Monday, November 29, 2010

ಡಾರ್ಮೌಸ್

ಹೀಗೆ ಒಮ್ಮೆ ಪುಸ್ತಕ ಓದುವಾಗ ನನಗೆ ಸಿಕ್ಕಿದ ಒಂದು ಪದ  "ಡಾರ್ಮೌಸ್"  . ಕುತೂಹಲಭರಿತನಾಗಿ ಅದು ಏನು ಅಂತ ಹುಡುಕಿ ಹೊರಟಾಗ ಅದರ ಬಗ್ಗೆ  ಸಿಕ್ಕಿದ ವಿಷಯಗಳನ್ನು ಓದಿ ಖುಷಿ  ಆಯಿತು. ಈ ಪ್ರಾಣಿಯ ನೋಡಲು ತುಂಬಾ ಮುದ್ದಾಗಿರುವುದು ಕಂಡು ಬಂದಿತು. ಅದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ: 

ಡಾರ್ಮೌಸ್: 
ಚಿತ್ರ: ಅಂತರ್ಜಾಲದಿಂದ

       ಇದು ಇಲಿಯ ಜಾತಿಗೆ ಸೇರಿದ ಒಂದು ಪ್ರಾಣಿ. ಇದು ಹೆಚ್ಚಾಗಿ ಯುರೋಪ್,ಏಷಿಯಾ ಮಾತು ಆಫ್ರಿಕಾ ಖಂಡಗಳಲ್ಲಿ ಕಾಣಸಿಗುತ್ತವೆ. ಇವುಗಳು ತಮ್ಮ ಧೀರ್ಘ ಕಾಲದ ನಿದ್ದೆ ಮಾಡುವುದಕ್ಕೆ ಹೆಸರುವಾಸಿಯಾಗಿವೆ. ಬೇಸಿಗೆ ಕಾಲದಲ್ಲಿ ಬಹಳ ಚಟುವಟಿಕೆಯಿಂದ ಇದ್ದು ಕಾಳುಗಳು, ಹಣ್ಣುಗಳನ್ನು ಶೇಖರಿಸಿ ಇಟ್ಟು ಚಳಿಗಾಲದಲ್ಲಿ ತಮ್ಮ ಗೂಡುಗಳಲ್ಲಿ ಸೇರಿಕೊಳುತ್ತವೆ. ಇವುಗಳು ೬ ರಿಂದ ೧೯ ಸೆ.ಮಿ ಇದ್ದು ೧೫ ರಿಂದ ೨೦೦ ಗ್ರಾಂ ತೂಗುತ್ತವೆ. ಇವುಗಳ ಆಯುಶ್ಯಾವಧಿ ೪ ವರ್ಷಗಳು. ಕೆಲವೊಮ್ಮೆ ೬ ವರ್ಷಗಳ ತನಕ  ಬದುಕುತ್ತವೆ. ಇವುಗಳ ಶ್ರವಣ ಶಕ್ತಿಯು ಚುರುಕಾಗಿದ್ದು, ಹಲವು ಧ್ವನಿಗಳನ್ನೂ ಹೊರಡಿಸಿ ಒಂದಕ್ಕೊಂದು ಸಂಭಾಷಿಸುತ್ತವೆ.
ಚಿತ್ರ: ಅಂತರ್ಜಾಲದಿಂದ 
        ಹಣ್ಣುಗಳು, ಬೀಜಗಳು, ಹೂವುಗಳು ಮತ್ತು ಕೆಲವು ಕೀಟಗಳು ಪ್ರಮುಖ ಆಹಾರ. ಮರಿಗಳಲ್ಲಿ ಇವುಗಳು ಕೂದಲಿಲ್ಲದೆ ಮೈಯಿಂದ ಕೂಡಿ ಕಣ್ಣುಗಳನ್ನು ೧೮ ದಿನಗಳ ಬಳಿಕ ಬಿಡುತ್ತವೆ. ಇವುಗಳು ಸಣ್ಣ ಪೊದೆಗಳಲ್ಲಿ ಗೂಡು ಮಾಡಿಕೊಂಡು ಇರುತ್ತವೆ. ಚಳಿಗಾಲದಲ್ಲಿ ನೆಲದಲ್ಲಿ ಸಣ್ಣ ಗೂಡುಗಳನ್ನು ಕೊರೆದುಕೊಂಡು, ಅದರಲ್ಲಿ ಹುಲ್ಲು ಮತ್ತು ಎಲೆಗಳನ್ನು ತುಂಬಿ, ತಮ್ಮ ಮೈಯನ್ನು ಸಣ್ಣ ಚೆಂಡಿನಾಕಾರಕ್ಕೆ ಮುದುರಿಕೊಂಡು ಮಲಗುತ್ತವೆ. ಅಷ್ಟೇ ಅಲ್ಲದ ತಮ್ಮ ದೇಹದ ಶಾಖ ಮತ್ತು ಹೃದಯದ ಬಡಿತವನ್ನು  ತಗ್ಗಿಸುತ್ತವೆ. ಈ ಕಾರಣದಿಂದ ಇವುಗಳು ಹೆಚ್ಚು ಕಾಲದ ತನಕ ಬದುಕುತ್ತವೆ. ವರ್ಷದಲ್ಲಿ ಒಂದು ಇಲ್ಲ ಎರಡು ಸಲ ೩ ರಿಂದ ೪ ಸಲ ಮರಿ ಹಾಕುತ್ತವೆ. ಇವುಗಳಲ್ಲಿ ಸಂಘ ಜೀವನವನ್ನು ಕಾಣಬಹುದಾಗಿದೆ. 
ಚಳಿಗಾಲದಲ್ಲಿ ನಿದ್ದೆಮಾಡುತ್ತಿರುವುದು

