Monday, October 4, 2010

ಕೆಲವು ಸಾಲುಗಳು :
ಹೊಸಕೆರೆಹಳ್ಳಿ ರಸ್ತೆಯ ಹತ್ತಿರ ತೆಗೆದ ಸೂರ್ಯಾಸ್ತದ ಚಿತ್ರ

  1. ಕಾರಿನಲ್ಲಿ ಹೋಗುತ್ತಿರುವ ಕನಸಿನಿಂದ ನನ್ನನ್ನು ಬಡಿದೆಬ್ಬಿಸಿದ್ದು ಬಸ್ ನಿರ್ವಾಹಕನ ಟಿಕೆಟ್ಟಿನ ಕೂಗು.
  2. ಹೆಬ್ಬಂಡೆ, ಪ್ರಪಾತಗಳಿಂದ ಕೂಡಿದ ಗಿರಿಪಂಕ್ತಿಗಳ ಸಾಲಿನ ಚಿತ್ರ ತೆಗೆಯಲು ಹೋದ ಛಾಯಚಿತ್ರಗಾರ  ಕೊನೆಯಾದದ್ದು ನೀರ ಮೌನದಲ್ಲಿ .  
  3. ಗೆಳತಿ, ಸುಂದರವಾದ ಕವಿತೆಯನ್ನು ಹೇಳಿದ ಮೇಲು ಯಾಕೆ ಬೇಸರ?   ಸುಂದರವಾದ ಕವಿತೆಯನ್ನು ವಕ್ರವಾಗಿ ಹೇಳಿದೆಯಲ್ಲ ಅದಕ್ಕೋಸ್ಕರ.

ಕ್ರಿಯೇಟಿವಿಟಿ ? :)

ಅಮೂಲ್ಯ 
ನೆನ್ನೆ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಮಧ್ಯಾನದ ಸಮಯ, ಮಳೆ ಬರಲು ಶುರುವಾಯಿತು, ಹಾಗೆಯೇ ನನ್ನ ತಂಗಿ ಅಮೂಲ್ಯ ಹೊರಗೆ ಹೋಗಿ ಆಡಲು ಹಠಮಾಡಿದಳು. ಕೊನೆಗೆ ಬೇಡ ಇಲ್ಲೇ ಕೂತಿಕೊಂಡು ಚಿತ್ರ ಬರಿ ಎಂದೆವು. ಚಿತ್ರವೇನೋ ಬರೆದಳು, ಆದರೆ ಕೊನೆಗೆ ಅದನ್ನು ಏನು ಮಾಡಬೇಕೆಂದು ತಿಳಿಯದೆ ಅವಳು ಮಾಡಿದ್ದು ಹೀಗೆ......
 


2 comments:

  1. ಸರ್,

    ಅಮೂಲ್ಯ ಪೇಪರ್ ಕ್ರಾಫ್ಟ್ ತುಂಬಾ ಚೆನ್ನಾಗಿ ಮಾಡಿದ್ದಾಳೆ..ಅವಳಿಗೆ ಪ್ರೋತ್ಸಾಹಿಸಿ..ನನ್ನ ಕಡೆಯಿಂದ ಅವಳಿಗೆ ಅಭಿನಂದನೆಗಳು

    ReplyDelete