Friday, October 15, 2010

ಸ್ವೀಟಿನ ಕಥೆ

ಇವತ್ತು ಆಫೀಸಿನಲ್ಲಿ ಹಬ್ಬದ ವಾತಾವರಣ. ಬೇಗನೆ ಬರಬೇಕೆಂದರು ಟ್ರಾಫಿಕ್ ಜಾಮ್ ಇಂದ ಲೇಟ್ ಆಯ್ತು. ಸರಿ ಪೂಜೆ, ಪ್ರಸಾದ, ತೀರ್ಥ ಎಲ್ಲ ಆಯಿತು. ತಿಂಡಿ ಆದ ಮೇಲೆ ಎಲ್ಲರಿಗು ಸ್ವೀಟ್ ಹಂಚಲಾಯಿತು. ನಮ್ಮ ಬಾಸ್ ಆದ ಪ್ರಮೋದ್ ರವರಿಗೂ ಸ್ವೀಟ್ ಕೊಡಲಾಯಿತು. ತಿಂಡಿಯೂ ಆಯಿತು.  ಸರಿ ಹಬ್ಬದ ಗಲಾಟೆ ಮುಗಿದು ಪುನಃ ಆಫೀಸ್ ಮೂಡಿಗೆ ಬಂದು ಕೆಲಸ ಮಾಡುತ್ತಿದ್ದೆವು.


ಆಗ ಪ್ರಮೋದ್ ಬಂದು ಅಜಯ್ ಗೆ " ಅಜಯ್ ನಾನು ಕೊಟ್ಟದ್ದು  ಎಲ್ಲಿ?" ಎಂದು ಕೇಳಿದರು. ನಾವು ಇವರು ಏನೋ ಮಾತನಾಡುತ್ತಿದ್ದರಲ್ಲ ಎಂದು ನೋಡಲು ಶುರುಮಾಡಿದೆವು.  ಅಷ್ಟರಲ್ಲಿ ಅಜಯ್  ತನ್ನ ಹತ್ತಿರ ಇಲ್ಲ ಎಂದು ಸನ್ನೆ ಮಾಡಿ ತೋರಿಸಿದ. ಅದಕ್ಕೆ ಪ್ರಮೋದ್ " ಒಹ್, ನಾನು ಬಂದು ತಿಂತೀನಿ ಅಂತ ಹೇಳಿದ್ದೀನಿ , ಅಷ್ಟರಲ್ಲಿ ನೀನು ಅದನ್ನ ಮುಗುಸಿಬಿಟ್ಟೆಯ?" ಎಂದು ಹೇಳಿ ನಗುತ್ತ ಹೊರಟುಹೋದರು.

ನಮಗೆ ಇವರ ಸಂಭಾಷಣೆ ಏನು ಅಂತ ಅರ್ಥ ಆಗಲೇ ಇಲ್ಲ. ಆಮೇಲೆ ಅಜಯ್ ಗೆ ಕೇಳಿದ ಮೇಲೆ ಗೊತ್ತಾದದ್ದು  ಇಷ್ಟು .
ದೇವರಿಗೆ ನಮಸ್ಕಾರ ಮಾಡುವಾಗ ಪ್ರಮೋದ್ ಅವರು ತಮ್ಮ ಕೈಯಲ್ಲಿದ್ದ ಸ್ವೀಟ್ ಅನ್ನು ನಮ್ಮ ದಿಸೈಜ್ಞೆರ್ ಅಜಯ್ ಗೆ ಹಿಡಿದಿಕೋ ಅಂತ ಕೊಟ್ಟಿದ್ದಾರೆ , ಅವನು ಸ್ವಲ್ಪ ಹೊತ್ತು ಹಿಡಿದುಕೊಂಡು ಆಮೇಲೆ ಅದನ್ನ ಸ್ವಾಹ ಮಾಡಿದ್ದಾನೆ .
ಅಷ್ಟರವರೆಗೂ ಸೀರಿಯಸ್ ಆಗಿ ಕೆಲಸ ಮಾಡುತ್ತಿದ್ದ ನಾವು ಅಜಯ್ ಹೇಳಿದ ಮಾತನ್ನು ಕೇಳಿ  ಬಿದ್ದು ಬಿದ್ದು ನಗಲು ಶುರು ಮಾಡಿದೆವು.

No comments:

Post a Comment