ಸಾಮಾನ್ಯವಾಗಿ ತಿನ್ನುವ ಕಾಯಿ, ಬೀಜಗಳು

      ಬೇಸಿಗೆ ಕಾಲದಲ್ಲಿ ಚೆನ್ನಾಗಿ ತಿಂದು, ಮೈಯಲ್ಲಿ ಕೊಬ್ಬನು ಶೇಖರಿಸಿ ಇಟ್ಟುಕೊಳ್ಳುತ್ತವೆ. ಚಳಿಗಾಲದಲ್ಲಿ ಮಲಗಿದಾಗ ಈ ಕೊಬ್ಬನ್ನು ಉಪಯೋಗಿಸಿಕೊಳ್ಳುತ್ತವೆ. ರೋಮವು ಕೇಸರಿ ಮತ್ತು ಕಂಡು ಬಣ್ಣದಿಂದ ಕೂಡಿದ್ದು, ಬಾಲವು ಉದ್ದವಾಗಿರುತ್ತದೆ.
ನೋಡಲು ಚಿಕ್ಕದಾಗಿದ್ದರೂ ಮರ ಹತ್ತುವುದರಲ್ಲಿ ನಿಸ್ಸಿಮವು ಇದು. ಮುದ್ದಾಗಿ ಇರುವುದರಿಂದ ಇವುಗಳನ್ನು ಸಾಕು ಪ್ರಾಣಿಯಾಗಿ ಸಾಕುತ್ತಾರೆ. 

ಮಾಹಿತಿ ಮತ್ತು ಚಿತ್ರಗಳು ಅಂತರ್ಜಾಲದಿಂದ

Saturday, November 27, 2010

ಕ್ರೇಜಿಯ ಮೂಗು

source: internet

ಆದ ಇಂಜಿನಿಯರಿಂಗ್  ಎರಡನೇ ವರ್ಷ. ಇಂಟರ್ನಲ್ಗಳು ಹತ್ತಿರವಿದ್ದವು, ಹಾಗಾಗಿ ಹಾಸ್ಟೆಲಿನಲ್ಲಿ ಸಂಪೂರ್ಣ ಶಾಂತಿ. ಅದು ಹದಗೆಡುವುತ್ತಿದ್ದಿದ್ದು ಊಟ ಮತ್ತು ತಿಂಡಿ ವೇಳಯಲ್ಲಿ ಮಾತ್ರ. ಹೀಗೆ ಒಂದು ಸಲ ರಾತ್ರಿ ಊಟವಾದ ಮೇಲೆ ನನ್ನ ರೂಮಿನ ವೀರೇಶ ಮತ್ತು ಇನ್ನೊಬ್ಬ ಸ್ನೇಹಿತ ಮಂಜುನಾಥ( ಇವನು ರವಿಚಂದ್ರನ್ ಭಕ್ತನಾಗಿರುವುದರಿಂದ  ಇವನನ್ನು ಕ್ರೇಜಿ ಎಂದು ಕರೆಯುತ್ತೇವೆ) ನಮ್ಮ ವಿಂಗ್ ನ ಮಧ್ಯದಲ್ಲಿ ಒಬ್ಬರಿಗೊಬ್ಬರು ಅಟ್ಟಿಸಿಕೊಂಡು ಓಡಲಾರಂಭಿಸಿದರು. ಅಲ್ಲಿಯೇ ಮಾತನಾಡುತ್ತ ನಿಂತಿದ್ದ ನಾವು ಇವರು ಏನು ಮಾಡುತಿದ್ದಾರೆಂದು ನೋಡಲಾರಂಬಿಸಿದೆವು. ಇದ್ದಕಿದ್ದಂತೆ ಇಬ್ಬರು ವಿರುದ್ದ ದಿಕ್ಕಿನಲ್ಲಿ ಜೋರಾಗಿ ಓಡಲು ಹತ್ತಿದ್ದರು. ನಾವು ಹಾಗೆ ಆಡಬೇಡಿ ಎಂದು ಹೇಳಿದರು ಕೇಳಲೇ ಇಲ್ಲ.


