Saturday, November 27, 2010

ಕ್ರೇಜಿಯ ಮೂಗು

source: internet

ಆದ ಇಂಜಿನಿಯರಿಂಗ್  ಎರಡನೇ ವರ್ಷ. ಇಂಟರ್ನಲ್ಗಳು ಹತ್ತಿರವಿದ್ದವು, ಹಾಗಾಗಿ ಹಾಸ್ಟೆಲಿನಲ್ಲಿ ಸಂಪೂರ್ಣ ಶಾಂತಿ. ಅದು ಹದಗೆಡುವುತ್ತಿದ್ದಿದ್ದು ಊಟ ಮತ್ತು ತಿಂಡಿ ವೇಳಯಲ್ಲಿ ಮಾತ್ರ. ಹೀಗೆ ಒಂದು ಸಲ ರಾತ್ರಿ ಊಟವಾದ ಮೇಲೆ ನನ್ನ ರೂಮಿನ ವೀರೇಶ ಮತ್ತು ಇನ್ನೊಬ್ಬ ಸ್ನೇಹಿತ ಮಂಜುನಾಥ( ಇವನು ರವಿಚಂದ್ರನ್ ಭಕ್ತನಾಗಿರುವುದರಿಂದ  ಇವನನ್ನು ಕ್ರೇಜಿ ಎಂದು ಕರೆಯುತ್ತೇವೆ) ನಮ್ಮ ವಿಂಗ್ ನ ಮಧ್ಯದಲ್ಲಿ ಒಬ್ಬರಿಗೊಬ್ಬರು ಅಟ್ಟಿಸಿಕೊಂಡು ಓಡಲಾರಂಭಿಸಿದರು. ಅಲ್ಲಿಯೇ ಮಾತನಾಡುತ್ತ ನಿಂತಿದ್ದ ನಾವು ಇವರು ಏನು ಮಾಡುತಿದ್ದಾರೆಂದು ನೋಡಲಾರಂಬಿಸಿದೆವು. ಇದ್ದಕಿದ್ದಂತೆ ಇಬ್ಬರು ವಿರುದ್ದ ದಿಕ್ಕಿನಲ್ಲಿ ಜೋರಾಗಿ ಓಡಲು ಹತ್ತಿದ್ದರು. ನಾವು ಹಾಗೆ ಆಡಬೇಡಿ ಎಂದು ಹೇಳಿದರು ಕೇಳಲೇ ಇಲ್ಲ.


ಕೊನೆಗೆ ಇಬ್ಬರು ಜೋರಾಗಿ  ಡಿಕ್ಕಿ ಹೊಡೆದುಕೊಂಡರು. ಅದರ ಫಲವಾಗಿ ವೀರೇಶನ ಹಲ್ಲುಗಳು ಬಲವಾಗಿ ಕ್ರೇಜಿಯ ಮೂಗನ್ನು ನಾಟಿದವು, ವೀರೇಶ ಗೋಡೆಗೆ ಡಿಕ್ಕಿ ಹೊಡೆದುಕೊಂಡು ಹಿಂಬದಿಯ  ತಲೆಗೆ ಪೆಟ್ಟು ಮಾಡಿಕೊಂಡ. ಹಲ್ಲುಗಳು ನಾಟಿದ್ದರಿಂದ ಕ್ರೇಜಿಯ ಮೂಗಿನಿಂದ ಧಾರಾಕಾರವಾಗಿ ರಕ್ತ ಬರಲು ಶುರುವಾಯಿತು.

ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು  ಹೋದೆವು. ಆಗಲೇ ರಾತ್ರಿಯಾಗಿದ್ದರಿಂದ ಎಲ್ಲ ಆಸ್ಪತ್ರೆಗಳು ಬಾಗಿಲು ಹಾಕಿದ್ದವು. ಕೊನೆಗೆ ಒಂದು ಆಸ್ಪತ್ರೆ ಸಿಕ್ಕಿತು. ಆದರೆ ವೈದ್ಯರು ಇರಲಿಲ್ಲ, ನರ್ಸ್ ಮಾತ್ರ ಇದ್ದದ್ದು. ಸರಿ ಹೇಗಿದ್ದರೂ  ಬರಿ ಬ್ಯಾಂಡೇಜ್  ಮಾಡಿಸುವುದು ಎಂದು ಒಳಗೆ ಹೋದೆವು. ಇಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿದರು. ಸ್ವಲ್ಪ ಜನ ಇವರ ಹತ್ತಿರ ಮತ್ತೆ ಇನ್ನು ಕೆಲವರು ಆಸ್ಪತ್ರೆಯ ಹೊರಗೆ ಇದ್ದರು. ನರ್ಸ್  ಒಳಗೆ ಇದ್ದವರಿಗೆ ಇಂಜಕ್ಷನ್ನ್  ತರಲು ಹೇಳಿದರು.

