Saturday, December 11, 2010

ಗೆರಾಲ್ಡ್ ಡುರೆಲ್

ದಟ್ಟ ಅರಣ್ಯಗಳಲ್ಲಿ ಚಾರಣ ಮಾಡುವುದೆಂದರೆ  ಏಲ್ಲರಿಗೂ  ರೋಮಾಂಚನದ ವಿಷಯ. ಅದರಲ್ಲೂ ಅರಣ್ಯಗಳಲ್ಲಿ ಹೋಗಿ ಪ್ರಾಣಿ-ಪಕ್ಷಿಗಳ ವಿಷಯಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು  ಇನ್ನು ರೋಮಾಂಚನದ ವಿಷಯ. ತೇಜಸ್ವಿ, ಜಿಮ್  ಕಾರ್ಬೆಟ್ , ಕೆನೆತ್  ಅನ್ದೆರ್ಸನ್  ಹೀಗೆ ಮುಂತಾದವರು ಈ ರೀತಿ ಅಧ್ಯಯನ ಹಾಗು ತಮ್ಮ ಅನುಭವಗಳನ್ನು ತಮ್ಮ ಪುಸ್ತಕಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಸೇರುವ ಮತ್ತು ತೇಜಸ್ವಿಯವರು ಅನುವಾದ ಮಾಡಿರುವ ಮತ್ತೊಬ್ಬ ಲೇಖಕ, ಚಾರಣಿಗ ಮತ್ತು  ಪ್ರಕೃತಿ ಶಾಸ್ತ್ರಜ್ಞ ಗೆರಾಲ್ಡ್ ಡುರೆಲ್

 ಗೆರಾಲ್ಡ್ ಡುರೆಲ್
ಗೆರಾಲ್ಡ್ ಡುರೆಲ್ ಅವರು ಜನವರಿ 7 , 1925 ರಲ್ಲಿ   ಜಮ್ಶೆಡ್ಪುರದಲ್ಲಿ ಹುಟ್ಟಿದರು. ಇವರ ತಂದೆ ಒಬ್ಬ ಬ್ರಿಟಿಶ್ ಇಂಜಿನಿಯರ್.  ಗೆರಾಲ್ಡ್ ರವರ ವೃತ್ತಿ ಜೀವನ ಶುರುವಾಗಿದ್ದು 1947 ರಲ್ಲಿ ,ಆಗ ಅವರು ವಯಸ್ಸು 21 . ಅವರ ಮೊದಲನೆಯ ಪ್ರವಾಸ ಬ್ರಿಟಿಶ್ ಕ್ಯಾಮೆರೂನಿಗೆ. ಅಲ್ಲಿಂದ ತಂದ ಪ್ರಾಣಿಗಳನ್ನು ವಿವಿಧ ಪ್ರಾಣಿ ಸಂಗ್ರಹಾಲಯಕ್ಕೆ ಮಾರಲಾಯಿತು. ಹೀಗೆ ದಶಕಗಳು ಕಳೆದು ಅವರು ತಮ್ಮ ಕಾಡು ಪ್ರಾಣಿಗಳ ಸಂರಕ್ಷಣೆಯ ಕೆಲಸಗಳಿಂದ ಪ್ರಸಿದ್ದರಾದರು. ಗೆರಾಲ್ಡ್ ರವರ ಮನೆಯು ಯಾವಾಗಲು ಅಳಿವಿನ ಅಂಚಿನಲ್ಲಿರುವು ಪ್ರಾಣಿಗಳಿಂದ, ಹಿಡಿಯಲಾಗದಂತಹ ಪ್ರಾಣಿಗಳಿಂದ, ಮುದ್ದು ಕಾಡು ಪ್ರಾಣಿಗಳಿಂದ ತುಂಬಿ ತುಳುಕುತ್ತಿತ್ತು.  ಅವರದು ಪ್ರಾಣಿಗಳನ್ನು ಹಿಡಿಯುವುದರಲ್ಲಿ ಹೇಗೆ ನಿಪುಣತೆ ಇತ್ತೋ ಅದೇ ರೀತಿ ಅವುಗಳನ್ನು ಒಂದು ಕಡೆ ಇಂದ ಮತ್ತೊಂದು ಕಡೆ ಸಾಗಾಣಿಕೆ ಮಾಡುವುದರಲ್ಲಿ ಮತ್ತು ಅವಗಳಿಗೆ ಆಯಾಸ, ನೋವು ಆಗದಂತೆ ನೋಡಿಕೊಳ್ಳುತ್ತಿದ್ದರಿಂದ ಇವರು ಹಿಡಿದ ಪ್ರಾಣಿಗಳು ಸಲೀಸಾಗಿ ಖಾಲಿ ಆಗುತ್ತಿದ್ದ್ದವು. 