ಕೊನೆಗೆ ಇಬ್ಬರು ಜೋರಾಗಿ  ಡಿಕ್ಕಿ ಹೊಡೆದುಕೊಂಡರು. ಅದರ ಫಲವಾಗಿ ವೀರೇಶನ ಹಲ್ಲುಗಳು ಬಲವಾಗಿ ಕ್ರೇಜಿಯ ಮೂಗನ್ನು ನಾಟಿದವು, ವೀರೇಶ ಗೋಡೆಗೆ ಡಿಕ್ಕಿ ಹೊಡೆದುಕೊಂಡು ಹಿಂಬದಿಯ  ತಲೆಗೆ ಪೆಟ್ಟು ಮಾಡಿಕೊಂಡ. ಹಲ್ಲುಗಳು ನಾಟಿದ್ದರಿಂದ ಕ್ರೇಜಿಯ ಮೂಗಿನಿಂದ ಧಾರಾಕಾರವಾಗಿ ರಕ್ತ ಬರಲು ಶುರುವಾಯಿತು.

ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು  ಹೋದೆವು. ಆಗಲೇ ರಾತ್ರಿಯಾಗಿದ್ದರಿಂದ ಎಲ್ಲ ಆಸ್ಪತ್ರೆಗಳು ಬಾಗಿಲು ಹಾಕಿದ್ದವು. ಕೊನೆಗೆ ಒಂದು ಆಸ್ಪತ್ರೆ ಸಿಕ್ಕಿತು. ಆದರೆ ವೈದ್ಯರು ಇರಲಿಲ್ಲ, ನರ್ಸ್ ಮಾತ್ರ ಇದ್ದದ್ದು. ಸರಿ ಹೇಗಿದ್ದರೂ  ಬರಿ ಬ್ಯಾಂಡೇಜ್  ಮಾಡಿಸುವುದು ಎಂದು ಒಳಗೆ ಹೋದೆವು. ಇಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿದರು. ಸ್ವಲ್ಪ ಜನ ಇವರ ಹತ್ತಿರ ಮತ್ತೆ ಇನ್ನು ಕೆಲವರು ಆಸ್ಪತ್ರೆಯ ಹೊರಗೆ ಇದ್ದರು. ನರ್ಸ್  ಒಳಗೆ ಇದ್ದವರಿಗೆ ಇಂಜಕ್ಷನ್ನ್  ತರಲು ಹೇಳಿದರು.

ಆಗಲೇ ಆದದ್ದು ಮಜಾ. ಇಂಜಕ್ಷನ್ ಬರುವುದು ತಡವಾಗುತ್ತದೆ ಎಂದು ಒಳಗಿದ್ದು ಹುಡುಗರು ನರ್ಸಿನ ಜೊತೆ ಮಾತನ್ನಾಡುತ್ತ ನಿಂತರು.

"ನೋಡಿ, ನನಗು ಮೂಗಿನ ಮೇಲೆ ಇದೆ ತರಹದ  ಗಾಯ ಆಗಿದೆ", ಎಂದಳು. 
"ಹೋ, ಹೌದು ಹೌದು ಛೆ, ಎಷ್ಟು ದೊಡ್ಡ ಗಾಯ, ಕಲೆ ಬೇರೆ ಉಳಿದುಕೊಂಡಿದೆ", ಎಂದು ನಮ್ಮ ಹುಡುಗರು ಹೇಳಿದರು. 
"ಏನು ಮಾಡಲು ಆಗುವುದಿಲ್ಲ, ನನ್ನ ಮುಖದ ಲಕ್ಷಣವೇ ಹೋದಂತಾಗಿದೆ ಅಲ್ಲವೇ ? " ಎಂದು ಪುನಃ ಇವರಿಗೆ ಕೇಳಿದಳು.
"ಮತ್ತೆ  ಕಲೆಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಿದಿರಿ ?",ಎಂದು ಕೇಳಿದರು. 
Source: internet
 
ಇಷ್ಟು ಮಾತನಾಡಲು ಸಿಕ್ಕಿದರೆ ಸಾಕಲ್ಲವೇ, ಎಲ್ಲರ ಗಮನ ಪೆಟ್ಟು ತಿಂದವರ ಬದಲು ಈ ನರ್ಸಿನ ಕಡೆಗೆ ಹೋಯಿತು. ವೀರೇಶನಿಗೆ ಸ್ವಲ್ಪ ಪೆಟ್ತಾಗಿದ್ದರಿಂದ  ಅವನು ಆರಾಮಾಗಿ ಮಲಗಿಕೊಂಡ, ಆದರೆ ಕ್ರೇಜಿಯ ನೋವು ಜಾಸ್ತಿಯಾಗುತ್ತ ಇತ್ತು. ಅವನು ಒಂದೇ ಸಮ ಕೂಗಿಕೊಂಡರು ಎಲ್ಲರು ನರ್ಸಿನ ಜೊತೆ ಮಾತನಾಡುವುದರಲ್ಲಿ ತಲ್ಲಿನರಾಗಿದ್ದರು. ಅಷ್ಟರಲ್ಲಿ ಹೊರಗಿನಿಂದ ಬಂದ ಸ್ನೇಹಿತರು ಇವರಿಗೆ ಬಯ್ದು, ನರ್ಸಿಗೆ  ಇಂಜಕ್ಷನ್   ಕೊಡಲು ಹೇಳಿದರು.