ಆಗಲೇ ಆದದ್ದು ಮಜಾ. ಇಂಜಕ್ಷನ್ ಬರುವುದು ತಡವಾಗುತ್ತದೆ ಎಂದು ಒಳಗಿದ್ದು ಹುಡುಗರು ನರ್ಸಿನ ಜೊತೆ ಮಾತನ್ನಾಡುತ್ತ ನಿಂತರು.

"ನೋಡಿ, ನನಗು ಮೂಗಿನ ಮೇಲೆ ಇದೆ ತರಹದ  ಗಾಯ ಆಗಿದೆ", ಎಂದಳು. 
"ಹೋ, ಹೌದು ಹೌದು ಛೆ, ಎಷ್ಟು ದೊಡ್ಡ ಗಾಯ, ಕಲೆ ಬೇರೆ ಉಳಿದುಕೊಂಡಿದೆ", ಎಂದು ನಮ್ಮ ಹುಡುಗರು ಹೇಳಿದರು. 
"ಏನು ಮಾಡಲು ಆಗುವುದಿಲ್ಲ, ನನ್ನ ಮುಖದ ಲಕ್ಷಣವೇ ಹೋದಂತಾಗಿದೆ ಅಲ್ಲವೇ ? " ಎಂದು ಪುನಃ ಇವರಿಗೆ ಕೇಳಿದಳು.
"ಮತ್ತೆ  ಕಲೆಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಿದಿರಿ ?",ಎಂದು ಕೇಳಿದರು. 
Source: internet
 
ಇಷ್ಟು ಮಾತನಾಡಲು ಸಿಕ್ಕಿದರೆ ಸಾಕಲ್ಲವೇ, ಎಲ್ಲರ ಗಮನ ಪೆಟ್ಟು ತಿಂದವರ ಬದಲು ಈ ನರ್ಸಿನ ಕಡೆಗೆ ಹೋಯಿತು. ವೀರೇಶನಿಗೆ ಸ್ವಲ್ಪ ಪೆಟ್ತಾಗಿದ್ದರಿಂದ  ಅವನು ಆರಾಮಾಗಿ ಮಲಗಿಕೊಂಡ, ಆದರೆ ಕ್ರೇಜಿಯ ನೋವು ಜಾಸ್ತಿಯಾಗುತ್ತ ಇತ್ತು. ಅವನು ಒಂದೇ ಸಮ ಕೂಗಿಕೊಂಡರು ಎಲ್ಲರು ನರ್ಸಿನ ಜೊತೆ ಮಾತನಾಡುವುದರಲ್ಲಿ ತಲ್ಲಿನರಾಗಿದ್ದರು. ಅಷ್ಟರಲ್ಲಿ ಹೊರಗಿನಿಂದ ಬಂದ ಸ್ನೇಹಿತರು ಇವರಿಗೆ ಬಯ್ದು, ನರ್ಸಿಗೆ  ಇಂಜಕ್ಷನ್   ಕೊಡಲು ಹೇಳಿದರು.

ಸರಿ ಎಲ್ಲ ಆಗಿ ಹೊರಗೆ ಬಂದ ಮೇಲೆ ನಮಗೆ ನಗು ತಡೆಯಲಾಗಲಿಲ್ಲ. ಅದಕ್ಕೆ ಕ್ರೇಜಿಯು " ನಾನು ನೋವು ಮಾಡಿಕೊಂಡು ಮಲಗಿದ್ದೀನಿ, ಇವರು ನೋಡಿದರೆ ಆ ನರ್ಸಿನ ಜೊತೆ ಲಲ್ಲೆ ಹೊಡೆದುಕೊಂಡು ನಿಂತಿದ್ದಾರೆ, ನಾನು ಸಾಯ್ತಿನಿ ಬರ್ರೋ ಅಂದರು ಬರುವುದಿಲ್ಲ" ಎಂದು ಹೇಳಿದನು. ಒಂದು ಮಾತು ಏನೆಂದರೆ ಈ ಕ್ರೇಜಿಯು ಮೂಗು ಚಿಕ್ಕದಾಗಿ ನೋಡಲು ಸುಂದರವಾಗಿತ್ತು. ಈಗ  ಬ್ಯಾಂಡೇಜ್ ಆಗಿದ್ದರಿಂದ ದಪ್ಪವಾಗಿ ನೋಡಲು ಕಾಮಿಡಿ ಆಗಿತ್ತು.

2 comments: