Saturday, November 27, 2010

ಭೂತನರ್ತನ

ಇದು ನಡೆದದ್ದು ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಇದ್ದಾಗ. ಕೊನೆಯ ಸೆಂಮ್ ಮುಗಿಯುತ್ತಿದ್ದರಿಂದ ನಮ್ಮ ಕ್ಲಾಸಿನ ಎಲ್ಲ ಹುಡುಗ ಮತ್ತು ಹುಡುಗಿಯರು ಪ್ರವಾಸಕ್ಕೆ ಹೋಗಿದ್ದೆವು. ಕಲ್ಹತ್ತಗಿರಿ , ಅಮೃತಾಪುರ ಮುಂತಾದ ಕಡೆಗಳಿಗೆ ಹೋಗಿದ್ದೆವು. ಅದು ಒಂದು ದಿನದ ಪ್ರವಾಸ ಅಷ್ಟೇ, ಆದ್ದರಿಂದ ಹೇಗೂ ಕೊನೆಯ ವರ್ಷ, ಇಲ್ಲಿ ತನಕ ಯಾವಾಗಲು ಕ್ಯಾಂಪ್ ಫೈರ್ ಮಾಡಿಲ್ಲ ಈ ಸಲಿ ಮಾಡೋಣ ಎಂದು ತೀರ್ಮಾನಿಸಿದೆವು. ರಾತ್ರಿ ಊಟ ಮಾಡಿಕೊಂಡು ಹೊರಟೆವು, ಕ್ಯಾಂಪ್ ಫೈರಿಗೆ ಕಟ್ಟಿಗೆಗಳು ಬೇಕಾಗಿದ್ದರಿಂದ ಸ್ವಲ್ಪ ಕತ್ತಲಾಗುವರೆಗೂ ಕಾದು  ಬರುತ್ತಾ ಇದ್ದ ದಾರಿಯಲ್ಲಿ ಒಂದು ತೋಟಕ್ಕೆ ನುಗ್ಗಿ ಸ್ವಲ್ಪ  ಗಳ, ಪುಳ್ಳೆ , ತೆಂಗಿನ ಗರಿ ಮುಂತಾದುವುಗಳನ್ನು ಜೋಡಿಸಿಕೊಂಡು ಬಸ್ಸಿನ ಮೇಲೆ ಹೇರಿ ಹೊರಟೆವು . ಆದರೆ ನಮಗೆ ಕ್ಯಾಂಪ್ ಫೈರ್ ಮಾಡುವುದಕ್ಕೆ ಎಲ್ಲೂ ಜಾಗವೇ ಸಿಗುವ ಹಾಗಿರಿಲಿಲ್ಲ. ಆಗಲೇ ಶಿವಮೊಗ್ಗ ಬಿಟ್ಟಿದ್ದೆವು, ಹೊನ್ನಾಳಿಯು ಬಂತು ಆದರೆ ಎಲ್ಲೂ ಜಾಗವೇ ಸಿಗಲ್ಲಿಲ್ಲ. ಕೊನೆಗೆ ಮಲೆಬೆನ್ನೂರ್ ಆದಮೇಲೆ ರೋಡಿನ ಪಕ್ಕದಲ್ಲಿ ದೊಡ್ಡ ಖಾಲಿ ಜಾಗವು ಸಿಕ್ಕಿತು. 
ಸ್ನೇಹಿತರಾದ ಶಂಕರ ಮತ್ತು ವಾಗೀಶ


ಮತ್ತೇನು, ಎಲ್ಲರು ಖುಷಿಯಿಂದ ಲಗುಬಗೆಯಲ್ಲಿ  ಸೌದೆಗಳನ್ನು ಬಸ್ಸಿನಿಂದ ಇಳಿಸಿಕೊಂಡು , ಆ ಮೈದಾನದ ಮಧ್ಯ ಹೋಗಿ ಬೆಂಕಿಯನ್ನು ಹಾಕಿದೆವು. ಆಗಲೇ ರಾತ್ರೆ ೧೧ ಆಗಿತ್ತು,  ಚಳಿ ಬೇರೆ, ಬೆಂಕಿಯು ದೊಡ್ಡದಾಗಿ ಉರಿಯುತ್ತಿತ್ತು. ಎಲ್ಲರು ಕೇಕೆಗಳನ್ನು ಹಾಕಿಕೊಂಡು ಕಾಡಿನ "ಹುಮ್ಬಾಯೋ ಹುಬಮ್ಬಯೋ" ಎಂದು ಕೂಗಿಕೊಂಡು ಕೆಲೆವರು ಸುತ್ತಲು, ಕೆಲವರು ನ್ರುತ್ಯಮಾಡಲು ಶುರುಮಾಡಿದರು. ಸ್ವಲ್ಪ ಹೊತ್ತಾದ ಮೇಲೆ ಫೋಟೋಗಳನ್ನು ತೆಗೆಯಲು ಶುರುಮಾಡಿದೆವು. ಮತ್ತೆ ಕೆಲವರು ಹೋಗಿ ಎಲ್ಲಿಂದಲೋ ಒಂದು ಮರದ ತುಂಡನ್ನು ತಂದು ಹಾಕಿದರು. ಆಕಾಶದಲ್ಲಿ ಮೊಡವಿರಲಿಲ್ಲ, ಸ್ವಚ್ಚವಾಗಿತ್ತು. ನಕ್ಷತ್ರಗಳು ಕಾಣುತ್ತಿದ್ದವು. ನಾನು ಮಾತು ನನ್ನ ಸ್ನೇಹಿತ ಧೀರಜ್ ಎಲ್ಲಿಂದಲೋ ಮಾತನ್ನು ಶುರು ಮಾಡಿ ಕೊನೆಗೆ ಭವಿಷ್ಯ, ನಕ್ಷತ್ರ, ಜಾತಕ ಎಂದು ಅಲ್ಲಿ ಕಾಣುತ್ತಿದ್ದ ನಕ್ಷತ್ರಗಳನ್ನು ಗುರುತಿಸಲು ಯತ್ನಿಸುತ್ತಿದೆವು. 