ಸರಿ ಎಲ್ಲ ಆಗಿ ಹೊರಗೆ ಬಂದ ಮೇಲೆ ನಮಗೆ ನಗು ತಡೆಯಲಾಗಲಿಲ್ಲ. ಅದಕ್ಕೆ ಕ್ರೇಜಿಯು " ನಾನು ನೋವು ಮಾಡಿಕೊಂಡು ಮಲಗಿದ್ದೀನಿ, ಇವರು ನೋಡಿದರೆ ಆ ನರ್ಸಿನ ಜೊತೆ ಲಲ್ಲೆ ಹೊಡೆದುಕೊಂಡು ನಿಂತಿದ್ದಾರೆ, ನಾನು ಸಾಯ್ತಿನಿ ಬರ್ರೋ ಅಂದರು ಬರುವುದಿಲ್ಲ" ಎಂದು ಹೇಳಿದನು. ಒಂದು ಮಾತು ಏನೆಂದರೆ ಈ ಕ್ರೇಜಿಯು ಮೂಗು ಚಿಕ್ಕದಾಗಿ ನೋಡಲು ಸುಂದರವಾಗಿತ್ತು. ಈಗ  ಬ್ಯಾಂಡೇಜ್ ಆಗಿದ್ದರಿಂದ ದಪ್ಪವಾಗಿ ನೋಡಲು ಕಾಮಿಡಿ ಆಗಿತ್ತು.

ಭೂತನರ್ತನ

ಇದು ನಡೆದದ್ದು ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಇದ್ದಾಗ. ಕೊನೆಯ ಸೆಂಮ್ ಮುಗಿಯುತ್ತಿದ್ದರಿಂದ ನಮ್ಮ ಕ್ಲಾಸಿನ ಎಲ್ಲ ಹುಡುಗ ಮತ್ತು ಹುಡುಗಿಯರು ಪ್ರವಾಸಕ್ಕೆ ಹೋಗಿದ್ದೆವು. ಕಲ್ಹತ್ತಗಿರಿ , ಅಮೃತಾಪುರ ಮುಂತಾದ ಕಡೆಗಳಿಗೆ ಹೋಗಿದ್ದೆವು. ಅದು ಒಂದು ದಿನದ ಪ್ರವಾಸ ಅಷ್ಟೇ, ಆದ್ದರಿಂದ ಹೇಗೂ ಕೊನೆಯ ವರ್ಷ, ಇಲ್ಲಿ ತನಕ ಯಾವಾಗಲು ಕ್ಯಾಂಪ್ ಫೈರ್ ಮಾಡಿಲ್ಲ ಈ ಸಲಿ ಮಾಡೋಣ ಎಂದು ತೀರ್ಮಾನಿಸಿದೆವು. ರಾತ್ರಿ ಊಟ ಮಾಡಿಕೊಂಡು ಹೊರಟೆವು, ಕ್ಯಾಂಪ್ ಫೈರಿಗೆ ಕಟ್ಟಿಗೆಗಳು ಬೇಕಾಗಿದ್ದರಿಂದ ಸ್ವಲ್ಪ ಕತ್ತಲಾಗುವರೆಗೂ ಕಾದು  ಬರುತ್ತಾ ಇದ್ದ ದಾರಿಯಲ್ಲಿ ಒಂದು ತೋಟಕ್ಕೆ ನುಗ್ಗಿ ಸ್ವಲ್ಪ  ಗಳ, ಪುಳ್ಳೆ , ತೆಂಗಿನ ಗರಿ ಮುಂತಾದುವುಗಳನ್ನು ಜೋಡಿಸಿಕೊಂಡು ಬಸ್ಸಿನ ಮೇಲೆ ಹೇರಿ ಹೊರಟೆವು . ಆದರೆ ನಮಗೆ ಕ್ಯಾಂಪ್ ಫೈರ್ ಮಾಡುವುದಕ್ಕೆ ಎಲ್ಲೂ ಜಾಗವೇ ಸಿಗುವ ಹಾಗಿರಿಲಿಲ್ಲ. ಆಗಲೇ ಶಿವಮೊಗ್ಗ ಬಿಟ್ಟಿದ್ದೆವು, ಹೊನ್ನಾಳಿಯು ಬಂತು ಆದರೆ ಎಲ್ಲೂ ಜಾಗವೇ ಸಿಗಲ್ಲಿಲ್ಲ. ಕೊನೆಗೆ ಮಲೆಬೆನ್ನೂರ್ ಆದಮೇಲೆ ರೋಡಿನ ಪಕ್ಕದಲ್ಲಿ ದೊಡ್ಡ ಖಾಲಿ ಜಾಗವು ಸಿಕ್ಕಿತು. 
ಸ್ನೇಹಿತರಾದ ಶಂಕರ ಮತ್ತು ವಾಗೀಶ


