ಕರ್ನಾಟಕದ ಗಾನ ಗಾರುಡಿಗ ಸಿ.ಅಶ್ವಥ್ ಅವರು ದಿವಂಗತರಾಗಿ ಒಂದು ವರ್ಷ ಸಂದಿದೆ. ಇದರ ಸ್ಮರಣಾರ್ಥವಾಗಿ ಕನ್ನಡ ಸಂಸ್ಕೃತಿ ಇಲಾಖೆ "ಕನ್ನಡವೆ ಸತ್ಯ ಅಶ್ವಥ್ ನಿತ್ಯ" ಎಂಬ ಕಾರ್ಯಕ್ರಮವನ್ನು ಇಂದು , ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಹಲವು ಸಾಹಿತ್ಯಾಸಕರು, ಗಾಯಕರು, ನೃತ್ಯಪಟುಗಳು ಭಾಗವಹಿಸುತ್ತಿದ್ದಾರೆ .
ಅಷ್ಟೇ ಅಲ್ಲದೆ ಹೊರದೇಶದ ಕನ್ನಡಿಗರು ಸಹ ಬರುತ್ತಿದ್ದರೆ. ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸಿ .ಅಶ್ವಥ್ರವರ ಶಿಷ್ಯರಾದ ಕಿಕ್ಕೇರಿ ಕೃಷ್ಣಮೂರ್ತಿ ಅವರು ವಹಿಸಿಕೊಂಡಿದ್ದಾರೆ. ಸಿ .ಅಶ್ವಥ್ ರವರು ಹಾಡಿರು ಹಾಡುಗಳನ್ನು ಇಲ್ಲಿ ಹಾಡುವುವರಿದ್ದಾರೆ. ಸಾಯಂಕಾಲ 5 :30 ಇಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ.ಈ ಕಾರ್ಯಕ್ರಮವನ್ನು ಆಯೋಜಿಸಲು ಒಂದು ವರ್ಷದಿಂದ ಸತತವಾಗಿ ಕೆಲಸದಲ್ಲಿ ನಿರತರಾಗಿದ್ದಾರೆ.
ನೆನ್ನೆ ಊರಿನಿಂದ ಬರುವಾಗ ಶಿವಮೊಗ್ಗದ ತಂಡದವರು ನಮ್ಮ ಜೊತೆ ಸಹ ಪ್ರಯಾಣ ಮಾಡುತ್ತಿದ್ದರು. ಹಾಡನ್ನು ಅಭ್ಯಯಿಸಲು ಯಾವ ಜಾಗವಾದರೇನು ಎಂದು ರೈಲಿನಲ್ಲೇ ಅವರೇ ಸಂಗೀತ ಕಚೇರಿ ಶುರುವಾಗಿತ್ತು. ಸುಗಮ ಸಂಗೀತದ ಹಾಡುಗಳು ನಿಜವಾಗಲು ಸುಗುಮವಾಗಿದ್ದವು. ಶಿವಮೊಗ್ಗದಿಂದ 100 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುತ್ತಿದ್ದಾರೆ ಮತ್ತು ಅವರ ತಂಡದ ಹೆಸರು "ಪ್ರತಿಭಾ ರಂಗ".
ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನನಗೆ ದೊರಕಿದ ಮಾಹಿತಿ ಮೇರೆಗೆ ಪ್ರವೇಶವು ಉಚಿತವಾಗಿದೆ.
ನನಗೆ ಚಿನ್ಮಯ್ ಫೋನ್ ಮಾಡಿದ್ದರು ನೀವು ಬರುತ್ತೀರಾ ಅಂತ. ಆದ್ರೆ ನನ್ನ ಕಾಲಿನ ಸಮಸ್ಯೆಯಿಂದಾಗಿ ಹೋಗಲು ಮನಸ್ಸು ಮಾಡಲಿಲ್ಲ. ಇವತ್ತು ಪೇಪರಿನಲ್ಲಿ ಬಂದಿದೆ. ಕಾರ್ಯಕ್ರಮ ಮಿಸ್ ಮಾಡಿಕೊಂಡೆ.
ReplyDelete