ಪ್ರಾಣಿ ಸಂಗ್ರಹಣೆಗಳು ಜಾಸ್ತಿ ಆಗಿದರಿಂದ 1958 ರಲ್ಲಿ ಇವರು ಜೆರ್ಸಿ ಪ್ರಾಣಿ ಸಂಗ್ರಹನಾಲಯವನ್ನು ಸ್ತಾಪಿಸಿದರು. ಪ್ರಾಣಿ ಸಂಗ್ರಹಣೆ ಮತ್ತು ಚಾರಣಗಳನ್ನು ಮುಂದುವರೆಸಲು ಹಣದ ಅಭಾವ ಬಂದಾಗ ಇವರ ತಮ್ಮನ ಸಲೆಹೆಯ ಮೇರೆಗೆ ಪುಸ್ತಕಗಳನ್ನು ಬರೆಯಲು ಶುರುಮಾಡಿದರು.  ಹಿಂದೆ ಯಾವಾಗಲು ಬರವಣಿಗೆ ಮತ್ತು ಸಂಬಂದಿಸಿದ ಕೆಲಸ ಮಾಡಿಲ್ಲವೆಂದರು  ತಮ್ಮದೇ ಆದ ಕಥೆ ಹೇಳುವ ಶೈಲಿಯಿಂದ  ಇವರ ಪುಸ್ತಕಗಳು ಜನಪ್ರಿಯವಾದವು. 

ದಿ ಓವರ್ಲೋದೆದ್  ಆರ್ಕ್
ದಿ ಬಫುಟ್ ಬೀಗಲ್ಸ್
ಅವರ ಮೊದಲನೆಯ ಕ್ಯಾಮೆರೂನ್ ಪ್ರವಾಸದ ಅನುಭವಗಳನ್ನು  " ದಿ ಓವರ್ಲೋದೆದ್  ಆರ್ಕ್" ಎಂಬ ಪುಸ್ತಕವನ್ನಾಗಿಸಿದರು.ಈ ಪುಸ್ತಕವು ಸಾಕಷ್ಟು ಜನಪ್ರಿಯವಾಯಿತು. ಎರಡನೆಯ ಪ್ರಯತ್ನವಾಗಿ " ದಿ ಬಫುಟ್ ಬೀಗಲ್ಸ್" ಮತ್ತು ಮೂರನೆಯ ಪುಸ್ತಕವಾಗಿ ಅವರ ದಕ್ಷಿಣ ಅಮೆರಿಕದ ಪ್ರವಾಸ ಕಥನವನ್ನು " ತ್ರೀ ಟಿಕೆಟ್ಸ್ ಟು ಅಡ್ವೆಂಚರ್"  ಬರೆದರೂ. ಇವು ಸಾಕಷ್ಟು ಜನಪ್ರಿಯವಾಗಿದಲ್ಲದೆ, ಹೆಸರು ಮತ್ತು ದುಡ್ಡನ್ನು ತಂದು ಕೊಟ್ಟಿತು. ಅಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಪ್ರಕಟವಾಯಿತು. 
ತ್ರೀ ಟಿಕೆಟ್ಸ್ ಟು ಅಡ್ವೆಂಚರ್
 ಗೆರಾಲ್ಡ್ ರವರ ಜೀವನವು ಹಲವು ಎಡರು ತೊಡರುಗಳಿಂದ, ಅನಾರೋಗ್ಯದ ಸಮಸ್ಯೆಗಳಿಂದ ಕೂಡಿತ್ತು. ಗೆರಾಲ್ಡ್ ರವರು  ಜನವರಿ 1995 ಇಸವಿಯಲ್ಲಿ ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಮೃತರಾದರು.
ಲೆಮುರ್ ಜೊತೆ ಗೆರಾಲ್ಡ್  ಡುರೆಲ್
 ಗೆರಾಲ್ಡ್ ರವರು ಬರೆದ ಪುಸ್ತಕಗಳು:
  1. The Overloaded Ark
  2. The Bafut Beagles
  3. Encounters with Animals
  4. The Drunken Forest
  5. Three Singles to Adventure
  6. A Zoo in my Luggage
  7. The Whispering Land
  8. Menagerie Manor
  9. Birds, Beasts and Relatives
  10. Rosy is My Relative
  11. Fillets of Plaice
  12. Catch Me a Colobus
  13. Beasts in My Belfry
  14. The Talking Parcel
  15. The Stationary Ark
  16. Golden Bats and Pink Pigeons
  17. The Garden of the Gods
  18. The Picnic and Suchlike Pandemonium
  19. The Aye-Aye and I
  20. The Mockery Bird
  21. The Fantastic Flying Journey
  22. The Fantastic Dinosaur Adventure
  23. The Ark's Anniversary
  24. Marrying Off Mother
  25. The Amateur Naturalist
  26. How to Shoot an Amateur Naturalist
  27. Durrell in Russia
  28. My Family and Other Animals.
ಮಾಹಿತಿ  ಮತ್ತು ಚಿತ್ರಗಳು ಅಂತರ್ಜಾಲದಿಂದ 

No comments:

Post a Comment