ಮತ್ತೇನು, ಎಲ್ಲರು ಖುಷಿಯಿಂದ ಲಗುಬಗೆಯಲ್ಲಿ  ಸೌದೆಗಳನ್ನು ಬಸ್ಸಿನಿಂದ ಇಳಿಸಿಕೊಂಡು , ಆ ಮೈದಾನದ ಮಧ್ಯ ಹೋಗಿ ಬೆಂಕಿಯನ್ನು ಹಾಕಿದೆವು. ಆಗಲೇ ರಾತ್ರೆ ೧೧ ಆಗಿತ್ತು,  ಚಳಿ ಬೇರೆ, ಬೆಂಕಿಯು ದೊಡ್ಡದಾಗಿ ಉರಿಯುತ್ತಿತ್ತು. ಎಲ್ಲರು ಕೇಕೆಗಳನ್ನು ಹಾಕಿಕೊಂಡು ಕಾಡಿನ "ಹುಮ್ಬಾಯೋ ಹುಬಮ್ಬಯೋ" ಎಂದು ಕೂಗಿಕೊಂಡು ಕೆಲೆವರು ಸುತ್ತಲು, ಕೆಲವರು ನ್ರುತ್ಯಮಾಡಲು ಶುರುಮಾಡಿದರು. ಸ್ವಲ್ಪ ಹೊತ್ತಾದ ಮೇಲೆ ಫೋಟೋಗಳನ್ನು ತೆಗೆಯಲು ಶುರುಮಾಡಿದೆವು. ಮತ್ತೆ ಕೆಲವರು ಹೋಗಿ ಎಲ್ಲಿಂದಲೋ ಒಂದು ಮರದ ತುಂಡನ್ನು ತಂದು ಹಾಕಿದರು. ಆಕಾಶದಲ್ಲಿ ಮೊಡವಿರಲಿಲ್ಲ, ಸ್ವಚ್ಚವಾಗಿತ್ತು. ನಕ್ಷತ್ರಗಳು ಕಾಣುತ್ತಿದ್ದವು. ನಾನು ಮಾತು ನನ್ನ ಸ್ನೇಹಿತ ಧೀರಜ್ ಎಲ್ಲಿಂದಲೋ ಮಾತನ್ನು ಶುರು ಮಾಡಿ ಕೊನೆಗೆ ಭವಿಷ್ಯ, ನಕ್ಷತ್ರ, ಜಾತಕ ಎಂದು ಅಲ್ಲಿ ಕಾಣುತ್ತಿದ್ದ ನಕ್ಷತ್ರಗಳನ್ನು ಗುರುತಿಸಲು ಯತ್ನಿಸುತ್ತಿದೆವು. 


ಅಷ್ಟರಲ್ಲಿ ಒಂದು ಆಟೋದಲ್ಲಿ ಮೂರು ಜನ ಬಂದರು. ಎಲ್ಲರು ದಾಂಡಿಗರೇ  ಆಗಿದ್ದರು. ಬಂದವರೇ " ಎಲ್ಲಿಯವರು ನೀವು, ಏನು ಮಾಡುತ್ತಾ ಇದ್ದೀರಾ ಇಲ್ಲಿ? " ಎಂದು ಜೋರು ಮಾಡಿದರು. 
"ನಾವು ಇಂಜಿನಿಯರಿಂಗ್ ವಿಧ್ಯಾರ್ಥಿಗಳು, ಪ್ರವಾಸಕ್ಕೆ ಬಂದಿದ್ದೀವಿ, ಏನಾಯಿತು? " ಎಂದು ಕೇಳಿದೆವು.
"ಇಲ್ಲಿ ಇಷ್ಟು ಜೋರಾಗಿ ಬೆಂಕಿ ಹಾಕಿದಿರಲ್ಲ, ಇದು ಯಾವ ಜಾಗ ಗೊತ್ತ, ಇದು ಸ್ಮಶಾನ , ಮೊದಲು ಇಲ್ಲಿಂದ ಹೊರಡಿ" ಎಂದರು.
ಯಾವಾಗ "ಸ್ಮಶಾನ" ಎಂಬ ಮಾತು ಕಿವಿಗೆ ಬಿತ್ತೋ ಎಲ್ಲರಿಗು ಪ್ರವಾಸದ ಅಮಲು ಜ್ಯರ್ರನೆ ಇಲ್ಲಿದು, ಕಕ್ಕಾಬಿಕ್ಕಿಯಾಗಿ ಒಬ್ಬರನೊಬ್ಬರು ನೋಡಲು ಶುರುಮಾಡಿದೆವು. ಮುಂದಿನ ಕ್ಷಣ ಏನು ಮಾಡಬೇಕು ಎಂದು ಯಾರು ಯಾರನ್ನು ಕೇಳಲಿಲ್ಲ. ಧಡ, ಧಡ ಹೋಗಿ ಬಸ್ಸನ್ನು  ಹತ್ತಿ ಕುಳಿತು ತಕ್ಷಣ ಹೊರಟೆವು. ಸ್ವಲ್ಪ ದೂರ ಕ್ರಮಿಸಿದ ಮೇಲೆ ನೆಮ್ಮದಿ ಆಗಿತ್ತು, ನಾವು ಮಾಡಿದ ರೀತಿ ನೋಡಿ ನಮಗೆ ನಗು ಬಂದಿತು. ಒಬ್ಬಬ್ಬರು ಇನೋಬ್ಬರು ಮಾಡಿದ ರೀತಿಯನ್ನು ಅಣಕಿಸಲು ಶುರು ಮಾಡಿದರು . ಆಗಲೇ ೧೨ ಆಗಿತ್ತು, ಕುಣಿತ, ಭಯ , ಚಳಿ ಎಲ್ಲ ಸೇರಿ ನಿದ್ದೆ ಹಾರಿ ಹೋಗಿತ್ತು . ಇನ್ನು ಒಂದು ಗಂಟೆ ಕ್ರಮಿಸಲು ಬಾಕಿ ಇತ್ತು. 

