Saturday, February 26, 2011

ಎಚ್ಚರಿಕೆ :)

ನೆನ್ನೆ ಆಫೀಸ್ ಇಂದ ಹೋಗುವುದು ಲೇಟ್ ಆಗಿತ್ತು, ಸ್ವಲ್ಪ ಕೆಲಸವಿದ್ದರಿಂದ ಬೆಳೆಗ್ಗೆ ಬೇಗೆ ಏಳಬೇಕಾಯಿತು. ವಿರಾಮದ ವೇಳೆಯಲ್ಲಿ ಸಹುದ್ಯೋಗಿ ಜೊತೆ ಮಾತಾಡುತ್ತ ಇದ್ದೆ. ಹೀಗೆ ಮಾತನಾಡುತ್ತ ಇರಬೇಕಾದರೆ "ನಿನಗೆ ನಿದ್ದೆ ಇಲ್ಲವೆಂದು ತಕ್ಷಣ ಗೊತ್ತಾಗುತ್ತದೆ" ಎಂದು ಒಬ್ಬರು , ಮತ್ತು "ಹುಷಾರಿಲ್ಲದ ಥರ ಕಾನುತ್ತಿದ್ದಿಯ " ಅಂತ ಮತ್ತೊಬ್ಬರು ಹೇಳಿದರು. ಅದಕ್ಕೆ ನಾನು "ಇಲ್ಲ, ಆರಾಮಾಗಿದ್ದೀನಿ , ಏನು ತೊಂದರೆ ಇಲ್ಲ " ಅಂದೆ. 

ಅದಕ್ಕೆ ನನ್ನ ಸಹುದ್ಯೋಗಿ ನಿನ್ನ ಮುಖ ನೋಡಿಕೋ ಅಂತ ಫ್ರೇಮ್  ಇಲ್ಲದ ಒಂದು ಸಣ್ಣ ಕನ್ನಡಿಯ ಚೂರನ್ನು ಕೊಟ್ಟರು. ಮುಖವನ್ನೇನೋ  ನೋಡಿಕೊಂಡೆ ಆದರೆ ನನ್ನ ತಲೆಯಲ್ಲಿ ಬೇರೆ ಚುಡಾಯಿಸುವ ಯೋಚನೆ ಬಂದು "ಏನ್ ರೀ, ನೀವು ಸಣ್ಣಗಿದ್ದಿರಾ  ,ಏನು ತೊಂದರೆ ಇಲ್ಲ ಅಂತ ಯಾರಾದ್ರೂ ಕೀಟಲೆ ಮಾಡಲು ಬಂದರೆ ಇದರಲ್ಲೇ ಹೊಡೆದು ಸಾಯಿಸುತ್ತೀರಾ? " ಅಂತ ಕೇಳಿದೆ. ಅದಕ್ಕೆ ಅವರು ನಸು ನಗುತ್ತ " ಇಲ್ಲ ನನ್ನ ಹತ್ತಿರ ಅದಕ್ಕೆ ಬೇರೆ ಟೂಲ್ಕಿತ್ ಇದೆ" ಅಂತ ಒಂದು ಸಣ್ಣ ಟೂಲ್ಕಿತ್ ತೆಗೆದರು. ಅದರಲ್ಲಿ ಇದ್ದ ಟೂಲ್ ಗಳನ್ನೂ ನೋಡಿದ ಮೇಲೆ ನನಗೆ ಆಶರ್ಯವಾಯಿತು. ಅದರಲ್ಲಿ ಇಂಥದು ಇಲ್ಲ ಅನ್ನುವ ಹಾಗೆ ಇಲ್ಲ. ಅದರ ಒಂದು ಚಿತ್ರವನ್ನು ಕೆಳಗಡೆ ಹಾಕಿದ್ದೀನಿ. ಸಣ್ಣಗಿದ್ದರು ಅದೂ ಕೆಲವು ಕ್ಷಣಗಳಲ್ಲಿ ಉಪಯೋಗ ಬರುತ್ತದೆ ಅಂತ ಅನ್ನಿಸಿತು. ಅದೂ ಅಲ್ಲದೆ ಈ ತರಹದ  ಟೂಲ್ ಕಿತ್ ಇದ್ದರೆ ಕೆಲವು ಸಮಯಗಳಲ್ಲಿ ಉಪಯೋಗವು ಆಗುತ್ತದೆ. 



No comments:

Post a Comment