
- The Drunken Forest
- Three Singles to Adventure
- A Zoo in my Luggage
- The Whispering Land
- Menagerie Manor
- Birds, Beasts and Relatives
- Rosy is My Relative
- Fillets of Plaice
- Catch Me a Colobus
- Beasts in My Belfry
- The Talking Parcel
- The Stationary Ark
- Golden Bats and Pink Pigeons
- The Garden of the Gods
- The Picnic and Suchlike Pandemonium
- The Aye-Aye and I
- The Mockery Bird
- The Fantastic Flying Journey
- The Fantastic Dinosaur Adventure
- The Ark's Anniversary
- Marrying Off Mother
- The Amateur Naturalist
- How to Shoot an Amateur Naturalist
- Durrell in Russia
- My Family and Other Animals.
ಮಾಹಿತಿ ಮತ್ತು ಚಿತ್ರಗಳು ಅಂತರ್ಜಾಲದಿಂದ
Subscribe to:
Posts (Atom)