ಸರಿ ಮತೊಮ್ಮೆ ನಮ್ಮ ಭೂತನರ್ತನ ಶುರು ಆಗಿತ್ತು. ಆದರೆ ಈ ಸಲಿ ಅದು ಬಸ್ಸಿನ ಒಳಗೆ, ಸಿನಿಮಾ ಹಾಡುಗಳ ಜೊತೆ ಆಗಿತ್ತು.



Sunday, November 21, 2010

ಕಳೆದ ಭಾನುವಾರ ನಾವು ತಿಪಟೂರಿನ ಅರಳಗುಪ್ಪೆ ನರಸಿಂಹಸ್ವಾಮಿ  ದೇವಾಲಯಕ್ಕೆ  ಭೇಟಿ ನೀಡಿದ್ದೆವು. ಬೆಂಗಳೂರಿನಿಂದ ರೈಲಿನಲ್ಲಿ ಹೊರಟರೆ ಇದು ಬಾಣಸಂದ್ರ ಆದ ಮೇಲೆ ಸಿಗುತ್ತದೆ. ಸಣ್ಣ ಊರಾಗಿರುವದರಿಂದ  ಇಲ್ಲಿ ರೈಲು ಸ್ವಲ್ಪ ಹೊತ್ತು ಮಾತ್ರ ನಿಲ್ಲುತ್ತದೆ. ಇಲ್ಲಿ  ಹೊಯ್ಸಳ ಕಾಲದ ನರಸಿಂಹ ದೇವಾಲಯವಿದೆ.  ನರಸಿಂಹಸ್ವಾಮಿಯ ದೇವಾಲಯಕ್ಕೆ ಹೊಂದಿಕೊಂಡಂತೆ ಅಲ್ಲಿ ಚೆನ್ನಕೇಶವ ದೇವಾಲಯವು ಇದೆ. ಅದರ ಕೆಲವು ಚಿತ್ರಗಳು ಮತ್ತು ಅದರ  ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ.
ಇಲ್ಲಿ ಇರುವ ನರಸಿಂಹ ದೇವರು ಉಗ್ರ ನರಸಿಂಹ, ಮೂರ್ತಿ ಚಿಕ್ಕದಾಗಿಯೂ ಮತ್ತು ಸುಂದರವಾಗಿಯೂ ಇದೆ. ದೇವಸ್ತಾನವು ಸಂಪೂರ್ಣ ಕಲ್ಲಿನಿಂದ ಕತ್ತಲಾಗಿರುವುದರಿಂದ ಒಳಗೆ ತಂಪಾಗಿಯು ಇದೆ. 