ಅಷ್ಟರಲ್ಲಿ ಒಂದು ಆಟೋದಲ್ಲಿ ಮೂರು ಜನ ಬಂದರು. ಎಲ್ಲರು ದಾಂಡಿಗರೇ  ಆಗಿದ್ದರು. ಬಂದವರೇ " ಎಲ್ಲಿಯವರು ನೀವು, ಏನು ಮಾಡುತ್ತಾ ಇದ್ದೀರಾ ಇಲ್ಲಿ? " ಎಂದು ಜೋರು ಮಾಡಿದರು. 
"ನಾವು ಇಂಜಿನಿಯರಿಂಗ್ ವಿಧ್ಯಾರ್ಥಿಗಳು, ಪ್ರವಾಸಕ್ಕೆ ಬಂದಿದ್ದೀವಿ, ಏನಾಯಿತು? " ಎಂದು ಕೇಳಿದೆವು.
"ಇಲ್ಲಿ ಇಷ್ಟು ಜೋರಾಗಿ ಬೆಂಕಿ ಹಾಕಿದಿರಲ್ಲ, ಇದು ಯಾವ ಜಾಗ ಗೊತ್ತ, ಇದು ಸ್ಮಶಾನ , ಮೊದಲು ಇಲ್ಲಿಂದ ಹೊರಡಿ" ಎಂದರು.
ಯಾವಾಗ "ಸ್ಮಶಾನ" ಎಂಬ ಮಾತು ಕಿವಿಗೆ ಬಿತ್ತೋ ಎಲ್ಲರಿಗು ಪ್ರವಾಸದ ಅಮಲು ಜ್ಯರ್ರನೆ ಇಲ್ಲಿದು, ಕಕ್ಕಾಬಿಕ್ಕಿಯಾಗಿ ಒಬ್ಬರನೊಬ್ಬರು ನೋಡಲು ಶುರುಮಾಡಿದೆವು. ಮುಂದಿನ ಕ್ಷಣ ಏನು ಮಾಡಬೇಕು ಎಂದು ಯಾರು ಯಾರನ್ನು ಕೇಳಲಿಲ್ಲ. ಧಡ, ಧಡ ಹೋಗಿ ಬಸ್ಸನ್ನು  ಹತ್ತಿ ಕುಳಿತು ತಕ್ಷಣ ಹೊರಟೆವು. ಸ್ವಲ್ಪ ದೂರ ಕ್ರಮಿಸಿದ ಮೇಲೆ ನೆಮ್ಮದಿ ಆಗಿತ್ತು, ನಾವು ಮಾಡಿದ ರೀತಿ ನೋಡಿ ನಮಗೆ ನಗು ಬಂದಿತು. ಒಬ್ಬಬ್ಬರು ಇನೋಬ್ಬರು ಮಾಡಿದ ರೀತಿಯನ್ನು ಅಣಕಿಸಲು ಶುರು ಮಾಡಿದರು . ಆಗಲೇ ೧೨ ಆಗಿತ್ತು, ಕುಣಿತ, ಭಯ , ಚಳಿ ಎಲ್ಲ ಸೇರಿ ನಿದ್ದೆ ಹಾರಿ ಹೋಗಿತ್ತು . ಇನ್ನು ಒಂದು ಗಂಟೆ ಕ್ರಮಿಸಲು ಬಾಕಿ ಇತ್ತು. 

ಸರಿ ಮತೊಮ್ಮೆ ನಮ್ಮ ಭೂತನರ್ತನ ಶುರು ಆಗಿತ್ತು. ಆದರೆ ಈ ಸಲಿ ಅದು ಬಸ್ಸಿನ ಒಳಗೆ, ಸಿನಿಮಾ ಹಾಡುಗಳ ಜೊತೆ ಆಗಿತ್ತು.



2 comments:

  1. ಹ್ಹ ಹ್ಹ ಹ್ಹ!!! ದೆವ್ವದ ಕತೆ ಚೆನ್ನಾಗಿದೆ. ನಿಮ್ಮನ್ನೇ ಭೂತಗಳೆಂದು ತಿಳಿದು ಓಡಿಹೋಗಲಿಲ್ಲವಲ್ಲ

    ReplyDelete
  2. ಅವರು ಓಡಿ ಹೋಗುವುದಕ್ಕೂ ಮುನ್ನ ನಾವೇ ಓಡಿ ಬಂದೆವಲ್ಲ :)

    ReplyDelete