ಹೀಗೆ ಒಮ್ಮೆ ಪುಸ್ತಕ ಓದುವಾಗ ನನಗೆ ಸಿಕ್ಕಿದ ಒಂದು ಪದ "ಡಾರ್ಮೌಸ್" . ಕುತೂಹಲಭರಿತನಾಗಿ ಅದು ಏನು ಅಂತ ಹುಡುಕಿ ಹೊರಟಾಗ ಅದರ ಬಗ್ಗೆ ಸಿಕ್ಕಿದ ವಿಷಯಗಳನ್ನು ಓದಿ ಖುಷಿ ಆಯಿತು. ಈ ಪ್ರಾಣಿಯ ನೋಡಲು ತುಂಬಾ ಮುದ್ದಾಗಿರುವುದು ಕಂಡು ಬಂದಿತು. ಅದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ:
ಡಾರ್ಮೌಸ್:
ಚಿತ್ರ: ಅಂತರ್ಜಾಲದಿಂದ |
ಇದು ಇಲಿಯ ಜಾತಿಗೆ ಸೇರಿದ ಒಂದು ಪ್ರಾಣಿ. ಇದು ಹೆಚ್ಚಾಗಿ ಯುರೋಪ್,ಏಷಿಯಾ ಮಾತು ಆಫ್ರಿಕಾ ಖಂಡಗಳಲ್ಲಿ ಕಾಣಸಿಗುತ್ತವೆ. ಇವುಗಳು ತಮ್ಮ ಧೀರ್ಘ ಕಾಲದ ನಿದ್ದೆ ಮಾಡುವುದಕ್ಕೆ ಹೆಸರುವಾಸಿಯಾಗಿವೆ. ಬೇಸಿಗೆ ಕಾಲದಲ್ಲಿ ಬಹಳ ಚಟುವಟಿಕೆಯಿಂದ ಇದ್ದು ಕಾಳುಗಳು, ಹಣ್ಣುಗಳನ್ನು ಶೇಖರಿಸಿ ಇಟ್ಟು ಚಳಿಗಾಲದಲ್ಲಿ ತಮ್ಮ ಗೂಡುಗಳಲ್ಲಿ ಸೇರಿಕೊಳುತ್ತವೆ. ಇವುಗಳು ೬ ರಿಂದ ೧೯ ಸೆ.ಮಿ ಇದ್ದು ೧೫ ರಿಂದ ೨೦೦ ಗ್ರಾಂ ತೂಗುತ್ತವೆ. ಇವುಗಳ ಆಯುಶ್ಯಾವಧಿ ೪ ವರ್ಷಗಳು. ಕೆಲವೊಮ್ಮೆ ೬ ವರ್ಷಗಳ ತನಕ ಬದುಕುತ್ತವೆ. ಇವುಗಳ ಶ್ರವಣ ಶಕ್ತಿಯು ಚುರುಕಾಗಿದ್ದು, ಹಲವು ಧ್ವನಿಗಳನ್ನೂ ಹೊರಡಿಸಿ ಒಂದಕ್ಕೊಂದು ಸಂಭಾಷಿಸುತ್ತವೆ.
ಚಿತ್ರ: ಅಂತರ್ಜಾಲದಿಂದ |
ಹಣ್ಣುಗಳು, ಬೀಜಗಳು, ಹೂವುಗಳು ಮತ್ತು ಕೆಲವು ಕೀಟಗಳು ಪ್ರಮುಖ ಆಹಾರ. ಮರಿಗಳಲ್ಲಿ ಇವುಗಳು ಕೂದಲಿಲ್ಲದೆ ಮೈಯಿಂದ ಕೂಡಿ ಕಣ್ಣುಗಳನ್ನು ೧೮ ದಿನಗಳ ಬಳಿಕ ಬಿಡುತ್ತವೆ. ಇವುಗಳು ಸಣ್ಣ ಪೊದೆಗಳಲ್ಲಿ ಗೂಡು ಮಾಡಿಕೊಂಡು ಇರುತ್ತವೆ. ಚಳಿಗಾಲದಲ್ಲಿ ನೆಲದಲ್ಲಿ ಸಣ್ಣ ಗೂಡುಗಳನ್ನು ಕೊರೆದುಕೊಂಡು, ಅದರಲ್ಲಿ ಹುಲ್ಲು ಮತ್ತು ಎಲೆಗಳನ್ನು ತುಂಬಿ, ತಮ್ಮ ಮೈಯನ್ನು ಸಣ್ಣ ಚೆಂಡಿನಾಕಾರಕ್ಕೆ ಮುದುರಿಕೊಂಡು ಮಲಗುತ್ತವೆ. ಅಷ್ಟೇ ಅಲ್ಲದ ತಮ್ಮ ದೇಹದ ಶಾಖ ಮತ್ತು ಹೃದಯದ ಬಡಿತವನ್ನು ತಗ್ಗಿಸುತ್ತವೆ. ಈ ಕಾರಣದಿಂದ ಇವುಗಳು ಹೆಚ್ಚು ಕಾಲದ ತನಕ ಬದುಕುತ್ತವೆ. ವರ್ಷದಲ್ಲಿ ಒಂದು ಇಲ್ಲ ಎರಡು ಸಲ ೩ ರಿಂದ ೪ ಸಲ ಮರಿ ಹಾಕುತ್ತವೆ. ಇವುಗಳಲ್ಲಿ ಸಂಘ ಜೀವನವನ್ನು ಕಾಣಬಹುದಾಗಿದೆ.
ಚಳಿಗಾಲದಲ್ಲಿ ನಿದ್ದೆಮಾಡುತ್ತಿರುವುದು |
ಸಾಮಾನ್ಯವಾಗಿ ತಿನ್ನುವ ಕಾಯಿ, ಬೀಜಗಳು |
ಬೇಸಿಗೆ ಕಾಲದಲ್ಲಿ ಚೆನ್ನಾಗಿ ತಿಂದು, ಮೈಯಲ್ಲಿ ಕೊಬ್ಬನು ಶೇಖರಿಸಿ ಇಟ್ಟುಕೊಳ್ಳುತ್ತವೆ. ಚಳಿಗಾಲದಲ್ಲಿ ಮಲಗಿದಾಗ ಈ ಕೊಬ್ಬನ್ನು ಉಪಯೋಗಿಸಿಕೊಳ್ಳುತ್ತವೆ. ರೋಮವು ಕೇಸರಿ ಮತ್ತು ಕಂಡು ಬಣ್ಣದಿಂದ ಕೂಡಿದ್ದು, ಬಾಲವು ಉದ್ದವಾಗಿರುತ್ತದೆ.
ನೋಡಲು ಚಿಕ್ಕದಾಗಿದ್ದರೂ ಮರ ಹತ್ತುವುದರಲ್ಲಿ ನಿಸ್ಸಿಮವು ಇದು. ಮುದ್ದಾಗಿ ಇರುವುದರಿಂದ ಇವುಗಳನ್ನು ಸಾಕು ಪ್ರಾಣಿಯಾಗಿ ಸಾಕುತ್ತಾರೆ.
ಮಾಹಿತಿ ಮತ್ತು ಚಿತ್ರಗಳು ಅಂತರ್ಜಾಲದಿಂದ
ಚಿನ್ಮಯ್ ಸರ್,
ReplyDeleteಡಾರ್ಮೌಸ್‍ಗಳ ಚಿತ್ರಗಳು ಮಾಹಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ.
ಧನ್ಯವಾದಗಳು ಸರ್
ReplyDeletetumbaa olleya vishaya, maahiti...
ReplyDelete