ಚೆನ್ನಕೇಶವ ದೇವಾಲಯ


 ಕೇಶವ ದೇವಾಲಯ: ಕೇಶವ ದೇವಾಲಯವು  ಏಕಕೂಟವಾಗಿದ್ದು ಕ್ರಿಶಕ, 13 ನೆ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾಯಿತು . ದೇವಾಲಯವು ನಾಲ್ಕಡಿ ಎತ್ತರದ ನಕ್ಷತ್ರಕ್ಕಾರದ  ಜಗಲಿಯ ಮೇಲೆ ನಿರ್ಮಾಣಗೊಂಡಿದ್ದು ತಳವಿನ್ಯಾಸದಲ್ಲಿ  ಗರ್ಭಗೃಹ,ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಜಗಲಿಯ ಪೂರ್ವದಿಂದ ªÉÄnÖ®ÄUÀ°zÀÄÝ ದೇವಾಲಯದ ದ್ವಾರವಿದೆ. ದಕ್ಷಿಣದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತೆ ನರಸಿಂಹ ದೇವಾಲಯವಿದೆ. ದೇವಾಲಯದ ಗೋಡೆಯ ಕೆಳಭಾಗವು ಆರು ಚಿತ್ರಪಟಗಳಿಂದ ಅಲಂಕ್ರುತಗೊಂಡಿದೆ. ಆನೆ, ಕುದುರೆ, ಲತಾಸಾಲುಗಳ ಮೇಲೆ ಪೌರಾಣಿಕ ಕಥೆಗಳ ಚಿತ್ರಗಳಿವೆ. ಪೂರ್ವದ ಗೋಡೆಯ ಮೇಲೆ ರಾಮಾಯಣ ಕಥೆ ಆರಂಭವಾಗಿ ಅನಂತರ ಭಾಗವತ  ಕಥೆ, ಕೃಷ್ಣನ ಬಾಲಲೀಲೆಯವರೆಗೂ ಕಂಡುಬರುತ್ತದೆ. ಗೋಡೆಯ ಮಧ್ಯಭಾಗವು ಲತಾತೊರಣಗಳ ಕೆಳಗೆ ಅನೇಕ ವೈಷ್ಣವ ಶಿಲ್ಪಗಳಿಂದ ಅಲಂಕ್ರುತಗೊಂಡಿದೆ . ಇವುಗಳಲ್ಲಿ  ಶ್ರೀದೇವಿ ಮತ್ತು ಭೂದೇವಿಗಳಿಂದ ಕೂಡಿದ ವಿಷ್ಣುವಿನ ೨೪ ರೂಪಗಳು, ನಾರಾಯಣ,ಯಕ್ಷ, ಯಕ್ಷಿ,ಲಕ್ಷ್ಮಿ, £ÀÈvÀåUÀuÉñÀ ,ಮೋಹಿನಿ, ಶದ್ಭುಜ   , ಸರಸ್ವತಿ ,ವೇಣುಗೋಪಾಲ,ಕೃಷ್ಣ,ಲಕ್ಷ್ಮೀನರಸಿಂಹ, ಉಗ್ರನರಸಿಂಹ ಇತ್ಯಾದಿ ನೋಡಲು  ಸುಂದರವಾಗಿದೆ.  



ಶಿಲ್ಪಗಳ ¦ÃoÀ¨sÁUÀzÀ°è  ಶಿಲ್ಪಿ ಹೊನ್ನೋಜನ  ನಾಮಾಂಕಿತವಿದೆ. ಗರ್ಭಗುಡಿಯ ಮೇಲೆ ನಾಲ್ಕಂತಸ್ತಿನ ವೇಸರ  ಶಿಲ್ಪಿಯ ಶಿಖರವಿದ್ದು ಅಲಂಕ್ರುತಗೊಂಡಿದೆ. ದೇವಾಲಯದ ಒಳಭಾಗದಲ್ಲಿ ಅವರಂಗದ ಕಂಭಗಳು ಹೊಯ್ಸಳ ವಾಸ್ತುರೀತಿಯಲ್ಲಿದ್ದು ಶಿಲ್ಪಗಳಿಂದ ಅಲಂಕ್ರುತಗೊಂಡಿದೆ. ಮಧ್ಯದಲ್ಲಿ ವಿತಾನವು(ಭುವನೆಶ್ವರಿ  ) ಯಕ್ಷರ ಸಾಲಿನಿಂದ ಕೂಡಿದ್ದು  ಜೋಲಾಡುವ ಹೂವಿನ ಮೊಗ್ಗು ಇದೆ. ಗೋಡೆಯ ಗೂಡಲ್ಲಿ ಗಣೇಶ ಮತ್ತು ಮಹಿಶಮರ್ದಿನಿಯ ವಿಗ್ರಹಗಳಿವೆ. ಆರು ಅಡಿ ಎತ್ತರದ ಕೇಶವ ವಿಗ್ರಹವನ್ನು ಇಲ್ಲಿ ಕಾಣಬಹುದು, ಸುಕನಾಸಿ ದ್ವಾರದಲ್ಲಿ ಜಾಲಂದ್ರ, ದ್ವಾರಪಾಲಕರು, ನಾರಾಯಣ ಶಿಲ್ಪಗಳನ್ನು ಕಾಣಬಹುದು. ಗರ್ಭಗೃಹ ಪೀಠದ  ಮೇಲೆ ಹೊಯ್ಸಳ ಕಾಲದ ಕೇಶವ ವಿಗ್ರಹವಿದೆ. ಇದರ ತೋರಣದಲ್ಲಿ ವಿಷ್ಣುವಿನ ದಶಾವತಾರಗಳನ್ನು ಬಿಡಿಸಲಾಗಿದೆ.

ಸ್ವಲ್ಪ ದೂರದಲ್ಲಿಯೆ ಒಂದು ಹಳೆಯ ಶಿವನ ದೇವಾಲಯವು ಕೂಡ ಇದೆ. ನೋಡಲು ಸುಂದರವಾಗಿಯೂ ಮತ್ತು ದೇವಸ್ತಾನದ ಸುತ್ತಲು ಹಲವಾರು ಶಿವಲಿಂಗಗಳನ್ನು ಪ್ರತಿಷ್ಟ್ಹಾಪಿಸಲಾಗಿದೆ. 

ಮುಂಭಾಗದಿಂದ ಶಿವನ ದೇವಾಲಯ 

ದೇವಸ್ತಾನದ ಸುತ್ತಲು ಇರುವ ಶಿವಲಿಂಗಗಳು  
ಮುಖ್ಯ ಶಿವನ ದೇವಸ್ತಾನದಎದುರುಇರುವ ನಂದಿ 
ದೇವಸ್ತಾನದ ಪಕ್ಕದಲ್ಲಿಯೇ ಒಂದು ಕೆರೆ ಕೂಡ ಇದೆ. ಕೆರೆಯ ಹೂಳು ತೆಗೆದ ಮೇಲೆ ಅದರ ನೀರಿನ ಸಂಗ್ರಹಣ ಸಾಮರ್ಥ್ಯವು ಜಾಸ್ತಿಯಾಗಿದೆ ಮತ್ತು ನೋಡಲು ಚೊಕ್ಕವಾಗಿಯು ಇದೆ. 

ದೇವಾಲಯಗಳ ದರ್ಶನವಾದ ಮೇಲೆ ನಾನು ಮತ್ತು ನನ್ನ ಮಾವ ಹೊರಡಲು ಸಿದ್ದರಾದೆವು. ಅಷ್ಟರಲ್ಲಿಯೇ ಒಬ್ಬ ಮುದುಕರು ತನ್ನ ಕುರಿಯ ಮಂದೆಯ ಸಮೇತ ಅದೇ ದಾರಿಯಲ್ಲಿ ಬಂದರು . ತುಂಬಾ ದೂರದಿಂದ ಬಂದದಕ್ಕು ಮತ್ತು ಬಿಸಿಲು ಕೂಡ ಇದ್ದಿದ್ದರಿಂದ ಕುರಿಗಳು ನೆರಳಿನಲ್ಲಿ ಬಂದು ನಿಂತವು. ಸ್ವಲ್ಪ ಹೊತ್ತಾದ ಮೇಲೆ ಒಂದು ಕುರಿಯ ಹಿಂಡು ಮುಂದುವರಿಯಿತು. ಆದರೆ ಇನ್ನೊಂದು ಹಿಂಡಿನಲ್ಲಿ ಓಂದು ಕುರಿ ತಲೆ ಬಾಗಿ ನಿಂತತಕ್ಷಣ ಎಲ್ಲ ಕುರಿಗಳು ಹಾಗೆ ನಿಂತವು, ಅದಕ್ಕೆ ನಮ್ಮ ಮಾವ "ನೋಡು ಅದಕ್ಕೆ ಹೇಳೋದು ಒಂದು ಕುರಿ ತಲೆ ಬಗ್ಗಿಸಿದಿರೆ ಎಲ್ಲ ಕುರಿಗಳು ತಲೆಬಗ್ಗಿಸುತ್ತವೆ" ಎಂದು ತಮಾಷೆ ಮಾಡಿದರು. ಆ ಕ್ಷಣವನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲ್ಲಿಲ್ಲ, ಆ ಸಮಯದಲ್ಲಿ ತೆಗೆದ ಚಿತ್ರವಿದು.

ಈ ಜಾಗವು ನೋಡಲು ಸುಂದರವಾಗಿಯೂ ಮತ್ತು ಪ್ರಶಾಂತವಾಗಿದೆ. ಬೆಳೆಗ್ಗೆ ಹೊರಟು ಸಾಯಂಕಾಲಕ್ಕೆ ವಾಪಸ್ಸು ಬಂದು ಬಿಡಬಹುದು. ಸಣ್ಣ ಊರಾಗಿರುವುದರಿಂದ ಊಟ ಮತ್ತು ತಿಂಡಿಗೆ ಸ್ವಲ್ಪ ತಯಾರಿ ಮಾಡಿಕೊಂಡು ಹೋದರೆ ಒಳ್ಳೆಯದು. ದೇವಸ್ತಾನದ ಅರ್ಚಕರ ಮನೆ ಕೂಡ ಪಕ್ಕದಲ್ಲಿಯೇ ಇರುವುದರಿಂದ ಪೂಜೆ ಮಾಡಿಸಲು ಏನು ತೊಂದರೆ ಆಗದು.

Sunday, November 14, 2010

Hidden meanings in company talks

1.     "We will do it" means "You will do it"

2.    "You have done a great job" means "More work to be given to you"

3.    "We are working on it" means "We have not yet started working on the same"

4.    "After discussion we will decide - I am very open to views" means "I have already decided, I will tell you what to do"

5.    "There was a slight miscommunication" means "We had actually lied"

6.    "Let’s call a meeting and discuss" means "I have no time now, will talk later"

7.    "We are on the right track but there needs to be a slight extension of the deadline" means "The project is screwed up, we cannot deliver on time."

8.    "We had slight differences of opinion "means "We had actually fought"

9.    "Make a list of the work that you do and let's see how I can help you" means "Anyway you have to find a way out no help from me"

10.  "You should have told me earlier" means "Well even if you told me earlier that would have made hardly any difference!"

11.  "We need to find out the real reason" means "Well I will tell you where your fault is"

12.  "Well Family is important; your leave is always granted. Just ensure that the work is not affected," means, "Well you know..."

13.  "We are a team," means, "I am not the only one to be blamed"

14.  "That's actually a good question" means "I do not know anything about it"

15.  "All the Best" means "You are in trouble"

(Source: From forwarded mail)